
ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ ಹೆಚ್ಚಳ; ಏ.8ರಿಂದ ಪರಿಷ್ಕೃತ ದರ ಜಾರಿ
Monday, April 7, 2025
ನವದೆಹಲಿ: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ 2 ರೂ. ಏರಿಕೆ ಬಳಿಕ ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಿಸುವುದಾಗಿ (LPG cylinder Prices Hike) ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಈ ಕುರಿತು ಅಧಿಕೃತ ಘೋಷಣೆ ಹೊರಡಿಸಿದ್ದಾರೆ.
ಅನಿಲ ಕಂಪನಿಗಳು ಸಿಲಿಂಡರ್ ಬೆಲೆ ಹೆಚ್ಚಿಸುವುದಾಗಿ ತಿಳಿಸಿವೆ, ಹೀಗಾಗಿ ಪ್ರತಿ ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಳವಾಗಲಿದೆ. ಉಜ್ವಲ (ಪಿಎಂಯುವೈ) ಮತ್ತು ಉಜ್ವಲೇತರ ಗ್ರಾಹಕರಿಗೂ ಬೆಲೆ ಏರಿಕೆ ಅನ್ವಯವಾಗಲಿದೆ. ಆದ್ದರಿಂದ ಇನ್ಮುಂದೆ ಉಜ್ವಲ ಯೋಜನೆಯ 503 ರೂ. ಪಾವತಿಸುತ್ತಿದ್ದ 14.2 ಕೆಜಿ ಸಿಲಿಂಡರ್‌ಗೆ 553 ರೂ. ಹಾಗೂ ಇತರೇ ಗ್ರಾಹಕರು 803 ರೂ. ಪಾವತಿಸುತ್ತಿದ್ದ 14.2 ಕೆಜಿ ಸಿಲಿಂಡರ್‌ಗೆ 853 ರೂ. ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವರು ವಿವರಿಸಿದ್ದಾರೆ.