ಯಾವುದೇ ಜಾತಿ, ಮತ, ಧರ್ಮಗಳ ಭೇದವಿಲ್ಲದೇ ಜನಪರವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ; ಸೊರಕೆಯಿಂದ ಜನರಿಗೆ ತಪ್ಪು ಸಂದೇಶ: ಶಾಸಕ‌ ಗುರ್ಮೆ ಸುರೇಶ್ ಶೆಟ್ಟಿ ಆಕ್ರೋಶ

ಯಾವುದೇ ಜಾತಿ, ಮತ, ಧರ್ಮಗಳ ಭೇದವಿಲ್ಲದೇ ಜನಪರವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ; ಸೊರಕೆಯಿಂದ ಜನರಿಗೆ ತಪ್ಪು ಸಂದೇಶ: ಶಾಸಕ‌ ಗುರ್ಮೆ ಸುರೇಶ್ ಶೆಟ್ಟಿ ಆಕ್ರೋಶ

ಉಡುಪಿ: ಶಾಸಕನಾಗಿ ಕಳೆದ ಎರಡು ವರ್ಷಗಳಲ್ಲಿ ಸರಕಾರದ ಸೀಮಿತ ಅನುದಾನವನ್ನು ಬಳಸಿಕೊಂಡು ಯಾವುದೇ ಜಾತಿ, ಮತ, ಧರ್ಮಗಳ ಭೇದವಿಲ್ಲದೇ ಜನಪರವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಆದರೆ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಸತ್ಯದರ್ಶನದ ಹೆಸರಿನಲ್ಲಿ ಜನರ ಮುಂದೆ ಸುಳ್ಳು ವಿಚಾರಗಳನ್ನು ಹೇಳುತ್ತಿದ್ದಾರೆ. ಈ ಬಗ್ಗೆ ಅವರಿಗೆ ಸತ್ಯದರ್ಶನಕ್ಕೆ ಬದ್ಧನಿದ್ದೇನೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.

ಕಾಪುವಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ವೈಫಲ್ಯದ ಬಗ್ಗೆ ಅವರದ್ದೇ ಸರಕಾರದ ಸಚಿವರು, ಶಾಸಕರು ಮಾತನಾಡುತ್ತಿದ್ದಾರೆ. ಇಷ್ಟಾದರೂ - ಮಾಜಿ ಸಚಿವರು ಮಾತ್ರ ಕಾಪುವಿನಲ್ಲಿ ಸರಕಾರದ ವೈಫಲ್ಯ ಮುಚ್ಚಿಟ್ಟು, ಜನರಿಗೆ ತಪ್ಪು ಸಂದೇಶ ನೀಡುವ ಪ್ರಯತ್ನದಲ್ಲಿದ್ದಾರೆ. ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕರ ದಿಕ್ಕು ತಪ್ಪಿಸುತ್ತಿರುವುದು ಖಂಡನೀಯ ಎಂದರು.

ಕಾಪು ಕ್ಷೇತ್ರದ ಜನರಿಗೆ ಹಿಂದಿನಿಂದಲೂ ನೆರವು ನೀಡುತ್ತಿದ್ದೇನೆ. ಶಾಸಕನಾಗಿ ವಿವಿಧ ಖಾಸಗಿ ಕಂಪೆನಿಗಳ ಸಿಎಸ್‌ಆರ್ ನಿಧಿಯಿಂದ ಸುಮಾರು 1.50 ಕೋ. ರೂ. ಗಿಂತಲೂ ಅಧಿಕ ಅನುದಾನ ತಂದಿದ್ದೇನೆ. ಕ್ಷೇತ್ರದಲ್ಲಿರುವ ವಸತಿ ರಹಿತರ ಪಟ್ಟಿ ಮಾಡಿ ವಸತಿ ಸಚಿವರಿಗೆ 1000 ಮನೆಗಳ ಪ್ರಸ್ತಾವನೆ ಸಲ್ಲಿಸಿದ್ದೇನೆ. 9/11, 94ಸಿ, 94ಸಿಸಿ, ಡೀಮ್ಸ್ ಫಾರೆಸ್ಟ್ ಸರಕಾರಿ ಶಾಲೆಗಳು, ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿ, ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಹೀಗೆ ಹತ್ತಾರು ವಿಷಯಗಳನ್ನು ಸದನದಲ್ಲೇ ಪ್ರಸ್ತಾವಿಸಿದ್ದೇನೆ ಎಂದು ಹೇಳಿದರು.

ಶಾಸಕನಾದ ಬಳಿಕ ನಾನಾಗಾಲಿ, ನನ್ನ ಮನೆಯವರಾಗಲೀ, ಸಂಬಂಧಿಕರಾಗಲಿ ಯಾವುದೇ ಗುತ್ತಿಗೆ ಪಡೆದುಕೊಂಡಿಲ್ಲ. 5 ಲಕ್ಷ ರೂ.ಗಿಂತ ದೊಡ್ಡ ಮೊತ್ತದ ಕಾಮಗಾರಿಯನ್ನು ಟೆಂಡ‌ರ್ ಮೂಲಕವೇ ಗುತ್ತಿಗೆ ನೀಡಲಾಗುತ್ತದೆ. ಇಷ್ಟಾದರೂ ಮಾಜಿ ಸಚಿವರು ನನ್ನ ಮಗ, ಕುಟುಂಬಸ್ಥರು ಗುತ್ತಿಗೆ ಪಡೆದುಕೊಂಡಿದ್ದಾರೆ. ಸರಕಾರದಿಂದ ಅನುದಾನ ಪಡೆದುಕೊಂಡಿದ್ದಾರೆ ಎಂದು ಕೆಲವು ಸಲ ಹೇಳಿದ್ದಾರೆ. ಈ ಬಗ್ಗೆ ಎಲ್ಲೂರು, ನಂದಿಕೂರು, ಕಾಪು ಮಾರಿಗುಡಿ ಯಲ್ಲಿ ಅಥವಾ ಯಾವುದೇ ಕ್ಷೇತ್ರಕ್ಕೂ ಬಂದು ಸತ್ಯ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಸೊರಕೆ ಸಿದ್ದರಾಗಲಿ ಎಂದು ಸವಾಲು ಹಾಕಿದರು.

Ads on article

Advertise in articles 1

advertising articles 2

Advertise under the article