ಸುಳ್ಯದಲ್ಲಿ ಡಿ.ಐ.ಅಬೂಬಕರ್ ಕೈರಂಗಳರಿಗೆ ಸನ್ಮಾನ
Saturday, November 30, 2024
ಮುಂಜಾನೆ ನುಡಿಯಲ್ಲಿ ಸಂಚಲನ ಸೃಷ್ಟಿಸಿದ "ಶುಭಮುಂಜಾನೆ" ನಿತ್ಯೋಕ್ತಿಯ ಸಾಧಕರಾದ ಖ್ಯಾತ ಬರಹಗಾರ, ಸಾಹಿತ್ಯ ಪ್ರೋತ್ಸಾಹಕ ಡಿ. ಐ. ಅಬೂಬಕರ್ ಕೈರಂಗಳ ಅವರಿಗೆ ಇಂದು ಸುಳ್ಯದ ಅನ್ಸಾರಿಯಾ ಸಂಸ್ಥೆಯು ಪುರಸ್ಕಾರ ನೀಡಿ ಗೌರವಿಸಿತು.
ಪ್ರಸಿದ್ಧ ಧಾರ್ಮಿಕ, ಸಾಮಾಜಿಕ ಸಂಸ್ಥೆಯಾದ ಸುಳ್ಯದ ಅನ್ಸಾರಿಯಾ ಸಂಸ್ಥೆಯ ನೂತನ ಆಡಿಟೋರಿಯಂ ಉದ್ಘಾಟನಾ ಸಮಾರಂಭದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಿ. ಐ. ರವರ " ಶುಭ ಮುಂಜಾನೆ" 800 ರ ಗಡಿ ದಾಟಿ 900 ಕ್ಕೆ ನಿಕಟವಾಗಿರುವ ಈ ಸಂದರ್ಭದ ಅಂಗವಾಗಿತ್ತು ಈ ಪುರಸ್ಕಾರ. ಈ ಸಂದರ್ಭದಲ್ಲಿ ಕಣಚೂರ್ ಸಮೂಹ ಶಿಕ್ಷಣ ಸಂಸ್ಥೆ ಇದರ ಮಾಲಕರಾದ ಡಾ. ಹಾಜಿ ಯು ಕೆ ಮೋನು ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವಾ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ , ಮೀಫ್ ಉಪಾಧ್ಯಕ್ಷ ಮುಸ್ತಫಾ ಸುಳ್ಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.