
ದುಬೈ ಕರ್ನಾಟಕ ಸಂಘದಿಂದ ನವೆಂಬರ್ 10 ರಂದು 'ಆದರ್ಶ ದಂಪತಿ ದುಬೈ 2024' ಸ್ಪರ್ಧೆ; ಕಾರ್ಯಕ್ರಮ ನಡೆಸಿಕೊಡಲಿರುವ ಮಾಸ್ಟರ್ ಆನಂದ್
Monday, October 7, 2024
ದುಬೈ: ಕರ್ನಾಟಕ ಸಂಘ ದುಬೈ ಅರ್ಪಿಸುವ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತಾ ವಿಶೇಷ ಕಾರ್ಯಕ್ರಮ "ಆದರ್ಶ ದಂಪತಿ ದುಬೈ 2024" ಸ್ಪರ್ಧೆಯು ನವೆಂಬರ್ 10 ರಂದು ದುಬೈನಲ್ಲಿ ನಡೆಯಲಿದೆ.
ದುಬೈನ ಆಲ್ ಕಿಸೆಸ್ ಬೈರುತ್ ಸ್ಟ್ರೀಟ್'ನ ದಿ ಇಂಡಿಯನ್ ಅಕಾಡಮಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಿಮ್ಮ ದಾಂಪತ್ಯದ ಸುಮಧುರ ಭಾಂದವ್ಯದ ವೇದಿಕೆ ಇದಾಗಲಿದೆ. ಸಿನೆಮಾ ಜಗತ್ತಿನ ಶ್ರೇಷ್ಟ ಕಲಾವಿದ ಹಾಗು ನಿರೂಪಕ ಮಾಸ್ಟರ್ ಆನಂದ್ ಅವರು ನಡೆಸಿಕೊಡುವ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಗೆಲ್ಲುವಂತೆ ಕರ್ನಾಟಕ ಸಂಘ ದುಬೈಯ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಂಪತಿಗಳು ಹೆಸರು ನೋಂದಾಯಿಸಲು ಕೊನೆ ದಿನಾಂಕ: 30 ಅಕ್ಟೋಬರ್ 2024 ಆಗಿದೆ.
ನೋಂದಾವಣೆಗಾಗಿ ಈ ಲಿಂಕನ್ನು ಒತ್ತಿ...https://forms.gle/hgYt3fEH7pbjhDYb8
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : Vinutha +971558874594 / Brunda +971562162904