ಐಪಿಎಲ್ ಫೈನಲ್ ಪಂದ್ಯದಲ್ಲಿ 'ಆಫರೇಷನ್ ಸಿಂಧೂರ್' ಹೀರೋಗಳಿಗೆ ಸನ್ಮಾನ

ಐಪಿಎಲ್ ಫೈನಲ್ ಪಂದ್ಯದಲ್ಲಿ 'ಆಫರೇಷನ್ ಸಿಂಧೂರ್' ಹೀರೋಗಳಿಗೆ ಸನ್ಮಾನ

ನವದೆಹಲಿ: ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜೂನ್ 3 ರಂದು ನಡೆಯಲಿರುವ ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಇತ್ತೀಚಿನ ಆಫರೇಷನ್ ಸಿಂಧೂರ್ ಹಿರೋಗಳನ್ನು ಸನ್ಮಾನಿಸಲು ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ.

ಫೈನಲ್ ಪಂದ್ಯದಲ್ಲಿ ಭಾಗವಹಿಸಲು ಭಾರತೀಯ ಸೇನಾಪಡೆಯ ಮೂರು ವಿಭಾಗಗಳ ಮುಖ್ಯಸ್ಥರಿಗೆ ಆಹ್ವಾನ ನೀಡಿದ್ದೇವೆ. ಆಪರೇಷನ್ ಸಿಂಧೂರ್ ಹಿರೋಗಳನ್ನು ಸನ್ಮಾನಿಸುವುದು ಇದರ ಉದ್ದೇಶವಾಗಿದೆ ಎಂದು ಐಪಿಎಲ್ ಮುಖ್ಯಸ್ಥ ಅರುಣ್ ಧುಮಲ್ ತಿಳಿಸಿರುವುದಾಗಿ ಸುದ್ದಿಸಂಸ್ಥೆ IANS ವರದಿ ಮಾಡಿದೆ.

ಹೈಪ್ರೊಫೈಲ್ ಫೈನಲ್ ಪಂದ್ಯಕ್ಕೆ ಮೂರು ಸೇನೆಗಳ ಮುಖ್ಯಸ್ಥರಾದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಭೂಸೇನೆ ಮುಖ್ಯಸ್ಥರು (COAS) ನೌಕಪಡೆ ಮುಖ್ಯಸ್ಥರು ಮತ್ತು ವಾಯುಪಡೆ ಮುಖ್ಯಸ್ಥರನ್ನು ಬಿಸಿಸಿಐ ಅಧಿಕೃತವಾಗಿ ಆಹ್ವಾನಿಸಿದೆ.

ಪಹಲ್ಗಾಮ್ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಉಂಟಾದ ಹಿನ್ನೆಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಒಂದು ವಾರ ಐಪಿಎಲ್ ಪಂದ್ಯಾವಳಿಯನ್ನು ಸ್ಥಗಿತಗೊಳಿಸಲಾಗಿತ್ತು. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಡಿಯುದ್ದಕ್ಕೂ ಸೇನಾ ಕಾರ್ಯಾಚರಣೆಯಿಂದ ಐಪಿಎಲ್ ಪಂದ್ಯಗಳು ಸ್ಥಗಿತಗೊಂಡಿದ್ದವು. ಕದನ ವಿರಾಮ ಒಪ್ಪಂದದ ಬಳಿಕ ಐಪಿಎಲ್ ಪುನರಾರಂಭವಾಯಿತು. ಇದರಿಂದಾಗಿ ಮೇ 26 ರಂದು ನಿಗದಿಯಾಗಿದ್ದ ಫೈನಲ್ ಪಂದ್ಯವನ್ನು ಜೂನ್ 3ಕ್ಕೆ ಮುಂದೂಡಲಾಯಿತು. ಉಳಿದ ಪಂದ್ಯಗಳನ್ನು ಆರು ಕ್ರೀಡಾಂಗಣಗಳಲ್ಲಿ ಆಡಿಸಲಾಗುತ್ತಿದೆ.

ಐಪಿಎಲ್ ಪುನರಾರಂಭದ ನಂತರ ಶಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟನ್ನು ತೋರಿಸಲು ಬಿಸಿಸಿಐ ಸತತವಾಗಿ ಪ್ರಯತ್ನಗಳನ್ನು ಮಾಡಿದೆ. ಪ್ರತಿ ಪಂದ್ಯದಲ್ಲೂ, ಮೊದಲ ಬಾಲ್‌ಗೂ ಮುನ್ನ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ ಮತ್ತು ಸಶಸ್ತ್ರ ಪಡೆಗಳಿಗೆ 'ಧನ್ಯವಾದಗಳು, ಸಂದೇಶಗಳನ್ನು ಸ್ಟೇಡಿಯಂ ಒಳಗಿರುವ ದೈತ್ಯ ಪರದೆಯ ಮೇಲೆ ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ.

ಈ ಬಾರಿ ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಪ್ಲೇ ಆಫ್‌ಗೆ ಅರ್ಹತೆ ಪಡೆದಿವೆ.

Ads on article

Advertise in articles 1

advertising articles 2

Advertise under the article