
'ವಫಾ ಸ್ಕೀಮ್'ನಿಂದ ನಮಗೆ ಮೋಸ ಆಗಿಲ್ಲ; ವೀಡಿಯೊ ಜೊತೆ ಸುಳ್ಳು ಸುದ್ದಿ ವೈರಲ್: ವೀಡಿಯೊ ಮೂಲಕ ಸ್ಪಷ್ಟನೆ ನೀಡಿದ ಯುವಕರು
ಮಂಗಳೂರು: 'ವಫಾ ಎಂಟರ್ ಪ್ರೈಸಸ್'ನ ಲಕ್ಕಿ ಸ್ಕೀಮ್ ಬಗ್ಗೆ ಸುಳ್ಳು ವೀಡಿಯೋವೊಂದು ವೈರಲ್ ಆಗಿದ್ದು, ಇದು ಗ್ರಾಹಕರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ವೈರಲ್ವೀ ಆದ ವೀಡಿಯೊ ತುಣುಕಿನಲ್ಲಿರುವ ಯುವಕರೇ ಸ್ಪಷ್ಟನೆ ನೀಡಿದ್ದು, ಸತ್ಯಾಂಶ ಹೊರಬಿದ್ದಂತಾಗಿದೆ.
'ವಫಾ' ಕಚೇರಿಯಲ್ಲಿ ಕೆಲದಿನಗಳ ಹಿಂದೆ ನಡೆದಿದೆ ಎನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವೀಡಿಯೊ ಜೊತೆ ಸುಳ್ಳು ಸುದ್ದಿ ಕೂಡ ವೈರಲ್ ಆಗಿತ್ತು. ಈ ವೀಡಿಯೋದಲ್ಲಿ 'ವಫಾ' ಕಚೇರಿಯಲ್ಲಿ ಯುವಕರ ಮಧ್ಯೆ ಮಾತಿನ ಚಕಾಮಕಿ ನಡೆಯುತ್ತಿದ್ದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ದುಷ್ಕರ್ಮಿಗಳು, 'ವಫಾ' ಸ್ಕೀಮಿನಲ್ಲಿ ಮೋಸ, ವಂಚನೆ ಆಗುತ್ತಿದ್ದು, ಮಾಲಕ ಅಬ್ದುಲ್ ವಹ್ಹಾಬ್ ಕುಳಾಯಿ ದುಬೈಗೆ ಪರಾರಿಯಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು.
ಆದರೆ ಇದೀಗ 'ವಫಾ' ಕಚೇರಿಯಲ್ಲಿ ನಡೆದ ವೈರಲ್ ಆದ ವೀಡಿಯೋದಲ್ಲಿ ಇರುವ ಯುವಕರಾದ ಮನ್ಸೂರ್, ಅಶ್ರಫ್ ಹಾಗು ಜಲೀಲ್ ಅವರು ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ವಫಾ ಸ್ಕೀಮ್'ನ ಗ್ರಾಹಕರಿಗೆ ಹಣ ಕೊಡುತ್ತಿಲ್ಲ, ಮಾಲಕ ಓಡಿ ಹೋಗಿದ್ದಾರೆ ಎಂದು ಸುಳ್ಳು ಮಾಹಿತಿ ಹಬ್ಬಿಸಿದ್ದಾರೆ. ಇದು ಸಂಪೂರ್ಣ ಸುಳ್ಳು ಸುದ್ದಿ. ನಾವು ವಫಾ ಕಚೇರಿಗೆ ಹೋಗಿದ್ದೇವು. ಅಲ್ಲಿ ಟೋಕನ್ ವಿಚಾರವಾಗಿ ಅಲ್ಲಿನ ಸಿಬ್ಬಂದಿ ಜೊತೆ ಸಣ್ಣ ಮಾತಿನ ಚಕಾಮಕಿ ಆಗಿದೆ. ಅದು ಬಿಟ್ಟರೆ ಬೇರೆ ಏನೂ ಆಗಿಲ್ಲ. ಆದರೆ ಅಲ್ಲಿ ಮಾಡಿದ್ದ ವೀಡಿಯೊವನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಮಾಲಕ ಅಬ್ದುಲ್ ವಹ್ಹಾಬ್ ಕುಳಾಯಿ ದುಬೈಗೆ ಓಡಿ ಹೋಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರ. ವಫಾದಿಂದ ನಮಗೆ ಸಿಗಬೇಕಿದ್ದ ವಸ್ತುಗಳೆಲ್ಲ ಈಗಾಗಲೇ ಸಿಕ್ಕಿದೆ. ಮೋಸವೇನೂ ಆಗಿಲ್ಲ. ವಫಾ ಏಳಿಗೆ ಬಯಸದವರು ಈ ವೀಡಿಯೋ, ಸುಳ್ಳು ಸುದ್ದಿಯನ್ನು ವೈರಲ್ ಮಾಡಿದ್ದಾರೆ ಎಂದು ಯುವಕರು ಖುದ್ದಾಗಿ ವೀಡಿಯೊ ಮಾಡಿ ಸ್ಪಷ್ಟನೆ ನೀಡಿದ್ದಾರೆ.