
ಕಾಪು; ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ
ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯಲ್ಲಿ ಶನಿವಾರದಂದು ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನೆ, ವಿವಿಧ ಕ್ಲಬ್ ಗಳ ಉದ್ಘಾಟನೆ ಹಾಗೂ UPSC, NEET JEE,CA ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಗೋಸ್ಕರ ಬೇಕಾದ ಪುಸ್ತಕಗಳ ಅನಾವರಣ ಸಮಾರಂಭವನ್ನು ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಪುಸ್ತಕಗಳನ್ನು ಅನಾವರಣಗೊಳಿಸಿದ ಕಾಪು ತಹಶೀಲ್ದಾರ್ ಡಾ. ಪ್ರತಿಭಾ. ಆರ್. ಮಾತನಾಡಿ, ನಿರಂತರವಾದ ಪ್ರಯತ್ನದ ಮುಖೇನ ವಿದ್ಯೆ ಕೊಟ್ಟ ಸಂಸ್ಥೆಗೂ ಜನ್ಮ ಕೊಟ್ಟ ಪೋಷಕರಿಗೂ ಹೆಮ್ಮೆ ತರುವ ಸಾಧಕರು ವಿದ್ಯಾರ್ಥಿಗಳಾಗಬೇಕೆಂದು ಆಶಿಸಿ ತಮ್ಮ ಸಾಧನಾ ಪಥದ ಅನುಭವಗಳನ್ನು ತೆರೆದಿಟ್ಟರು.
ಶಿರ್ವ ಪೊಲೀಸ್ ಠಾಣಾಧಿಕಾರಿ ಲೋಹಿತ್ ಕುಮಾರ್ ಸಿ.ಎಸ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕರಾವಳಿ ಸಹೋದಯ ಕಾರ್ಯದರ್ಶಿಯಾದ ಬೆಲ್ಮಣ್ ಶ್ರೀ ಲಕ್ಷ್ಮಿಜನಾರ್ಧನ ಶಾಲಾ ಪ್ರಾಂಶುಪಾಲ ಭುಜಂಗ. ಪಿ. ಶೆಟ್ಟಿ. ವಿದ್ಯಾರ್ಥಿಗಳಲ್ಲಿ ಕೌಶಲ್ಯವನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳು ಅವರ ಭವಿಷ್ಯವನ್ನು ಬೆಳಗಿಸುತ್ತದೆ ಎಂದರು.
ಕಣಚೂರು ಫಿಸಿಯೋಥೆರಪಿ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ರೇಷ್ಮಾ ವಿದ್ಯಾರ್ಥಿಗಳ ಆಸಕ್ತಿಯ ಕ್ಷೇತ್ರಗಳನ್ನು ಪ್ರಶ್ನಿಸಿ ತಿಳಿದುಕೊಳ್ಳುವ ಮೂಲಕ ವಿದ್ಯಾರ್ಥಿಗಳ ಮನಸೆಳೆದರು. ಮಂಗಳೂರಿನ ಆಂತರಿಕ ಭದ್ರತ ವಿಭಾಗದ ಅಧಿಕಾರಿ ಅಬ್ದುಲ್ ರಝಾಕ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು. ಸಿವಿಲ್ ಇಂಜಿನಿಯರ್ ಮುಹಮ್ಮದ್ ಸುಲೇಮಾನ್, ಶಿರ್ವ ಪೊಲೀಸ್ ಠಾಣಾ ಹೆಡ್ ಕಾನ್ಸೆಬಲ್ ಪ್ರಕಾಶ್ ಗುಡಿಗಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲರಾದ ಅಕ್ಟರ್ ಅಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಉಪಾಪ್ರಾಂಶುಪಾಲ ಗುರುದತ್ ವಿದ್ಯಾರ್ಥಿ ಸಂಘಕ್ಕೆ ಪತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕಿ ಜ್ಯೋತಿ ವಿದ್ಯಾರ್ಥಿ ನಾಯಕರನ್ನು ಅತಿಥಿಗಳಿಗೆ ಪರಿಚಯಿಸಿದರು. ವಿದ್ಯಾರ್ಥಿಗಳಾದ ಸೋಹ ಹಾಗೂ ತನ್ನೀಮ್ ಪ್ರಾರ್ಥಿಸಿದರು. ಶಿಕ್ಷಕಿಯರಾದ ಝರೀನಾ ಖಾಲಿದ್ ಹಾಗೂ ಲಕ್ಷ್ಮೀದೇವಿ. ಪಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.