ದ.ಕ.ಬ್ಯಾರಿ ಜಿಲ್ಲಾ ಪ್ರತಿನಿಧಿ ಸಮಾವೇಶ ಹಿನ್ನೆಲೆ; ಗಣ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ ಅಬ್ದುಲ್ ಅಝೀಝ್ ಬೈಕಂಪಾಡಿ ನೇತೃತ್ವದ ನಿಯೋಗ

ದ.ಕ.ಬ್ಯಾರಿ ಜಿಲ್ಲಾ ಪ್ರತಿನಿಧಿ ಸಮಾವೇಶ ಹಿನ್ನೆಲೆ; ಗಣ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ ಅಬ್ದುಲ್ ಅಝೀಝ್ ಬೈಕಂಪಾಡಿ ನೇತೃತ್ವದ ನಿಯೋಗ

ಮಂಗಳೂರು: ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ಜನವರಿ 8 ನೇ ತಾರೀಕುವಿನಂದು ಮಂಗಳೂರು ಪುರಭವನದಲ್ಲಿ ಆಯೋಜಿಸಲ್ಪಡುವ ಉದ್ದೇಶಿತ ದ.ಕ.ಬ್ಯಾರಿ ಜಿಲ್ಲಾ ಪ್ರತಿನಿಧಿ ಸಮಾವೇಶ ಕಾರ್ಯಕ್ರಮದ ಪೂರ್ವ ಸಿದ್ಧತೆ ಮತ್ತು ಪ್ರಚಾರ ಕಾರ್ಯ ಇತ್ಯಾದಿ ರೂಪು ರೇಷೆಗಳ ಬಗ್ಗೆ ಇಂದು ಅಖಿಲ ಭಾರತ ಬ್ಯಾರಿ ಮಹಾ ಸಭಾದ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಬೈಕಂಪಾಡಿ ನೇತೃತ್ವದ ನಿಯೋಗ, ಉಳ್ಳಾಲ ಸಯ್ಯದ್ ಮದನಿ ದರ್ಗಾ ಮತ್ತು ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಹನೀಫ್ ಹಾಜಿ, ಮತ್ತಿತರನ್ನು ಭೇಟಿ ಮಾಡಿ ಸಲಹೆ ಸಮಾಲೋಚನೆ ನಡೆಸಲಾಯಿತು. 

ಪ್ರಚಾರರಾರ್ಥ ತಾರೀಕು 20 ನೇ ಡಿಸೆಂಬರ್ 2024 ರಂದು ಸಂಜೆ ಉಳ್ಳಾಲದಲ್ಲಿ ಕರಪತ್ರ ಬಿಡುಗಡೆ ಮತ್ತು ಅನಾವರಣ ಕಿರು ಕಾರ್ಯಕ್ರಮ ನಡೆಯಲಿದೆ.

ನಿಯೋಗದಲ್ಲಿ ಅಬ್ದುಲ್ ಜಲೀಲ್ ಕೃಷ್ಣಾಪುರ, ಅಶ್ರಫ್ ಬದ್ರಿಯಾ,ಹಮೀದ್ ಕಿನ್ಯ, ಅಬ್ದುಲ್ ರಹಿಮಾನ್ ಕೋಡಿಜಾಲ್, ಅಬ್ದುಲ್ ಖಾದರ್ ಇಡ್ಮಾ ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article