
ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಅರುಣೋದಯ ವಿಶೇಷ ಶಾಲೆ ವಿದ್ಯಾರ್ಥಿ ನಿಶಾಂತ್ ಗೆ ಚಿನ್ನದ ಪದಕ
Monday, July 21, 2025
ಕಾರ್ಕಳ: ಜುಲ್ಲೈ 14 ರಿಂದ 18ರ ವರೆಗೆ ಸೆಕ್ಟರ್ 23 ಚಂಡೀಗಢದಲ್ಲಿ ಸ್ಪೆಷಲ್ ಒಲಿಂಪಿಕ್ ಭಾರತ್ ಚಂಡಿಗಡ್ ಅಥಿತ್ಯದಲ್ಲಿ ನಡೆದ ಸ್ಪೆಷಲ್ ಒಲಂಪಿಕ್ಸ್ ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಕಾರ್ಕಳ ಪೊಲೀಸ್ ಸ್ಟೇಷನ್ ಹತ್ತಿರ ಜೀವನ್ ವೆಲ್ಫೇರ್ ಟ್ರಸ್ಟ್ (ರಿ.) ಅರುಣೋದಯ ವಿಶೇಷ ಶಾಲಾ ವಿದ್ಯಾರ್ಥಿ ನಿಶಾಂತ ಭಾಗವಹಿಸಿ ಪ್ರಥಮ ಸ್ಥಾನದಲ್ಲಿ ವಿಜೇತನಾಗಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಶಾಲೆಗೆ ಕೀರ್ತಿ ತಂದಿರುವ ನಿಶಾಂತ ಅವರ ಮುಂದಿನ ಜೀವನವು ಉಜ್ವಲವಾಗಲಿ ಎಂದು ಅರುಣೋದಯ ವಿಶೇಷ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ಮಂಡಳಿ, ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.