ಹೃದಯವೈಶ್ಯಾಲ್ಯತೆಗೆ ರಾಯಭಾರಿಯಂತಿರುವ ವೈದ್ಯ ಡಾ.ವಿಶಾಲ್ !

ಹೃದಯವೈಶ್ಯಾಲ್ಯತೆಗೆ ರಾಯಭಾರಿಯಂತಿರುವ ವೈದ್ಯ ಡಾ.ವಿಶಾಲ್ !


ಮಂಗಳೂರು: ನಾಡಿಗೊಂದು ವೈದ್ಯರಿರೋ ಕಾಲವಲ್ಲವಿದು, ಈ ದಿನಗಳಲ್ಲಿ ಮನೆಗೊಬ್ಬ ವೈದ್ಯರಿದ್ದಾರೆ ಆದರೇ ಏನಂತೆ ? ವೈದ್ಯರಾದರೇ ಸಾಕೇ ? ಪವಿತ್ರ ವೃತ್ತಿ ಎಂದೇ ಪರಿಗಣಿಸಲ್ಪಟ್ಟಿರುವ ವೈದ್ಯ ವೃತ್ತಿಯಲ್ಲೂ ಹಲವು ನ್ಯೂನತೆಗಳು ಇದೆ. ಅದೆಷ್ಟೋ ಬಾರಿ ರೋಗಿಯ ಬಳಗಕ್ಕೂ ವೈದ್ಯಕೀಯ ಬಳಗಕ್ಕೂ ಸಂವಹನ ಅಂತರದಿಂದಲೋ ಅಥವಾ ಇನ್ನಿತರ ಕಾರಣದಿಂದಲೋ ಹಗ್ಗಜಗ್ಗಾಟದ ಸನ್ನಿವೇಶಗಳು ಎದುರಾಗಿರೋದು ಪತ್ರಿಕೆಗಳಲ್ಲಿ, ವಾರ್ತೆಗಳಲ್ಲಿ ನಾವು ಓದುತ್ತಾ ಕೇಳುತ್ತಾ ಇರುತ್ತೇವೆ.
ವೈದ್ಯಕೀಯ ರಂಗದಲ್ಲಿರೋ ಎಲ್ಲಾ ನಕಾರಾತ್ಮಕತೆಗಳು ಒಂದು ಕಡೆಯಾದರೇ ಅದೆಲ್ಲಾ ನಕರಾತ್ಮಕತೆಯನ್ನು ಹೊಗಲಾಡಿಸೋ ಶಕ್ತಿ ಇರೋ ಮಹಾನ್ ಮಾನವತವಾದಿ , ಸಂಯಮದ, ನಗುಮುಖದ ಸರದಾರ ಮಂಗಳೂರಿನ ಯುವ ಉದಯೋನ್ಮುಕ ವೈದ್ಯರೊಬ್ಬರ ಬಗ್ಗೆ ಆಗಿದೆ ಈ ಒಂದು ಬರವಣಿಗೆ..

"ಆಂಗ್ಲದಲ್ಲೊಂದು ನುಡಿ ಇದೆ " "All doctors treat, but a good doctor lets nature heal."
ಈವೊಂದು ನುಡಿಗೆ ಅನುಗುಣ ಎಂಬಂತೆ ಕಾರ್ಯಚರಿಸುವ ವೈದ್ಯರಾಗಿದ್ದಾರೆ ನಮ್ಮ ಕಥನದ ನಾಯಕ ಡಾ.ವಿಶಾಲ್ ಅವರು.

