ಲಂಡನ್‌ನಲ್ಲಿ 3.4 ಕೋಟಿ ರೂ.ಗೆ ಹರಾಜಾದ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಖಡ್ಗ!

ಲಂಡನ್‌ನಲ್ಲಿ 3.4 ಕೋಟಿ ರೂ.ಗೆ ಹರಾಜಾದ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಖಡ್ಗ!

ಲಂಡನ್: ಮೈಸೂರು ಹುಲಿ ಟಿಪ್ಪು ಸುಲ್ತಾನ್‌ಗೆ ಸೇರಿದ ಖಡ್ಗವೊಂದು ಲಂಡನ್‌ನಲ್ಲಿ 3.4 ಕೋಟಿ ರೂ.ಗೆ ಹರಾಜಾಗಿದೆ. ಈ ಖಡ್ಗ ಟಿಪ್ಪು ಸುಲ್ತಾನ್‌ನ ವೈಯಕ್ತಿಕ ಶಸ್ತ್ರಗಾರದ ಭಾಗವಾಗಿತ್ತು.

ಬೋನ್‌ಹ್ಯಾಮ್‌ ಹರಾಜು ಸಂಸ್ಥೆ ಈ ಮಾಹಿತಿಯನ್ನು ಹಂಚಿಕೊಂಡಿದೆ. ಟಿಪ್ಪು 1799 ರಲ್ಲಿ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಸೋತ ನಂತರ ಆತನ ಖಡ್ಗವನ್ನು ಆಗಿನ ಬ್ರಿಟಿಷ್‌ ಸೇನೆಯ ಕ್ಯಾಪ್ಟನ್‌ ಜೇಮ್ಸ್‌ ಆಂಡ್ರ್ಯೂ ಡಿಕ್‌ ಎಂಬಾತನಿಗೆ ಉಡುಗೊರೆಯಾಗಿ ನೀಡಿದ್ದರು. 

ಈ ಖಡ್ಗದ ಮೂಲವನ್ನು ಸೆರಿಂಗಪಟ್ಟಂ ಕದನದಲ್ಲಿ ಗುರುತಿಸಬಹುದು. ‘ಸ್ಟೀಲ್ ತಲ್ವಾರ್’ ಮೈಸೂರಿನ ವಿಶಿಷ್ಟ ಲಕ್ಷಣವಾದ ‘ಬುಬ್ರಿ (ಟೈಗರ್ ಸ್ಟ್ರೈಪ್)’ ಅಲಂಕಾರವನ್ನು ಖಡ್ಗ ಹೊಂದಿದೆ.

ಕತ್ತಿಯನ್ನು ಉಡುಗೊರೆಯಾಗಿ ಪಡೆದಿದ್ದ ಡಿಕ್ 75 ನೇ ಹೈಲ್ಯಾಂಡ್ ರೆಜಿಮೆಂಟ್ ಆಫ್ ಫೂಟ್‌ನಲ್ಲಿ ಸೆರಿಂಗಪಟ್ಟಂನಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಿದ್ದರು. ಯುದ್ಧದ ನಂತರ ಟಿಪ್ಪುವಿನ ದೇಹವನ್ನು ಹುಡುಕುವಲ್ಲಿ ಅವನ ರೆಜಿಮೆಂಟ್ ಸಹಾಯ ಮಾಡಿತ್ತು.

Ads on article

Advertise in articles 1

advertising articles 2

Advertise under the article