ಡಿಸೆಂಬರ್‌ 1 ರಿಂದಲೇ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ದರ ಹೆಚ್ಚಳ!

ಡಿಸೆಂಬರ್‌ 1 ರಿಂದಲೇ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ದರ ಹೆಚ್ಚಳ!


ಹೊಸದಿಲ್ಲಿ: ಪ್ರತಿ ತಿಂಗಳಿನಂತೆ ಈ ಬಾರಿಯೂ 1 ತಾರೀಖು ಎಲ್‌ಪಿಜಿ ಸಿಲಿಂಡರ್‌ ದರ ಪರಿಷ್ಕರಣೆಯಾಗಿದೆ. ಡಿಸೆಂಬರ್‌ನಲ್ಲಿ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ ದರವನ್ನು ಏರಿಕೆ ಮಾಡಿವೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್‌ ದರವು 16.5 ರೂಪಾಯಿ ಹೆಚ್ಚಳವಾಗಿದೆ.

 ಸಮಾಧಾನಕರ ಸಂಗತಿ ಎಂದರೆ, ಗೃಹ ಬಳಕೆಯ 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ಬದಲಾವಣೆಯಾಗದೇ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಇನ್ನು ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ನವೆಂಬರ್‌ನಲ್ಲಿ 1802 ರೂ.ಗೆ ಲಭ್ಯವಿತ್ತು. ಭಾನುವಾರದಿಂದಲೇ ಬೆಲೆ 1818.50 ರೂ ಆಗಿದೆ. ಉಳಿದಂತೆ ಕೋಲ್ಕತ್ತಾದಲ್ಲಿ 1927 ರೂ., ಮುಂಬೈನಲ್ಲಿ 1771 ರೂ., ಚೆನ್ನೈನಲ್ಲಿ 1980.50 ರೂ., ಪಟ್ನಾದಲ್ಲಿ 2072 ರೂ. ಬೆಂಗಳೂರಿನಲ್ಲಿ 1895 ರೂ. ಆಗಿದೆ.

ವಾಣಿಜ್ಯ ಸಿಲಿಂಡರ್ ದರ ಕಳೆದ ತಿಂಗಳು ದರ 62 ರೂಪಾಯಿ ಹೆಚ್ಚಳವಾಗಿತ್ತು. ಈಗ ಮತ್ತೆ ಹೆಚ್ಚಳವಾಗಿದೆ. ಇದರಿಂದ ಹೋಟೆಲ್‌, ಸಣ್ಣ ಕೈಗಾರಿಕೆಗಳು, ಆಟೋ ಚಾಲಕರು, ವರ್ಕ್‌ಶಾಪ್‌ ಸೇರಿದಂತೆ ಅನೇಕ ಉದ್ಯಮಗಳಿಗೆ ಹೊಡೆತ ಬೀಳಲಿದೆ.

ಬೆಂಗಳೂರಿನಲ್ಲಿ ಯಾವ ಸಿಲಿಂಡರ್‌ ದರ ಎಷ್ಟಿದೆ?

ಗೃಹಬಳಕೆ (14.2 ಕೆ ಜಿ) - 805 ರೂ.

ವಾಣಿಜ್ಯ ಬಳಕೆ (19 ಕೆ ಜಿ ) - 1895 ರೂ.

ಗೃಹ ಬಳಕೆ ( 5 ಕೆ ಜಿ) - 300 ರೂ.

ಕಳೆದ ವಾರ ಸಿಎನ್‌ಜಿ ದರ ಹೆಚ್ಚಳ

ಮುಂಬಯಿ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ದರವನ್ನು ಅನಿಲ ಸಂಸ್ಥೆಗಳು ಪ್ರತಿ ಕೆ.ಜಿಗೆ 2 ರೂ. ಏರಿಸಿದ್ದವು. ಆದರೆ ಚುನಾವಣೆ ಹೊಸ್ತಿಲಿನಲ್ಲಿರುವ ದಿಲ್ಲಿಯಲ್ಲಿ ಬೆಲೆ ಏರಿಕೆ ಮಾಡಿಲ್ಲ. ಚುನಾವಣೆ ಮುಗಿದ ನಂತರ ದರ ಏರಿಕೆ ಪ್ರಹಾರವಾಗಲಿದೆ. ಇಂದ್ರಪ್ರಸ್ಥ ಗ್ಯಾಸ್‌ ಲಿಮಿಟೆಡ್‌, ಮಹಾನಗರ ಗ್ಯಾಸ್‌ ಲಿಮಿಟೆಡ್‌ (ಎಂಜಿಎಲ್‌) ಸೇರಿದಂತೆ ಹಲವು ಕಂಪನಿಗಳು ಸಿಎನ್‌ಜಿ ದರವನ್ನು ಹೆಚ್ಚಿಸಿವೆ. ಇದರಿಂದ ಮುಂಬಯಿನಲ್ಲಿ ಪ್ರತಿ ಕೆ ಜಿ ಸಿಎನ್‌ಜಿ ದರ 77ರೂ. ಆಗಿದೆ. ದಿಲ್ಲಿಯಲ್ಲಿ 75.09 ರೂ. ಇದೆ.

ಮಹಾನಗರ ಗ್ಯಾಸ್‌ ಲಿಮಿಟೆಡ್‌, ಅದಾನಿ ಟೋಟಲ್‌ ಗ್ಯಾಸ್‌ ಲಿಮಿಟೆಡ್‌ ಸೇರಿದಂತೆ ಹಲವು ಕಂಪನಿಗಳಿಗೆ ತಯಾರಿಕಾ ವೆಚ್ಚ ಶೇಕಡಾ 20 ರಷ್ಟು ಹೆಚ್ಚಾದರೂ ದರವನ್ನು ಪರಿಷ್ಕರಿಸಿರಲಿಲ್ಲ. ಮಹಾ ಚುನಾವಣೆ ಮುಕ್ತಾಯ ಕಾಣುತ್ತಿದ್ದಂತೆ ದರ ಏರಿಸಿವೆ. ರಾಜ್ಯಗಳ ತೆರಿಗೆಗೆ ಅನುಸಾರವಾಗಿ ಸಿಎನ್‌ಜಿ ದರ ವ್ಯತ್ಯಾಸವಾಗುತ್ತದೆ.

Ads on article

Advertise in articles 1

advertising articles 2

Advertise under the article