ನ್ಯಾಯಾಲಯದ ಆವರಣದಲ್ಲೇ ವಕೀಲೆಗೆ ಚಾಕು ಇರಿದ ದುಷ್ಕರ್ಮಿ
Tuesday, July 23, 2024
ಬೆಂಗಳೂರು: ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಹಾಲ್ ಒಂದರಲ್ಲಿ ಬೆಳಗ್ಗೆ ವಕೀಲೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದ ಆರೋಪಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಲ್ಲೆಗೊಳಗಾದ ವಕೀಲೆ ವಿಮಲಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಲಾ ಪರಿಸ್ಥಿತಿ ಗಂಭೀರವಾಗಿದೆ. ಜಯರಾಮರೆಡ್ಡಿ ಚಾಕು ಇರಿದ ಆರೋಪಿ ಆಗಿದ್ದಾನೆ.
ವಕೀಲೆ ವಿಮಲಾ ಮತ್ತು ಆರೋಪಿ ಜಯರಾಮ ಸ್ನೇಹಿತರಾಗಿದ್ದು, ಹೆಜ್ಜಾಲ ಬಳಿ ಇರುವ ಜಾಗದ ವಿಚಾರವಾಗಿ ಇಬ್ಬರಲ್ಲಿ ಕಿರಿಕ್ ಆಗಿತ್ತು. ಬಳಿಕ ವಕೀಲೆ ವಿಮಲಾ ಶೇಷಾದ್ರಿಪುರಂ ಠಾಣೆಯಲ್ಲಿ ಜಯರಾಮ ವಿರುದ್ಧ ದೌರ್ಜನ್ಯ ಮತ್ತು ಜಾಗದ ವಿಚಾರವಾಗಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಮಂಗಳವಾರ ಇಬ್ಬರೂ ವಿಚಾರಣೆಗೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಆರೋಪಿ ಜಯರಾಮ ಸ್ನೇಹಿತೆ, ವಕೀಲೆ ವಿಮಲಾಗೆ ಕೋರ್ಟ್ ಹಾಲ್ 1ರಲ್ಲಿ ಚಾಕು ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.