ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಳಿ ಪ್ರಶ್ನೆ ಕೇಳಿ!  ರೇಣುಕಾಚಾರ್ಯ ವಿರುದ್ಧ ಯತ್ನಾಳ್ ವಾಗ್ದಾಳಿ

ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಳಿ ಪ್ರಶ್ನೆ ಕೇಳಿ! ರೇಣುಕಾಚಾರ್ಯ ವಿರುದ್ಧ ಯತ್ನಾಳ್ ವಾಗ್ದಾಳಿ

ವಿಜಯಪುರ: ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಳಿ ಪ್ರಶ್ನೆ ಕೇಳಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದರು.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ರೇಣುಕಾಚಾರ್ಯ ಹಿಗ್ಗಾಮುಗ್ಗಾ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಲಪುಟ್ ನನ್ ಮಕ್ಕಳ ಯಾವುದೇ ಪ್ರತಿಕ್ರಿಯೆ ಕೇಳಬೇಡಿ. ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಳಿ ಪ್ರಶ್ನೆ ಕೇಳಿ ಎಂದು ಕಿಡಿಕಾರಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಮೇಲೆ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲು ಸಚಿವ ಸಂಪುಟದಲ್ಲಿ ಈಗ ಒಪ್ಪಿಗೆ ನೀಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕಾಂಗ್ರೆಸ್ ಸರ್ಕಾರ ಮಾಡಿದ್ದು ಏನು? ಒಂದೂವರೆ ವರ್ಷದ ಆಡಳಿತದ ಬಳಿಕ ಸಿದ್ದರಾಮಯ್ಯ ಈಗ ಏಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಮುಡಾ ಹಗರಣ ಈಗ ಗಂಭೀರತೆ ಪಡೆದುಕೊಂಡಿದೆ. ಇಡಿಯವರು ತನಿಖೆ ಮಾಡುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದ್ದೇವೆ. ಇಷ್ಟು ದಿನ ಹೊಂದಾಣಿಕೆಯಿಂದ ಇದ್ದರು. ನಮ್ಮದನ್ನು ನೀವು ಮುಚ್ಚಿಡುವುದು, ನಿಮ್ಮದನ್ನು ನಾವು ಮುಚ್ಚಿಡುವುದು ಎಂಬ ಒಪ್ಪಂದವಿತ್ತು. ಆ ಒಪ್ಪಂದ ಈಗ ಮುರಿದುಹೋಗಿದೆ. ಹಾಗಾಗಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ನಿವೃತ್ತಿಯಾಗಿರುವ ಯಡಿಯೂರಪ್ಪ ಅವರ ಮೇಲೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದರು

Ads on article

Advertise in articles 1

advertising articles 2

Advertise under the article