ದುಬೈ ಯಕ್ಷಗಾನದ ಮಾತೃಸಂಸ್ಥೆ ದುಬೈ ಯಕ್ಷ ಮಿತ್ರರಿಂದ ಸೆಪ್ಟೆಂಬರ್ 14ರಂದು 'ಶಬರಿಮಲೆ ಸ್ವಾಮಿ ಅಯ್ಯಪ್ಪ' ಪ್ರಸಂಗ ಪ್ರದರ್ಶನ: ಅದ್ದೂರಿಯಾಗಿ ನಡೆದ ಆಮಂತ್ರಣ ಪತ್ರಿಕೆ-ಟಿಕೆಟ್ ಬಿಡುಗಡೆ

ದುಬೈ ಯಕ್ಷಗಾನದ ಮಾತೃಸಂಸ್ಥೆ ದುಬೈ ಯಕ್ಷ ಮಿತ್ರರಿಂದ ಸೆಪ್ಟೆಂಬರ್ 14ರಂದು 'ಶಬರಿಮಲೆ ಸ್ವಾಮಿ ಅಯ್ಯಪ್ಪ' ಪ್ರಸಂಗ ಪ್ರದರ್ಶನ: ಅದ್ದೂರಿಯಾಗಿ ನಡೆದ ಆಮಂತ್ರಣ ಪತ್ರಿಕೆ-ಟಿಕೆಟ್ ಬಿಡುಗಡೆ

ದುಬೈ: ದುಬೈಯ ಯಕ್ಷಗಾನದ ಮಾತೃಸಂಸ್ಥೆಯಾದ ಯಕ್ಷ ಮಿತ್ರರು ದುಬೈಯ "ಯಕ್ಷ ಸಂಭ್ರಮ - 2025" ಕಾರ್ಯಕ್ರಮದ ಅಂಗವಾಗಿ  ಸಪ್ಟೆಂಬರ್  14ರ  ರವಿವಾರದಂದು ಎಮಿರೆಟ್ಸ್ ಥಿಯೇಟರ್ ಜುಮೇರದಲ್ಲಿ ಪ್ರದರ್ಶನಗೊಳ್ಳಲಿರುವ 22ನೇ ವರ್ಷದ 'ಶಬರಿಮಲೆ ಸ್ವಾಮಿ ಅಯ್ಯಪ್ಪ' ಪ್ರಸಂಗದ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆ  ಸಮಾರಂಭವು ದುಬೈಯ ಒಮೆಗಾ ಹೋಟೆಲ್ ನ ರವಿವಾರದಂದು ಅದ್ದೂರಿಯಾಗಿ ನಡೆಯಿತು.




ಯಕ್ಷಮಿತ್ರರು ಸಂಸ್ಥೆಯ ಬಾಲಕಲಾವಿದರ ಗಣಪತಿ ದೇವರ ಸ್ತುತಿಯೊಂದಿಗೆ ಪ್ರಾರಂಭವಾದ ಸಭಾಕಾರ್ಯಕ್ರಮದಲ್ಲಿ ವಾಸುದೇವ ಭಟ್ ಪುತ್ತಿಗೆ, ಉದ್ಯಮಿ ಹರೀಶ್ ಶೇರಿಗಾರ್, ಸತೀಶ್ ಪೂಜಾರಿ, ಜೇಮ್ಸ್ ಮೆಂಡೋನ್ಸ, ಪದ್ಮರಾಜ್ ಎಕ್ಕಾರ್, ಸತೀಶ್ ಶೆಟ್ಟಿ, ದಯಾ ಕಿರೋಡಿಯನ್, ವಿಶ್ವನಾಥ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 

ದುಬೈಯ ಹಲವು ತುಳು, ಕನ್ನಡ  ಸಂಘಟನೆಗಳ ಪಧಾಧಿಕಾರಿಗಳು, ಬೇರೆ ಬೇರೆ ಸಮುದಾಯದ ಮುಖಂಡರು, ಯಕ್ಷ ಕಲಾಪೋಷಕರು, ಯಕ್ಷ ಕಲಾಭಿಮಾನಿಗಳು ಹಾಗೂ ಸಂಸ್ಥೆಯ ರೂವಾರಿ  ಚಿದಾನಂದ ಪೂಜಾರಿ, ಯಕ್ಷ ಗುರು ಕಿಶೋರ್ ಗಟ್ಟಿ ಉಚ್ಚಿಲ, ಹಿರಿಯ ಸದಸ್ಯರಾದ ಜಯಂತ್ ಶೆಟ್ಟಿ, ಅಶೋಕ್ ತೋನ್ಸೆ, ರವಿ ಕೋಟ್ಯಾನ್, ದಿನೇಶ್ ಪೂಜಾರಿ, ಜಗನ್ನಾಥ್ ಬೆಳ್ಳಾರೆ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ಧು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.  

ಊರಿನ ಪ್ರಸಿದ್ಧ ಭಾಗವತರಾದ  ಬಲಿಪ ಶಿವಶಂಕರ ಭಟ್, ಸಿದ್ಧ ಕಟ್ಟೆ ಭರತ್ ಶೆಟ್ಟಿ, ಚೆಂಡೆ  ಮದ್ದಳೆಯಲ್ಲಿ ಸುಬ್ರಮಣ್ಯ ಭಟ್ ದೇಲಂತಮಜಲು, ಸಮರ್ಥ್ ಉಡುಪ, ಹಾಗೂ ಮುಮ್ಮೇಳದಲ್ಲಿ ಗಣೇಶ್ ಚಂದ್ರ ಮಂಡಲ, ರಕ್ಷಿತ್ ಶೆಟ್ಟಿ ಪಡ್ರೆ, ಅಕ್ಷಯ್ ಭಟ್ ಶಿರ್ತಾಡಿ, ವೇಷಭೂಷಣದಲ್ಲಿ ಜಯಂತ್ ಪೈವಳಿಕೆ, ಪ್ರಸಾದ್ ಕಾಯರ್ ಕಟ್ಟೆ ಮತ್ತು ಯಕ್ಷಮಿತ್ರರು ದುಬೈಯ ಕಲಾವಿದರ ಕೂಡುವಿಕೆಯೊಂದಿಗೆ, ಯಕ್ಷಗುರುಗಳಾದ ಕಿಶೋರ್ ಗಟ್ಟಿ ಇವರ ದಕ್ಷ ನಿರ್ದೇಶನದಲ್ಲಿ ಶಬರಿಮಲೆ ಸ್ವಾಮಿ ಅಯ್ಯಪ್ಪ ಪ್ರಸಂಗವು ಸಂಪನ್ನ ಗೊಳ್ಳಲಿದೆ. ಸಂಸ್ಥೆಯ ಸದಸ್ಯರಾದ ರಿತೇಶ್ ಅಂಚನ್ ಕುಲಶೇಖರ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಸಮರ್ಪಣೆ ಮಾಡಿದರು.
















Ads on article

Advertise in articles 1

advertising articles 2

Advertise under the article