
ದ್ವಿತೀಯ ಪಿಯುಸಿ ಫಲಿತಾಂಶ; 'ಆತೂರು ಆಯಿಷಾ ವಿದ್ಯಾಸಂಸ್ಥೆ'ಯಲ್ಲಿ ಪ್ರಥಮ ಸ್ಥಾನಿಯಾಗಿ ಮೂಡಿ ಬಂದ ಮೈಮೂನಾ ಲವೀಝಾ
Wednesday, April 9, 2025
ಶುಕ್ರಿಯಾ ರಶೀದ್ ಹಾಜಿ ಹಾಗೂ ಹಲೀಮಾ ಬರೀರ ದಂಪತಿಯ ಸುಪುತ್ರಿ ಮೈಮೂನಾ ಲವೀಝಾ ನೂನಾ ರವರು ಪಿಯುಸಿ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮಾತ್ರವಲ್ಲಾ ತಾನು ಶಿಕ್ಷಣ ಪಡೆದ ಸಂಸ್ಥೆಯಾದ ಆತೂರಿನ ಆಯಿಷಾ ಹೆಣ್ಮಕ್ಕಳ ಪದವಿಪೂರ್ವ ವಿದ್ಯಾಸಂಸ್ಥೆಯಲ್ಲಿ 576 ಅತ್ಯಧಿಕ ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನಿಯಾಗಿ ಮೂಡಿ ಬಂದಿದ್ದಾರೆ.