
ಇಂದ್ರಾಣಿ ಹೊಳೆ ಸಂಪೂರ್ಣ ಕಲುಷಿತ; ಭತ್ತ, ತರಕಾರಿ ಬೆಳೆಗೆ ಹಾನಿ
Monday, April 7, 2025
ಉಡುಪಿ: ಉಡುಪಿಯ ಮಣಿಪಾಲದ ಇಂದ್ರಾಣಿಯಲ್ಲಿ ಹುಟ್ಟಿ ನಗರದಲ್ಲಿ ಸಾಗಿ ಸಮುದ್ರ ಸೇರುವ ಇಂದ್ರಾಣಿ ತೀರ್ಥ ಹೊಳೆ ಸಂಪೂರ್ಣ ಕಲುಷಿತಗೊಂಡಿದೆ. ಉಡುಪಿ ನಗರ ಭಾಗದಲ್ಲಿ ಹೊಳೆ ಗೆ ಕಾಲುವೆ ಮತ್ತು ಚರಂಡಿಗಳು ಅಲ್ಲಲ್ಲಿ ಜೋಡಣೆ ಆಗುವುದರಿಂದ ಶುದ್ಧವಾಗಿ ಹರಿಯುತ್ತಿದ್ದ ಹೊಳೆ ಪೂರ್ಣ ಚರಂಡಿಯಂತಾಗಿದೆ.
ಸುತ್ತಮುತ್ತದ ನೂರಾರು ಮನೆಗಳು, ಅಪಾರ್ಟ್ಮೆಂಟ್ ಗಳು ನಿರ್ಮಾಣವಾಗಿದ್ದು ನಗರದಲ್ಲಿ ಯಾವುದೇ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ಶೌಚಾಲಯದ ನೀರನ್ನು ಹೊಳೆಗೆ ಬಿಡುತ್ತಿದ್ದಾರೆ. ಈ ಬಗ್ಗೆ ಹಲವು ಹೋರಾಟಗಳು ಜನಜಾಗ್ರತಿ ಕಾರ್ಯಕ್ರಮ ನಡೆದರೂ ಸುತ್ತಮುತ್ತ ಮನೆ ಮತ್ತು ಕಟ್ಟಡದ ಮೇಲೆ ಉಡುಪಿ ನಗರಸಭೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಸುತ್ತಮುತ್ತಲ ಬಾವಿ ಕೆರೆಗಳಿಗೆ ಕಲುಷಿತ ನೀರು ಸೇರಿಕೊಂಡು ನೀರು ಬಳಸಲಾಗದ ಸ್ಥಿತಿಯಲ್ಲಿದೆ. ಹೊಳೆಹರಿವ ಸುತ್ತಮುತ್ತಲ ಗದ್ದೆಗಳಲ್ಲೂ ಭತ್ತ, ತರಕಾರಿ ಬೆಳೆ ಕೃಷಿ ನಡೆಸಲಾಗದ ಪರಿಸ್ಥಿತಿ ಇದೆ.