
'ಉಡುಪಿ-ಉಚ್ಚಿಲ ದಸರಾ': ಮಣಿಪಾಲದ ವಿದುಷಿ ಪವನ ಬಿ.ಆಚಾರ್ ತಂಡದವರಿಂದ 'ಶತವೀಣಾವಲ್ಲರಿ'; ಜನರಿಗೆ ಮುದನೀಡಿದ ಏಕಕಾಲದಲ್ಲಿ ನೂರೊಂದು ವೀಣೆಗಳ ವಾದನ
Monday, October 7, 2024

ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 'ಉಡುಪಿ-ಉಚ್ಚಿಲ ದಸರಾ'ದಲ್ಲಿ ಇಂದು ಹತ್ತಲವು ಕಾರ್ಯಕ್ರಮಗಳು ನಡೆದವು.
ಅದರಲ್ಲಿ ವಿಶೇಷವಾಗಿ ವಿದುಷಿ ಪವನ ಬಿ.ಆಚಾರ್ ಮಣಿಪಾಲ ಅವರಿಂದ ಶತವೀಣಾವಲ್ಲರಿ– ಏಕಕಾಲದಲ್ಲಿ ನೂರೊಂದು ವೀಣೆಗಳ ವಾದನ ಕಾರ್ಯಕ್ರಮ ನಡೆಯಿತು.
ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, ಅಂಬಿಕಾ ಕಲ್ಪೋಕ್ತ ಪೂಜೆ ನಡೆಯಿತು. ಬೆಳಗ್ಗೆ ಭಜನಾ ಕಾರ್ಯಕ್ರಮ ಶಾಲಿನಿ ಜಿ.ಶಂಕರ್ ಸಭಾಂಗಣದಲ್ಲಿ ನಡೆಡಿದ್ದು, ಮಧ್ಯಾಹ್ನ 2ರಿಂದ ಮೊಗವೀರ ಭವನದಲ್ಲಿ ಪುರುಷರು, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಬಳಿಕ ಸ್ಥಳೀಯ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಮಂಗಳೂರಿನ ಜ್ಞಾನ ಐತಾಳ್ ನೇತೃತ್ವದ ಮಕ್ಕಳ ಸಾಂಸ್ಕೃತಿಕ ತಂಡದಿಂದ ಹೆಜ್ಜೆನಾದ ಪ್ರದರ್ಶನಗೊಂಡಿತು.