ಸೌಹಾರ್ದ ಸಹಕಾರಿ ಸಂಘಗಳ ಎಸ್. ಎಲ್. ಆರ್. ನಿಧಿಯನ್ನು RBI ಮಾನ್ಯತೆ ಪಡೆದ ಸಹಕಾರಿ ಬ್ಯಾಂಕುಗಳಲ್ಲಿಯೂ ಠೇವಣಿಗೆ ಅವಕಾಶ ನೀಡಿ : ಯಶ್ ಪಾಲ್ ಸುವರ್ಣ

ಸೌಹಾರ್ದ ಸಹಕಾರಿ ಸಂಘಗಳ ಎಸ್. ಎಲ್. ಆರ್. ನಿಧಿಯನ್ನು RBI ಮಾನ್ಯತೆ ಪಡೆದ ಸಹಕಾರಿ ಬ್ಯಾಂಕುಗಳಲ್ಲಿಯೂ ಠೇವಣಿಗೆ ಅವಕಾಶ ನೀಡಿ : ಯಶ್ ಪಾಲ್ ಸುವರ್ಣ

ಬೆಂಗಳೂರು: ಸೌಹಾರ್ದ ಸಹಕಾರಿ ಸಂಘಗಳ ಎಸ್. ಎಲ್. ಆರ್. ನಿಧಿಯನ್ನು RBI ಮಾನ್ಯತೆ ಪಡೆದ ಸಹಕಾರಿ ಬ್ಯಾಂಕುಗಳಲ್ಲಿಯೂ ಠೇವಣಿಗೆ ಅವಕಾಶ ನೀಡುವಂತೆ ವಿಧಾನಸಭೆಯಲ್ಲಿ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

2025ನೇ ಸಾಲಿನ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕದ ಬಗ್ಗೆ ಇಂದು ವಿಧಾನಸಭೆ ಅಧಿವೇಶನದಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಈ ವಿಧೇಯಕದ ಮೂಲಕ ಸೌಹಾರ್ದ ಸಹಕಾರಿ ಸಂಸ್ಥೆಗಳು ತಮ್ಮ  ಶಾಸನಬದ್ಧ ದ್ರವ್ಯಾಸ್ತಿ ನಿಧಿಯನ್ನು  ಅಪೆಕ್ಸ್ ಹಾಗೂ ಡಿ ಸಿ ಸಿ ಬ್ಯಾಂಕುಗಳಲ್ಲಿ ಮಾತ್ರ ಠೇವಣಿ ಇಡಲು ಅವಕಾಶ ನೀಡಿದ್ದು,  ಇದರಿಂದ ಠೇವಣಿಗಳ ಮೇಲೆ ಸ್ಪರ್ಧಾತ್ಮಕ ಬಡ್ಡಿದರಗಳ ಪಡೆಯಲು ಸಾಧ್ಯವಾಗದೆ ಆರ್ಥಿಕ ಹೊರೆಯಾಗಲಿದೆ.

ಅದುದರಿಂದ ಸೌಹಾರ್ದ ಸಹಕಾರಿ ಸಂಘಗಳ   ಹಿತದೃಷ್ಟಿಯಿಂದ ಅಪೆಕ್ಸ್ ಬ್ಯಾಂಕ್ ಹಾಗೂ ಡಿ ಸಿ ಸಿ ಬ್ಯಾಂಕುಗಳ ಸಹಿತ RBI ಮಾನ್ಯತೆ ಪಡೆದ ಪಟ್ಟಣ ಸಹಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಠೇವಣಿ ಇರಿಸಲು ಈ ವಿಧೇಯಕದಲ್ಲಿ ಅವಕಾಶ ನೀಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article