ಉಡುಪಿ: ಉಡುಪಿಯ ಕಡೆಕಾರು ಶ್ರೀ ಲಕ್ಷ್ಮೀ ನಾರಾಯಣ ಮಠದಲ್ಲಿ ನಾಗದೇವರಿಗೆ ಪಂಚಾಮೃತ ಸಹಿತ ಸೀಯಾಳ ಅಭಿಷೇಕವನ್ನು ಮಾಡಲಾಯಿತು. ನಂತರ ಅರ್ಚನೆ ಸಹಿತ ವಿಶೇಷ ಹೂವಿನ ಅಲಂಕಾರವನ್ನು ಮಾಡಿ ಕಡೆಕಾರು ಮಠದ ವೇದಮೂರ್ತಿ ಶ್ರೀಶ ಆಚಾರ್ಯ ಅವರು ಮಹಾ ಪೂಜೆಯನ್ನು ಮಾಡಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.