ಕ್ರೆಸೆಂಟ್ ಇಂಟರ್ನ್ಯಾಷನಲ್ ವಿದ್ಯಾ ಸಂಸ್ಥೆಯ 2024-25 ನೆ ಸಾಲಿನ ಶಾಲಾ ವಿದ್ಯಾರ್ಥಿ ಪಾರ್ಲಿಮೆಂಟ್ ಉದ್ಘಾಟನೆ
Wednesday, July 24, 2024
ಕಾಪು: ಶಾಲೆಯ ಸರ್ವಾಂಗೀಣ ಬೆಳವಣಿಗೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕರುಗಳ ಪಾತ್ರ ಬಹಳ ಅಮೂಲ್ಯವಾದದು, ಮಕ್ಕಳು ಭವಿಷ್ಯದಲ್ಲಿ ಉತ್ತಮ ಜವಾಬ್ದಾರಿಯುತ ಜೀವನವನ್ನು ನಡೆಸಲು ಶಾಲಾ ದಿನಗಳಲ್ಲಿಯೇ ವಿದ್ಯಾರ್ಥಿಗಳಿಗೆ ಜವಾಬ್ದಾರಿಯ ಹಂಚಿಕೆಯನ್ನು ಮಾಡಿ ನಾಯಕತ್ವದ ಗುಣಗಳನ್ನು ತಿಳಿಸಿಕೊಡುವುದು ಬಹಳ ಅತ್ಯಗತ್ಯವಾದ ಹಾಗೂ ಮೌಲ್ಯಯುತವಾದ ಕೆಲಸವಾಗಿದೆ ಎಂದು ಕಳತ್ತೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಜನಾರ್ಧನ ಆಚಾರ್ಯ ಹೇಳಿದ್ದಾರೆ.
ಬುಧವಾರ ಕಾಪು ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ವಿದ್ಯಾ ಸಂಸ್ಥೆಯ 24-25 ನೆ ಸಾಲಿನ ಶಾಲಾ ವಿದ್ಯಾರ್ಥಿ ಪಾರ್ಲಿಮೆಂಟನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯ ವೈಖರಿಯ ಕುರಿತು ಶ್ಲಾಘಿಸಿದರು.
RUBY, SAPPHIRE,AMBER ಹಾಗೂ EMERALD ಹೀಗೆ ವಿವಿಧ ತಂಡಗಳಿಂದ ಪಥಸಂಚಲನ ನಡೆಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕನಾಗಿ ಅದ್ನಾನ್, ವಿದ್ಯಾರ್ಥಿ ಉಪನಾಯಕಿಯಾಗಿ ರಿಮಾನ್ ಶಿಸ್ತು ಸಚಿವೆಯಾಗಿ ರಿದ, ಕ್ರೀಡಾ ಮಂತ್ರಿಯಾಗಿ ಬಿಬಿ ಆಯಿಷ, ಕಲೆ ಮತ್ತು ಸಂಸ್ಕೃತಿ ಸಚಿವ ಸ್ವಫ್ವಾನ್, ಆರೋಗ್ಯಮಂತ್ರಿಯಾಗಿ ರಝಿನ್ , ಪ್ರಾಂಶುಪಾಲರಾದ ಅಕ್ಬರ್ ಅಲಿ ಅವರಿಂದ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ಸಂಸ್ಥೆಯ ಅಧ್ಯಕ್ಷ ಶಂಶುದ್ದೀನ್ ಯೂಸಫ್ ಸಾಹೇಬ್ ಹಾಗೂ ಆಡಳಿತ ನಿರ್ದೇಶಕಿ ಶನಾಜ್ ಬೇಗಂ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಿಕ್ಷಕಿ ಜ್ಯೋತಿ ಮಂತ್ರಿಮಂಡಲದ ನಾಯಕರುಗಳ ಕಾರ್ಯ ಹಂಚಿಕೆಯನ್ನು ಮಾಡಿದರು. ಶಾಲಾ ಉಪಪ್ರಾಂಶುಪಾಲ ಗುರುದತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಮ್ರ ಶೇಕ್ ಹಾಗೂ ರೂಹಿ ಮರಿಯಂ ಪ್ರಾರ್ಥಿಸಿದರು. ಸಿಮ್ರ ಶೇಕ್ ಹಾಗೂ ಹಫ್ಸಇರ್ಷಾದ್ ಕಾರ್ಯಕ್ರಮ ನಿರೂಪಿಸಿದರು ನೂರಿನ್ ಸ್ವಾಗತಿಸಿ ಅಮಲ್ ಶೇಕ್ ವಂದಿಸಿದರು.