ಬಿವೈ ವಿಜಯೇಂದ್ರ ಸರ್ವಾಧಿಕಾರಿಯಾಗಲು ಹೊರಟಿದ್ದಾರೆ; ನಾನು ಯಾರಿಗೂ ಅಂಜೋದಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್

ಬಿವೈ ವಿಜಯೇಂದ್ರ ಸರ್ವಾಧಿಕಾರಿಯಾಗಲು ಹೊರಟಿದ್ದಾರೆ; ನಾನು ಯಾರಿಗೂ ಅಂಜೋದಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್

ಹೊಸ ದಿಲ್ಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸರ್ವಾಧಿಕಾರಿಯಾಗಲು ಹೊರಟಿದ್ದಾರೆ. ಅಪ್ಪ- ಮಗ ಅಂಜಬಹುದು ಆದರೆ ನಾನು ಯಾರಿಗೂ ಅಂಜೋದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. 

ದೆಹಲಿಯಲ್ಲಿ ಸೋಮವಾರ ಮಾತನಾಡಿದ ಅವರು, ನನಗೆ ನೋಟೀಸ್ ಅಧಿಕೃತವಾಗಿ ಬಂದಿಲ್ಲ. ನೋಟಿಸ್ ಬಂದರೆ ಅದಕ್ಕೆ ಉತ್ತರ ಕೊಡ್ತೀನಿ. ಈಗಾಗಲೇ 3 ಬಾರಿ ನೋಟಿಸ್‌ ಕೊಟ್ಟಿದ್ದಾರೆ. ಅದೇ ರೀತಿ ಇದೀಗ ಬಂದಿದೆ ಅಂತ ಅಂದುಕೊಂಡಿದ್ದೇನೆ ಎಂದರು.

ನನಗೆ ಮೇಲ್ ನಲ್ಲಿ ಬಂದಿಲ್ಲ, ಪೋಸ್ಟ್ ನಲ್ಲಿ ಬಂದಿಲ್ಲ. ಈಗ ಬಂದಿರುವ ನೋಟಿಸ್‌ ನಕಲಿ ಎಂದು ಅಂದಿಕೊಂಡಿದ್ದೇನೆ. ಬಿಜೆಪಿ ನಲ್ಲಿ ವಂಶವಾದ ಇರಬಾರದು ಅಂತ ಇದೆ. ವಂಶವಾದ ವಿಚಾರವಾಗಿ ವಿಜಯೇಂದ್ರ ಪರವಾಗಿ ತಿದ್ದುಪಡಿ ಆಗಿದ್ರೆ ಅದರ ಬಗ್ಗೆ ಕೇಳ್ತಿನಿ ಎಂದು ತಿರುಗೇಟು ನೀಡಿದರು.

ವಕ್ಫ್ ಬಗ್ಗೆ ಹೊರಟ ಮಾಡಬಾರದಾ.? ಹಿಂದುತ್ವದ ಬಗ್ಗೆ ಹೋರಾಟ ಮಾಡಬಾರದಾ.? ವಿಜಯೇಂದ್ರ ಏನು ಕೆಲಸ ಮಾಡ್ತಾ ಇಲ್ಲಾ ರೀ ಡಿಕೆಶಿ ಆರೋಪ ಬಂದಾಗ ಈತ ಒಂದು ಮಾತನ್ನು ಹೇಳಿಲ್ಲ. ವಿಜಯೇಂದ್ರ ವಿರುದ್ಧ ಹೊರಟ ನಿರಂತರವಾಗಿರುತ್ತೆ ಎಂದು ಎಚ್ಚರಿಕೆ ನೀಡಿದರು.

ವಿಜಯೇಂದ್ರ ಬಹಳ ಸಣ್ಣ ಹುಡುಗ ಇದ್ದಾನೆ. ಯಡಿಯೂರಪ್ಪ ರೀತಿ ಬಚ್ಚಾ ಲೀಡರ್ ಅಲ್ಲ ನಾನು . ನಾನು ಯಾವುದಕ್ಕೂ ಅಂಜೋದಿಲ್ಲ.ನನಗೆ ನೋಟಿಸ್ ಬಂದರೆ ನಾನು ಅಂಜೋದಿಲ್ಲ. ಅವರು ಅಂಜಬೇಕು, ನಾನು ಅಂಜೋದಿಲ್ಲ ಅಪ್ಪ. ಮಗ ಅಂಜಬೇಕು, ನಾನು ಅಂಜೋದಿಲ್ಲ ಎಂದು ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ನನಗೆ ಶೋಕಾಸ್ ನೋಟಿಸ್ ಕೊಟ್ಟರೆ ಉತ್ತರ ಕೊಡಲು 10 ದಿನ ಗಡುವು ಬೇಡ. ನನ್ನ ಬಳಿ ಉತ್ತರ ಸಿದ್ದವಾಗಿದೆ. ನಾನು ಎರ್ವಿಡೇ ಬ್ಯಾಟರಿ ಇದ್ದಂಗೆ ಆನ್ ಮಾಡಿದ ಕೂಡಲೇ ಚಾಲು ಆಗುತ್ತೇನೆ ಎಂದು ತಿರುಗೇಟು ನೀಡಿದರು.

ಬಿಜೆಪಿಯಲ್ಲಿ ನಮ್ಮದು ಜನಪರ ಹೋರಾಟ. ಅವರದ್ದು ಕುಟುಂಬ ಶಾಹಿ. ಅಪ್ಪಾಜಿ ಅನ್ನುವ ಮಕ್ಕಳು ಅವರ ಪರ. ಸಮಸ್ತ ಹಿಂದೂಗಳು, ಬಿಜೆಪಿ ಕಾರ್ಯಕರ್ತರು ನನ್ನ ಪರ ಇದ್ದಾರೆ. ವಿಜಯೇಂದ್ರ ಶತ್ರು ಸಂಹಾರ ಯಾಗ ಮಾಡಿಸಲು ಹೋಗಿದ್ದಾನೆ. ನನ್ನ ಗುರು ಶನಿಮಹಾತ್ಮ ನನ್ನ ಜೊತೆ ಇದ್ದಾನೆ. ವಿಜಯೇಂದ್ರ ಸರ್ವಾಧಿಕಾರಿ ಆಗಲು ಹೊರಟಿದ್ದಾನೆ ಅವರ ಅಪ್ಪನ ತರ ಎಂದು ವಾಗ್ದಾಳಿ ನಡೆಸಿದರು.

Ads on article

Advertise in articles 1

advertising articles 2

Advertise under the article