
ಆಸ್ಟ್ರೇಲಿಯಾದಲ್ಲಿ ಮದ್ಯಪಾನ, ಡ್ಯಾನ್ಸ್ ಮಾಡುವಂತೆ ಸಹ ಸಂಸದರಿಂದ ಮುಸ್ಲಿಂ ಸಂಸದೆ ಫಾತಿಮಾಗೆ ಕಿರುಕುಳ
ಆಸ್ಟ್ರೇಲಿಯಾದಲ್ಲಿ ಮುಸ್ಲಿಂ ಸಂಸದೆ ಫಾತಿಮಾ ಪೇಮನ್ಗೆ ಸಹ ಸಂಸದರು ಕಿರುಕುಳ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಸ್ಟ್ರೇಲಿಯಾ ಸಂಸತ್ಗೆ ಹಿಜಾಬ್ ಧರಿಸಿ ಬಂದ ಮುಸ್ಲಿಂ ಸಂಸದೆಯಾಗಿರುವ ಫಾತಿಮಾಗೆ ಟೇಬಲ್ ಮೇಲೆ ಹತ್ತಿ ನೃತ್ಯ ಮಾಡಿ, ಎಣ್ಣೆ ಕುಡಿಯುವಂತೆ ಸಹ ಸಂಸದರು ಕಿರುಕುಳ ಕೊಟ್ಟಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.
ಈ ಕುರಿತು ಎಬಿಸಿ ವರದಿ ಮಾಡಿದೆ, ಸೆನೆಟರ್ ಫಾತಿಮಾ ತಾನು ಮದ್ಯಪಾನ ಮಾಡುವುದಿಲ್ಲ ನಿರಾಕರಿಸಿದ್ದಾಗಿ ಹೇಳಿದ್ದಾರೆ. ಸಮಾರಂಭವೊಂದರಲ್ಲಿ ಮದ್ಯದ ಮತ್ತಿನಲ್ಲಿದ್ದ ಹಿರಿಯ ಸಹೋದ್ಯೋಗಿಯೊಬ್ಬರು ಅನುಚಿತವಾಗಿ ಕಮೆಂಟ್ ಮಾಡಿದ್ದಾರೆ ಎಂದು ಫಾತಿಮಾ ಹೇಳಿದ್ದಾರೆ.
ನಿಮಗೂ ಕೂಡ ಮದ್ಯ ಕೊಡುತ್ತೇವೆ ಅದನ್ನು ಕುಡಿದು ಟೇಬಲ್ ಮೇಲೆ ಡ್ಯಾನ್ಸ್ ಮಾಡಿ ಎಂದು ಕೆಟ್ಟದಾಗಿ ಹೇಳಿದ್ದಾರೆಂದು ವರದಿಯಾಗಿದೆ. ಫಾತಿಮಾ ಅಫ್ಘಾನಿಸ್ತಾನದಲ್ಲಿ ಜನಿಸಿದರು. ಆಸ್ಟ್ರೇಲಿಯಾದ ಸಂಸತ್ತಿನೊಳಗೆ ಹಿಜಾಬ್ ಧರಿಸಿ ಬಂದ ಮೊದಲ ಸಂಸದೆ ಅವರು.
ಸ್ವತಂತ್ರ ಸಂಸದೆ ಫಾತಿಮಾ 2024ರಲ್ಲಿ ಎಡಪಂಥೀಯ ಲೇಬರ್ ಸರ್ಕಾರದಿಂದ ಬೇರ್ಪಟ್ಟರು ಮತ್ತು ಗಾಜಾದಲ್ಲಿ ಪ್ಯಾಲೆಸ್ತೀನಿಯನ್ನರಿಗೆ ಸಹಾಯ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದರು. ಈ ಘಟನೆ ಯಾವಾಗ ನಡೆದಿದೆ ಹಾಗೂ ಆ ಸಂಸದ ಯಾರು ಎನ್ನುವ ಕುರಿತು ಸ್ಪಷ್ಟವಾಗಿಲ್ಲ.
2021ರಲ್ಲಿ ಬ್ರಿಟಾನಿ ಹಿಗ್ಗಿನ್ಸ್ ಎಂಬುವವರು ಸಂಸದೀಯ ಕಚೇರಿಯೊಳಗೆ ಸಹೋದ್ಯೋಗಿಯಿಂದ ಅತ್ಯಾಚಾರಕ್ಕೊಳಗಾಗಿದ್ದರು. ದೇಶಾದ್ಯಂತ ಪ್ರತಿಭಟನೆಗಳನ್ನು ಹುಟ್ಟುಹಾಕಿತ್ತು. ನಂತರ ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಮದ್ಯಪಾನ, ಬೆದರಿಕೆ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳು ಪ್ರಚಲಿತದಲ್ಲಿವೆ.