ಅರಣ್ಯ ಇಲಾಖೆಯಲ್ಲಿ ಕ್ರಾಂತಿ ಎಬ್ಬಿಸಿದ ಖಂಡ್ರೆ: ದೇಶದ ಇತರ ರಾಜ್ಯಗಳಿಗೆ ಮಾಡೆಲ್ ಆದ ಕರ್ನಾಟಕ ಅರಣ್ಯ ಇಲಾಖೆ!
ಕರ್ನಾಟಕದ ವೈಭವವನ್ನು ಪ್ರತಿನಿಧಿಸುತ್ತಾ, ರೇಷ್ಮೆಗೂಡಿನಿಂದ ತಯಾರಿಸಿದ ಹೂಮಾಲೆ ಮತ್ತು ನಮ್ಮ ಹೆಮ್ಮೆಯ ನಂದಿನಿ ಕ್ಷೀರೋತ್ಪನ್ನಗಳನ್ನು ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ನೀಡಿದ ಖಂಡ್ರೆ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ..
ಆಂಧ್ರಪ್ರದೇಶ ಮತ್ತು ಕರ್ನಾಟಕ ಅರಣ್ಯ ಇಲಾಖೆಗಳ ನಡುವಿನ ಅಂತರ ರಾಜ್ಯ ಸಮನ್ವಯ ಸಭೆ ವಿಜಯವಾಡದಲ್ಲಿ ನಡೆಯಿತು. ಅರಣ್ಯ ಮತ್ತು ಪರಿಸರ ಸಚಿವ ಶ್ರೀ ಈಶ್ವರ್ ಖಂಡ್ರೆ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಅರಣ್ಯ ಸಚಿವ ಶ್ರೀ ಪವನ್ ಕಲ್ಯಾಣ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆಯೊಂದಿಗೆ ಮಾನವ-ಪ್ರಾಣಿ ಸಂಘರ್ಷದ ಸಮಸ್ಯೆಗಳನ್ನು ಪರಿಹರಿಸಲು ಉಭಯ ರಾಜ್ಯಗಳ ಪರಸ್ಪರ ಸಹಕಾರವನ್ನು ಸುಧಾರಿಸಲು ಕ್ರಮ ಕೈಗೊಳ್ಳುವ ಕುರಿತು ಮಹತ್ವದ ಒಡಂಬಡಿಕೆಗೆ ಸಹಿ ಕೂಡ ಈ ಸಂಧರ್ಭದಲ್ಲಿ ಹಾಕಲಾಯಿತು.
ಈ ಸಭೆಯು ದಕ್ಷಿಣ ಭಾರತದ ಪರಿಸರ ಸಂರಕ್ಷಣೆಯ ಪ್ರಮುಖ ಭಾಗವಾಗಿ ಕಾರ್ಯ ನಿರ್ವಹಿಸಲಿದೆ.
*ದೂರ ದೃಷ್ಠಿಯ ಹರಿಕಾರ ಖಂಡ್ರೆ ಕಾರ್ಯವೈಖರಿಗೆ ಮನ ಸೋತಿದ್ದ ಪವನ್ ,*
ಇತ್ತೀಚೆಗೆ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಆಂಧ್ರ ಉಪಮುಖ್ಯಮಂತ್ರಿ , ಅರಣ್ಯ ಸಚಿವರಾದ ಪವನ್ ಕಲ್ಯಾಣ್ ಅವರು ಕರ್ನಾಟಕ ಅರಣ್ಯ ಇಲಾಖೆಯ ಕಾರ್ಯವೈಖರಿ ಬಗೆ ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದ್ದರು ಮಾತ್ರವಲ್ಲಾ ಮಾನವ ಹಾಗೂ ವನ್ಯಜೀವಿ ಸಂಘರ್ಷಗಳ ಬಗೆ ಕರ್ನಾಟಕ ಅರಣ್ಯ ಇಲಾಖೆಯ ಕ್ರಮ ಸಹಿತ ಇತರ ಕಾರ್ಯಕ್ರಮಗಳನ್ನೂ ಆಂಧ್ರ ಪ್ರದೇಶದಲ್ಲೂ ಚಾಲ್ತಿಗೆ ತರುವ ಬಗೇ ಮುಂದಡಿ ಇಡುವ ಬಗೇ ಮಾತಾಡಿದ್ದರೂ ಆ ಮೂಲಕ ಖಂಡ್ರೆ ನೇತೃತ್ವದ ಕರ್ನಾಟಕ ಅರಣ್ಯ ಇಲಾಖೆ ಇತರ ರಾಜ್ಯಗಳಿಗೂ ಮಾದರೀ ಆಗಿದೆ ಎನ್ನುವುದು ಕನ್ನಡಿಗರಿಗೇ ಹೆಮ್ಮೆಯ ಸಂಗತಿ.