
ಶಿರ್ವ; ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ಶಿಕ್ಷಕ-ರಕ್ಷಕ ಸಭೆ
ಶಿರ್ವ: ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆ ಶಿರ್ವ ಇಲ್ಲಿನ 2025-26 ರ ಮೊದಲ ಶಿಕ್ಷಕ-ರಕ್ಷಕ ಸಭೆಯು ಅಲ್ ಸುಹೇಮಿ ಸಭಾಂಗಣದಲ್ಲಿ ಶನಿವಾರ ನಡೆಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ಸಭೆ ಆಯೋಜಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮಹಮ್ಮದ್ ಖಾಲಿದ್ ಸಭೆಯನ್ನು ಉದ್ಘಾಟಿಸಿ, ಶಾಲೆಯ ಎಲ್ಲಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಖೈರುನ್ನಿಸ ಮಾತನಾಡಿ, ಮಕ್ಕಳ ಗುಣಮಟ್ಟ, ನೈತಿಕ ಶಿಕ್ಷಣ, ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಪ್ರಗತಿ ವರದಿ, ಹಾಜರಾತಿ, ಶಿಸ್ತಿನ ವಿಚಾರಗಳನ್ನು ಪೋಷಕರೊಂದಿಗೆ ಚರ್ಚಿಸಿದರು.
ಶಾಲಾ ಧರ್ಮ ಗುರುಗಳಾದ ಮೌಲಾನ ಉಬೇದುರ್ರಹ್ಮಾನ್, ಮಕ್ಕಳ ಉತ್ತಮ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರು ಮತ್ತು ಪೋಷಕರ ಪ್ರೋತ್ಸಾಹ ಮಕ್ಕಳಿಗೆ ಅತೀ ಅಗತ್ಯ ಎಂಬುದಾಗಿ ತಿಳಿಸಿದರು. ಪೋಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಶಾಲೆಯ ಅಭಿವೃದ್ಧಿಗೆ ಸಹಕರಿಸುವ ಭರವಸೆ ನೀಡಿದರು.
ಶಾಲಾ ಸಹ ಶಿಕ್ಷಕಿ ಶಿಫಾ ಶೇಖ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅಲ್ಫಿಯ ಸ್ವಾಗತಿಸಿ, ಮನೀಷಾ ಧನ್ಯವಾದಗೈದರು.