ಇಂದು ಉಡುಪಿಯಲ್ಲಿ 'ಚೋಯ್ಸ್ ಗೋಲ್ಡ್' ಚಿನ್ನಾಭರಣದ ನೂತನ ಮಳಿಗೆ ಶುಭಾರಂಭ; ಗ್ರಾಹಕರಿಗೆ ನೀಡುತ್ತಿದೆ ಭರ್ಜರಿ ಆಫರ್!
ಉಡುಪಿ: ಸ್ವರ್ಣ ಉದ್ಯಮದಲ್ಲಿ ತನ್ನದೇ ಛಾಪು ಮೂಡಿಸಿ ಅಪಾರ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿರುವ 'ಚೋಯ್ಸ್ ಗೋಲ್ಡ್' ಚಿನ್ನಾಭರಣದ 7ನೇ ವಿಶಾಲವಾದ ನೂತನ ಮಳಿಗೆ ಇಂದು (ಡಿಸೆಂಬರ್ 2ರಂದು) ಉಡುಪಿಯ ಜಾಮಿಯಾ ಮಸೀದಿ ರಸ್ತೆಯ ಮಾರುತಿ ವೀಥಿಕಾದ ವಿ.ಕೆ.ಪ್ಯಾರಡೈಸ್ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.
ಇಂದು ಬೆಳಗ್ಗೆ 11 ಗಂಟೆಗೆ ನೂತನ ಮಳಿಗೆ ಉದ್ಘಾಟನೆಗೊಳ್ಳಲಿದ್ದು, ಸಯ್ಯದ್ ಶಮೀಮ್ ತಂಗಳ್ ಕುಂಬೋಳ್, ನಾಗಪಾತ್ರಿ, ಜೋತಿಷಿ ಶ್ರೀ ನಾಗನಂಧ ವಾಸುದೇವ ಆಚಾರ್ಯ, ಪೆರಂಪಳ್ಳಿ ಫಾತಿಮಾ ಚುರ್ಚಿನ ಧರ್ಮಗುರು ರೇ.ಫಾ.ವಿಶಾಲ್ ಲೋಬೊ, ಮಂಜೇಶ್ವರದ ಸಯ್ಯದ್ ಪೂಕುಂಚಿ ಕೋಯಾ ತಂಗಳ್ ಅವರು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಹಾಜಿ ಅಝರ್ ಫೈಝಿ ಬೊಳ್ಳೂರ್ ಉಸ್ತಾದ್, Ani Trading Company ಛೇರ್ಮನ್ ಅಬ್ದುಲ್ ಲತೀಫ್ ಗುರುಪುರ, ಉಡುಪಿ ಕಾಂಚನ್ ಹೋಂಡಾ ಮೋಟಾರ್ ಎಂಡಿ ಪ್ರಸಾದ್ ರಾಜ್ ಕಾಂಚನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೆರೂರ್, ಉಡುಪಿ ವಿ.ಕೆ.ಪ್ಯಾರಡೈಸ್ ಎಂಡಿ ಕರುಣಾಕರ್ ಎಂ. ಶೆಟ್ಟಿ, ನಗರ ಸಭಾ ಸದಸ್ಯ ಅಮೃತ ಕೃಷ್ಣ ಮೂರ್ತಿ ಭಾಗವಹಿಸಲಿದ್ದಾರೆ.
'ಚೋಯ್ಸ್ ಗೋಲ್ಡ್', ಇದೀಗ ಉಡುಪಿಯ ಗ್ರಾಹಕರಿಗೆ 100%ರಷ್ಟು 916 BIS-HUID ಹಾಲ್ ಮಾರ್ಕ್ ಚಿನ್ನಾಭರಣ, ಪ್ರಮಾಣೀಕೃತ ವಜ್ರಾಭರಣ, ನವನವೀನ ಬೆಳ್ಳಿಯ ಆಭರಣ, ವಿವಿಧ ಬ್ರಾಂಡಿನ ವಾಚ್'ಗಳ ವಿಶಾಲ ಸಂಗ್ರಹದೊಂದಿಗೆ ಶುಭಾರಂಭಗೊಳ್ಳಲಿದೆ.
ಉಡುಪಿಯಲ್ಲಿ ತನ್ನ ವಿಶಾಲವಾದ ನೂತನ ಮಳಿಗೆಯಾ ಶುಭಾರಂಭದ ಹಿನ್ನೆಲೆಯಲ್ಲಿ ಭರ್ಜರಿ ಆಫರ್'ಗಳನ್ನು ನೀಡುತ್ತಿದೆ. ಗ್ರಾಹಕರು ಖರೀದಿಸುವ ಎಲ್ಲ ಚಿನ್ನಗಳ ಮೇಲಿನ ಮೇಕಿಂಗ್ ಚಾರ್ಜ್(ತಯಾರಿಕಾ ಶುಲ್ಕ)ನಲ್ಲಿ 50%ರಷ್ಟು ಡಿಸ್ಕೌಂಟ್ ಸಿಗಲಿದೆ.
ಅದರಲ್ಲೂ ವಿಶೇಷವಾಗಿ ಮದುವೆ ಖರೀದಿಗೆ ಮೇಕಿಂಗ್ ಚಾರ್ಜ್(ತಯಾರಿಕಾ ಶುಲ್ಕ)ನ ಮೇಲೆ 7.8%ರಷ್ಟು ವಿಶೇಷ ರಿಯಾಯಿತಿ ದೊರಕಲಿದೆ. ಡೈಮಂಡ್ ಪರ್ ಕ್ಯಾರಟ್ ಜುವೆಲ್ಲರಿ ಖರೀದಿಗೆ ಗ್ರಾಹಕರಿಗೆ ಬರೋಬರಿ 21ಸಾವಿರ ಡಿಸ್ಕೌಂಟ್ ಸಿಗಲಿದೆ.
ಸ್ವರ್ಣ ನಿಧಿ ಸ್ಕೀಮಿಗೆ ಸೇರುವ ಗ್ರಾಹಕರಿಗೆ ಯಾವುದೇ ಮೇಕಿಂಗ್ ಚಾರ್ಜ್ ಇರದೇ ಚಿನ್ನಾಭರಣ ಸಿಗುತ್ತೆ. ಉದ್ಘಾಟನೆ ದಿನ ಶೋರೂಮ್'ಗೆ ಭೇಟಿ ನೀಡುವ ಅದೃಷ್ಟವಂತ ಗ್ರಾಹಕರಿಗೆ ಪ್ರತಿ ಗಂಟೆಗೊಂದು ಗೋಲ್ಡ್ ಕಾಯಿನ್ ಗೆಲ್ಲುವ ಅವಕಾಶವೂ ಇದೆ ಎಂದು 'ಚೋಯ್ಸ್ ಗೋಲ್ಡ್'ನ ಆಡಳಿತ ಪಾಲುದಾರರಾದ ಅಶ್ರಫ್ ಎನ್ ಹಾಗು ಶಹೀರ್ ಬಿಎಮ್. ತಿಳಿಸಿದ್ದಾರೆ..