
ಮಲ್ಪೆ: ನಾಡದೋಣಿ ಮಗುಚಿಬಿದ್ದು ಮೀನುಗಾರ ಮೃತ್ಯು
Friday, July 11, 2025
ಉಡುಪಿ: ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿಬಿದ್ದು ಮೀನುಗಾರ ಮೃತಪಟ್ಟ ಘಟನೆ ಪಡುಕೆರೆಯಲ್ಲಿ ಶುಕ್ರವಾರ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಉದ್ಯಾವರ ಪಿತ್ರೋಡಿ ನಿವಾಸಿ ನೀಲಾಧರ (48) ಎಂದು ಗುರುತಿಸಲಾಗಿದೆ. ಲೀಲಾಧರ್ ಅವರು ಇತರ ಮೀನುಗಾರರೊಂದಿಗೆ ನಾಡದೋಣಿ ಮೀನುಗಾರಿಕೆಗಾಗಿ ತೆರಳಿದ್ದು ಸಮುದ್ರದಲ್ಲಿ ಬಲೆಯನ್ನು ಬೀಸುವ ಸಮಯದಲ್ಲಿ ಸಮುದ್ರದ ಅಲೆಯ ಹೊಡೆತಕ್ಕೆ ನಾಡದೋಣಿ ಮಗುಚಿಬಿದ್ದಿದ್ದು ದೋಣಿಯ ಆಡಿ, ಬಲೆಗಳ ನಡುವೆ ಸಿಲುಕಿ ನೀಲಾಧರ ಅವರು ಮೃತಪಟ್ಟಿರುತ್ತಾರೆ. ನೀಲಾಧರ್ ಅವರ ಮೃತದೇಹ ಸಮುದ್ರದಿಂದ ಮೇಲಕ್ಕೆತ್ತಿದ್ದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