ಕಣಚೂರು ವೈದ್ಯಕೀಯ ಸಂಸ್ಥೆಯಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಡಾ.ವಿಶಾಲ್ ಅವರ ಕಾರ್ಯವೈಖರಿ ಅದು ಶುಶ್ರೂಷೆಯ ವಿಷಯದಲ್ಲಾಗಲಿ ಅಥವಾ ಗಂಭೀರ ಅವಸ್ಥೆಗಳಲ್ಲಿ ಕೆಲವೊಮ್ಮೆ ಆಸ್ಪತ್ರೆಯಲ್ಲಿ ಶುಶ್ರೂಷೆ ಮಾಡಿ ಪ್ರಯೋಜನವಿಲ್ಲಾ ಎಂಬಂತಹ ಸನ್ನಿವೇಶಗಳಲ್ಲಿ ಅಂತ್ಯ ಸಮಯದವರೆಗೂ ರೋಗಿಯನ್ನು ಮನೆಯಲ್ಲಿಟ್ಟು ನಿರ್ವಹಿಸುವ ಬಗೆ ಪರಿವಾರದವರಿಗೆ ನೀಡುವ ಸಲಹೆ ಸೂಚನೆಗಳಲ್ಲಿ ಅವರು ಕಠಿಬದ್ದರಾಗೋದು ಈ ಮೇಲಿನ ಆಂಗ್ಲ ನುಡಿಯಂತಾಗಿದೆ. ಅವರ ನಂಬಿಕೆ ಪೂರ್ತಿ ಅಡಕ ಆಗಿರೋದು ಪ್ರಕೃತಿಯ ಸೂತ್ರಕ್ಕೆ ಅನುಗುಣವಾಗಿ Everything will be alright ಎಂದಾಗಿದೆ.
ಸರಳ ಚಿಕಿತ್ಸಾ ಪದ್ದತಿಗೆ ಒತ್ತುಕೊಡುವ ಡಾ.ವಿಶಾಲ್ ಅವರು ಶಾಂತಚಿತ್ತತೆಯಿಂದ ಸಾಕಷ್ಟು ಸಮಯ ಬಳಸಿಕೊಂಡು , ನಾಡಿ ಮಿಡಿತದ ಮೂಲಕ ರೋಗಿಗಳನ್ನು ಪರೀಕ್ಷೆ ಮಾಡಿ ಅವಶ್ಯಕತೆ ಇದ್ದರೇ ಮಾತ್ರ ಹೆಚ್ಚಿನ ಟೆಸ್ಟ್ ಗೆ ಸೂಚಿಸುತ್ತಾರೆ ಹೊರತು ಅವಸರ ಅವಸರವಾಗಿ ಅನಗತ್ಯವಾಗಿ ಟೆಸ್ಟ್ ಬರೆದು ಕೊಟ್ಟು ಆ ಮೂಲಕ ತಪ್ಪು ಚಿಕಿತ್ಸಾ ಕ್ರಮ ಏಟಿಗೆ ಒಳಗಾಗಿ ತನ್ನಲ್ಲಿ ಬರುವವರ ಆರ್ಥಿಕತೆಗೆ ಹೊರೆ ಆಗಬಾರದು ಎಂದು ಜಾಗ್ರತೆಯನ್ನೂ ವಹಿಸುತ್ತಾರೆ. ಮಾತ್ರವಲ್ಲಾ ಸರ್ವ ವಿಧ ಮುಂಜಾಗ್ರತಾ ಕ್ರಮದ ಮೂಲಕ ಹೆಚ್ಚಿನ ರೀತಿಯಲ್ಲಿ ಜನರ ಬಗೆ ಕಾಳಜಿ ವಹಿಸುವ ಕೆಲಸವನ್ನು ಡಾ.ವಿಶಾಲ್ ಅವರು ಮಾಡುತ್ತಾರೆ ಎಂಬುವುದಾಗಿದೆ ಅವರ ಬಗೆ ಅರಿತವರ ಅಭಿಪ್ರಾಯ.

ಒಟ್ಟಿನಲ್ಲಿ ಹೇಳಬೇಕು ಎಂದಾದರೇ ಡಾ.ವಿಶಾಲ್ ಅವರದ್ದು ಜನಪರ ಕಾಳಜಿ, ಈ ಸಮಾಜದಲ್ಲಿ ಯಾರೂ ಹಕ್ಕು ವಂಚಿತರಾಗಬಾರದು ಎಲ್ಲರೂ ಗುಣಮಟ್ಟದ ಜೀವನಶೈಲಿಗೆ ಹಕ್ಕುದಾದರೂ ಎಂಬುವುದನ್ನು ಬಡವ ಶ್ರೀಮಂತನೆಂಬ ಬೇಧ ತೋರದೇ ಸಮಪ್ರಮಾಣದಲ್ಲಿ ಸೇವಾ ಶ್ರೇಷ್ಠತೆಯನ್ನು ತೋರುವ ಮೂಲಕ ಸಾರುತ್ತಾರೆ.
✍️
ವಿಶ್ವಾಕರ್ಷಿತ

Ads on article

Advertise in articles 1

advertising articles 2

Advertise under the article