ಐಪಿಎಲ್; ರಿಷಭ್ ಪಂತ್, ಕೆಎಲ್ ರಾಹುಲ್, ಅಯ್ಯರ್ ಸೇರಿದಂತೆ ಹಲವರನ್ನು ಕೈ ಬಿಟ್ಟ ತಂಡಗಳು; ಇಲ್ಲಿದೆ ಅಧಿಕೃತ ಪಟ್ಟಿ...
ಮುಂಬಯಿ: ಬಹುನಿರೀಕ್ಷಿತ ಐಪಿಎಲ್ ರಿಟೆನ್ಶನ್ ಲಿಸ್ಟ್ ಬಿಡುಗಡೆಯಾಗಿದೆ. ಫ್ರಾಂಚೈಸಿಗಳು ಒಂದೊಂದಾಗಿ ತಾವು ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಲಾರಂಭಿಸಿವೆ. ಅಚ್ಚರಿಯ ರೀತಿಯಲ್ಲಿ ಕೆಲವು ಖ್ಯಾತನಾಮ ಆಟಗಾರರನ್ನೇ ಫ್ರಾಂಚೈಸಿಗಳು ಕೈ ಬಿಟ್ಟಿದ್ದರೆ, ಇನ್ನು ಕೆಲವು ಆಟಗಾರರಿಗೆ ದುಬಾರಿ ಬೆಲೆ ಕೊಟ್ಟು ಉಳಿಸಿಕೊಂಡಿವೆ.
ವಿಶೇಷವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಕೈ ಬಿಟ್ಟಿದೆ. ಲಕ್ನೋ ಸೂಪರ್ ಜೈಂಟ್ಸ್ ಕೂಡ ಕೆಎಲ್ ರಾಹುಲ್ ವಿಚಾರದಲ್ಲಿ ಇದೇ ನಿಲುವು ತಳೆದಿದೆ. ಇನ್ನು ಕಳೆದ ಬಾರಿಯ ಚಾಂಪಿಯನ್ ಕೊಲ್ಕೊತ್ತಾ ನೈಟ್ ರೈಡರ್ಸ್ ತಮ್ಮ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನೇ ಉಳಿಸಿಕೊಂಡಿಲ್ಲ. ಹೀಗೆ ಹಲವು ಅಚ್ಚರಿ, ಹುಬ್ಬೇರಿಸುವ ತೀರ್ಮಾನಗಳನ್ನು ತಂಡದ ಮ್ಯಾನೇಜ್‌ಮೆಂಟ್‌ಗಳು ತೆಗೆದುಕೊಂಡಿವೆ.
ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ....
ಮುಂಬೈ ಇಂಡಿಯನ್ಸ್
ಜಸ್‌ಪ್ರೀತ್ ಬುಮ್ರಾ-18 ಕೋಟಿ ರೂ.
ಸೂರ್ಯಕುಮಾರ್ ಯಾದವ್-16.35 ಕೋಟಿ ರೂ.
ಹಾರ್ದಿಕ್ ಪಾಂಡ್ಯ-16.35 ಕೋಟಿ ರೂ.
ರೋಹಿತ್ ಶರ್ಮಾ-16.30 ಕೋಟಿ ರೂ.
ತಿಲಕ್ ವರ್ಮಾ-8 ಕೋಟಿ ರೂ.
ಸನ್‌ರೈಸರ್ಸ್ ಹೈದರಾಬಾದ್:
ಹೆನ್ರಿಚ್ ಕ್ಲಾಸೆನ್-23 ಕೋಟಿ ರೂ.
ಪ್ಯಾಟ್ ಕಮಿನ್ಸ್-18 ಕೋಟಿ ರೂ.
ಅಭಿಷೇಕ್ ಶರ್ಮಾ-14 ಕೋಟಿ ರೂ.
ಟ್ರಾವಿಸ್ ಹೆಡ್-14 ಕೋಟಿ ರೂ.
ನಿತೀಶ್ ಕುಮಾರ್ ರೆಡ್ಡಿ-6 ಕೋಟಿ ರೂ.
ಲಕ್ನೋ ಸೂಪರ್ ಜೈಂಟ್ಸ್:
ನಿಕೋಲಸ್ ಪೂರನ್-21 ಕೋಟಿ ರೂ.
ರವಿ ಬಿಷ್ಣೋಯ್-11 ಕೋಟಿ ರೂ.
