
ದ್ವೀತಿಯ ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ಅಸೀಮಾ ಖದೀಜ
Tuesday, April 8, 2025
ಮೆಡಲಿನ್ ಪಿಯು ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಸೀಮಾ ಖದೀಜ ದ್ವೀತಿಯ ಪಿಯು ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಕಾಲೇಜು ಹಾಗೂ ಕುಟುಂಬಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಇವರು ವಿಜ್ಞಾನ ವಿಭಾಗದ ಪಿಸಿಎಂಬಿಯಲ್ಲಿ ಅಧ್ಯಯನ ನಡೆಸಿದ್ದು ಮುಂದೆ ವೈದ್ಯಕೀಯ ಶಿಕ್ಷಣ ಪಡೆಯುವ ಇಚ್ಛೆಯನ್ನು ಕುಟುಂಬದಲ್ಲಿ ಹಂಚಿಕೊಂಡಿದ್ದಾರೆ.
ಈಕೆ ಮುಲ್ಕಿ ಕೆಂಚನಕೆರೆ ನಿವಾಸಿ ಸ್ಟಿಚ್ ಆರ್ಟ್ ಮಾಲಕ ಮಮ್ತಾಜ್ ಅಲಿ ಹಾಗೂ ಬೀಫಾತಿಮರ ಪುತ್ರಿಯಾಗಿರುತ್ತಾರೆ. ಇವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲೂ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು.