ಧರ್ಮಸ್ಥಳ ಪ್ರಕರಣ; ಸಾಮಾಜಿಕ ಮಾಧ್ಯಮಗಳ ಮೇಲೆ ನಿರಂತರ ನಿಗಾ: ಸುಳ್ಳುಸುದ್ದಿ ಹರಡಿದ್ರೆ ಕಠಿಣ ಕ್ರಮ: ಗೃಹ ಸಚಿವ ಡಾ.ಜಿ ಪರಮೇಶ್ವರ್

ಧರ್ಮಸ್ಥಳ ಪ್ರಕರಣ; ಸಾಮಾಜಿಕ ಮಾಧ್ಯಮಗಳ ಮೇಲೆ ನಿರಂತರ ನಿಗಾ: ಸುಳ್ಳುಸುದ್ದಿ ಹರಡಿದ್ರೆ ಕಠಿಣ ಕ್ರಮ: ಗೃಹ ಸಚಿವ ಡಾ.ಜಿ ಪರಮೇಶ್ವರ್

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳ ಮೇಲೆ ನಿರಂತರ ನಿಗಾ ಇರಿಸಲಾಗಿದ್ದು, ಸುಳ್ಳುಸುದ್ದಿ ಹರಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ ಪರಮೇಶ್ವರ್, 'ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಅಂತ್ಯಕ್ರಿಯೆಗೆ ಸಂಬಂಧಿಸಿದ ಪೋಸ್ಟ್‌ಗಳಿಗಾಗಿ ಸರ್ಕಾರ ಸಾಮಾಜಿಕ ಮಾಧ್ಯಮಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ. ಸಮಾಜದಲ್ಲಿ ಭಾವನೆಗಳನ್ನು ಕೆರಳಿಸುವ" ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಕೊಲೆ, ಅತ್ಯಾಚಾರ ಮತ್ತು ಸಾಮೂಹಿಕ ಅಂತ್ಯಕ್ರಿಯೆಗಳ ಆರೋಪಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ಅನ್ನು ರಚಿಸಿದೆ. ಈ ಸಂಬಂಧ ಅನಾಮಧೇಯ ಮಾಜಿ ನೌಕರನೋರ್ವ ನೀಡಿದ ಮಾಹಿತಿ ಮೇರೆಗೆ ಅಸ್ತಿಪಂಜರಗಳ ಹೊರತೆಗೆಯುವ ಕೆಲಸ ಮಾಡಲಾಗುತ್ತದೆ.

1995 ರಿಂದ 2014 ರ ನಡುವೆ ಧರ್ಮಸ್ಥಳದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಶವಗಳನ್ನು ಸೇರಿದಂತೆ ಹಲವಾರು ಶವಗಳನ್ನು ಹೂಳಲಾಗಿತ್ತು ಎಂದು ಅನಾಮದೇಯ ವ್ಯಕ್ತಿ ಹೇಳಿಕೆ ನೀಡಿದ್ದ ಎನ್ನಲಾಗಿದೆ. ಈ ಪೈಕಿ ಕೆಲವು ಶವಗಳ ಮೇಲೆ ಲೈಂಗಿಕ ದೌರ್ಜನ್ಯದ ಲಕ್ಷಣಗಳು ಕಂಡುಬಂದಿದ್ಜವು ಎಂದು ಆರೋಪಿ ಕಾರ್ಮಿಕ ಮ್ಯಾಜಿಸ್ಟ್ರೇಟ್‌ಗೆ ಹೇಳಿಕೆ ನೀಡಿದ್ದಾನೆ.

ಇದೇ ವಿಚಾರವಾಗಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದು, ಇದೇ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಪರೇಮೇಶ್ವರ್, 'ನಾವು ಇದನ್ನು ಗಮನಿಸುತ್ತಿದ್ದೇವೆ. ಅವರು ಯಾವುದೇ ರೀತಿಯಲ್ಲಿ ಸಮಾಜದಲ್ಲಿ ಭಾವನೆಗಳನ್ನು ಪ್ರಚೋದಿಸುತ್ತಿದ್ದರೆ, ನಾವು ಅವುಗಳನ್ನು ತಡೆಯಲು ಪ್ರಯತ್ನಿಸುತ್ತೇವೆ. ನಿಮಗೆ ತಿಳಿದಿರುವಂತೆ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. (ಸಮಾಜದ ಮೇಲೆ) ತಪ್ಪಾಗಿ ಪರಿಣಾಮ ಬೀರಬಹುದಾದ ಅಂತಹ ಪೋಸ್ಟ್‌ಗಳ ಮೇಲೆ ನಾವು ನಿಗಾ ಇಡುತ್ತೇವೆ" ಎಂದು ಪರಮೇಶ್ವರ ಮಾಧ್ಯಮಗಳಿಗೆ ತಿಳಿಸಿದರು.

ಪ್ರಚೋದನಕಾರಿ ವಿಷಯಗಳನ್ನು ಪೋಸ್ಟ್‌ ಮಾಡುವವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧ ಇಲ್ಲದ ಇರುವ ಇಲ್ಲಸಲ್ಲದ ಪೋಸ್ಟ್‌ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣಕ್ಕೆ ಸಂಬಂಧ ಇಲ್ಲದ ಇರುವ ಇಲ್ಲಸಲ್ಲದ ಪೋಸ್ಟ್‌ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುವಾದಿ ಪೋಸ್ಟ್‌ಗಳ ವಿರುದ್ಧದ ಹಿಂದಿನ ಕ್ರಮಗಳನ್ನು ಅವರು ಉಲ್ಲೇಖಿಸಿದರು.

ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಭೇಟಿ

ಇದೇ ವೇಳೆ ಧರ್ಮಸ್ಥಳ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಶುಕ್ರವಾರ ರಾಜ್ಯ ಗೃಹ ಸಚಿವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಕೇಂದ್ರ ಸರ್ಕಾರದ ಹುದ್ದೆಗಳಿಗೆ ಪರಿಗಣಿಸಲಾಗುತ್ತಿರುವ ಮಹಾನಿರ್ದೇಶಕರ ಶ್ರೇಣಿಯ ಅಧಿಕಾರಿಗಳ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡ ನಂತರ ಅವರನ್ನು ಬದಲಾಯಿಸಬಹುದು ಎಂಬ ಊಹಾಪೋಹಗಳ ಎದ್ದಿವೆ. ಇದರ ನಡುವೆಯೇ ಮೊಹಂತಿ ಅವರ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಮೊಹಂತಿ ಪ್ರಸ್ತುತ ಕರ್ನಾಟಕದಲ್ಲಿ ಪೊಲೀಸ್ ಮಹಾನಿರ್ದೇಶಕ (ಆಂತರಿಕ ಭದ್ರತಾ ವಿಭಾಗ) ಆಗಿದ್ದಾರೆ.

ಸಭೆಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಧರ್ಮಸ್ಥಳ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇದು ಅಲ್ಲ, ಏಕೆಂದರೆ ಅದನ್ನು ಚರ್ಚಿಸುವುದು ಸೂಕ್ತವಲ್ಲ ಎಂದು ಸ್ಪಷ್ಟಪಡಿಸಿದರು.

"ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸಲು ಮಹಾನಿರ್ದೇಶಕ ಶ್ರೇಣಿಯ ಅಧಿಕಾರಿಗಳ ಪಟ್ಟಿಯಲ್ಲಿ ಮೋಹಂತಿ ಅವರ ಹೆಸರಿದೆ. ಆದರೆ ಅವರಿಗೆ ತಕ್ಷಣಕ್ಕೆ (ಕೇಂದ್ರದಲ್ಲಿ) ಯಾವುದೇ ಹುದ್ದೆ ನೀಡಲಾಗುವುದಿಲ್ಲ. ಅವರು ಅದರ ಬಗ್ಗೆ ನನಗೆ ತಿಳಿಸಲು ಬಂದಿದ್ದರು. ಅಲ್ಲದೆ, ಸರ್ಕಾರ ನಕಲಿ ಸುದ್ದಿ, ಆನ್‌ಲೈನ್ ಜೂಜಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ತರುತ್ತಿರುವುದರಿಂದ - ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥರಾಗಿರುವ ಮೊಹಂತಿ, ಇಂದು ಸಭೆಗೆ ಮುಂಚಿತವಾಗಿ ಈ ನಿಟ್ಟಿನಲ್ಲಿ ಕೆಲವು ವಿಷಯಗಳ ಬಗ್ಗೆ ನನಗೆ ವಿವರಿಸಲು ಬಂದಿದ್ದರು" ಎಂದು ಅವರು ವಿವರಿಸಿದರು.

ಕೇಂದ್ರ ಸರ್ಕಾರಿ ಹುದ್ದೆಗೆ ಮೊಹಂತಿ ಅವರನ್ನು ರಾಜ್ಯ ಕರ್ತವ್ಯಗಳಿಂದ ಬಿಡುಗಡೆ ಮಾಡುವ ನಿರ್ಧಾರವು ಕರ್ನಾಟಕ ಸರ್ಕಾರದ ಮೇಲಿದ್ದು, ಕೇಂದ್ರದ ಯಾವುದೇ ಅಧಿಕೃತ ವಿನಂತಿಗೆ ನಾವು ಸ್ಪಂದಿಸುತ್ತೇವೆ ಎಂದು ಸಚಿವರು ಹೇಳಿದರು. ಅಲ್ಲದೆ "ಕೇಂದ್ರದಿಂದ ಅಂತಹ ಯಾವುದೇ ಸಂವಹನ ಇನ್ನೂ ಬಂದಿಲ್ಲ. ಇದು ಕೇವಲ ಒಂದು ಎಂಪನೆಲ್‌ಮೆಂಟ್..." ಎಂದು ಅವರು ಹೇಳಿದರು.

Ads on article

Advertise in articles 1

advertising articles 2

Advertise under the article