ಮಯಾಂಕ್ ಯಾದವ್-11 ಕೋಟಿ ರೂ.
ಮೊಹ್ಸಿನ್ ಖಾನ್-4 ಕೋಟಿ ರೂ.
ಆಯುಷ್ ಬದೋನಿ-4 ಕೋಟಿ ರೂ.
ಪಂಜಾಬ್ ಕಿಂಗ್ಸ್:
ಶಶಾಂಕ್ ಸಿಂಗ್- 5.5 ಕೋಟಿ ರೂ.
ಪ್ರಭಾಸಿಮ್ರಾನ್ ಸಿಂಗ್ -4 ಕೋಟಿ ರೂ.
ರಾಜಸ್ಥಾನ್ ರಾಯಲ್ಸ್:
ಸಂಜು ಸ್ಯಾಮ್ಸನ್-18 ಕೋಟಿ ರೂ.
ಯಶಸ್ವಿ ಜೈಸ್ವಾಲ್-18 ಕೋಟಿ ರೂ.
ರಿಯಾನ್ ಪರಾಗ್-14 ಕೋಟಿ ರೂ.
ಧ್ರುವ್ ಜುರೆಲ್-14 ಕೋಟಿ ರೂ.
ಶಿಮ್ರಾನ್ ಹೆಟ್ಮೆಯರ್-11 ಕೋಟಿ ರೂ.
ಸಂದೀಪ್ ಶರ್ಮಾ-4 ಕೋಟಿ ರೂ.
ಚೆನ್ನೈ ಸೂಪರ್ ಕಿಂಗ್ಸ್:
ರುತುರಾಜ್ ಗಾಯಕ್ವಾಡ್-18 ಕೋಟಿ ರೂ.
ಮಥೀಶ ಪತಿರಣ-13 ಕೋಟಿ ರೂ.
ಶಿವಂ ದುಬೆ-12 ಕೋಟಿ ರೂ.
ರವೀಂದ್ರ ಜಡೇಜಾ-18 ಕೋಟಿ ರೂ.
ಮಹೇಂದ್ರ ಸಿಂಗ್ ಧೋನಿ-4 ಕೋಟಿ ರೂ.
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ-21 ಕೋಟಿ ರೂ.
ರಜತ್ ಪಾಟಿದಾರ್-11 ಕೋಟಿ ರೂ.
ಯಶ್ ದಯಾಳ್-5 ಕೋಟಿ ರೂ.
ಕೋಲ್ಕತ್ತಾ ನೈಟ್ ರೈಡರ್ಸ್:
ರಿಂಕು ಸಿಂಗ್-13 ಕೋಟಿ ರೂ.
ವರುಣ್ ಚಕ್ರವರ್ತಿ-12 ಕೋಟಿ ರೂ.
ಸುನಿಲ್ ನರೈನ್-12 ಕೋಟಿ ರೂ.
ಆಂಡ್ರೆ ರಸೆಲ್-12 ಕೋಟಿ ರೂ.
ಹರ್ಷಿತ್ ರಾಣಾ-4 ಕೋಟಿ ರೂ.
ರಮಣದೀಪ್ ಸಿಂಗ್-4 ಕೋಟಿ ರೂ.
ಡೆಲ್ಲಿ ಕ್ಯಾಪಿಟಲ್ಸ್:
ಅಕ್ಸರ್ ಪಟೇಲ್-16.50 ಕೋಟಿ ರೂ.
ಕುಲದೀಪ್ ಯಾದವ್-13.25 ಕೋಟಿ ರೂ.
ಟ್ರಿಸ್ಟಾನ್ ಸ್ಟಬ್ಸ್-10 ಕೋಟಿ ರೂ.
ಅಭಿಷೇಕ್ ಪೊರೆಲ್-4 ಕೋಟಿ ರೂ.
ಗುಜರಾತ್ ಟೈಟಾನ್ಸ್:
ರಶೀದ್ ಖಾನ್-18 ಕೋಟಿ ರೂ.
ಶುಭಮನ್ ಗಿಲ್-16.50 ಕೋಟಿ ರೂ.
ಸಾಯಿ ಸುದರ್ಶನ್-8.50 ಕೋಟಿ ರೂ.
ರಾಹುಲ್ ತೆವಾಟಿಯಾ-4 ಕೋಟಿ ರೂ.
ಶಾರುಖ್ ಖಾನ್-4 ಕೋಟಿ ರೂ.