ಆಧಾರ್, ಪ್ಯಾನ್ ಕಾರ್ಡ್, ವೋಟರ್ ಐಡಿಯು ಭಾರತೀಯ ಪೌರತ್ವ ನಿರ್ಧರಿಸಲ್ಲ; ಬಾಂಬೆ ಹೈಕೋರ್ಟ್

ಆಧಾರ್, ಪ್ಯಾನ್ ಕಾರ್ಡ್, ವೋಟರ್ ಐಡಿಯು ಭಾರತೀಯ ಪೌರತ್ವ ನಿರ್ಧರಿಸಲ್ಲ; ಬಾಂಬೆ ಹೈಕೋರ್ಟ್

ಮುಂಬೈ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯಂತಹ ದಾಖಲೆಗಳನ್ನು ಹೊಂದಿದ್ದರೆ ಮಾತ್ರ ಆ ವ್ಯಕ್ತಿ ಭಾರತದ ಪ್ರಜೆಯಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದೆ.

ಅಕ್ರಮವಾಗಿ ಭಾರತ ಪ್ರವೇಶಿಸಿದ್ದಕ್ಕೆ ಬಂಧಿತರಾಗಿರುವ ಬಾಂಗ್ಲಾದೇಶ ವ್ಯಕ್ತಿಯೊಬ್ಬರಿಗೆ ಜಾಮೀನು ನಿರಾಕರಿಸಿದ ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರ ಪೀಠ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯಂತಹ ದಾಖಲೆಗಳು, ಗುರುತಿನ ಚೀಟಿ ಅಥವಾ ಸೇವೆಗಳನ್ನು ಪಡೆಯಲು ಮಾತ್ರ ಎಂದು ಹೇಳಿದೆ.

"ನಕಲಿ ದಾಖಲೆಗಳೊಂದಿಗೆ" ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಆರೋಪಿಸಲಾದ ವ್ಯಕ್ತಿಯನ್ನು ಇಂದು ವಿಚಾರಣೆಗೆ ಒಳಪಡಿಸಲಾಯಿತು.

ಅಧಿಕೃತ ಪಾಸ್‌ಪೋರ್ಟ್ ಅಥವಾ ಪ್ರಯಾಣ ದಾಖಲೆಗಳಿಲ್ಲದೆ "ಅಕ್ರಮವಾಗಿ" ಭಾರತಕ್ಕೆ ಪ್ರವೇಶಿಸಿದ ಬಾಂಗ್ಲಾದೇಶಿ ಪ್ರಜೆ ಎಂದು ಹೇಳಲಾದ ಬಾಬು ಅಬ್ದುಲ್ ರುಫ್ ಸರ್ದಾರ್ ಅವರಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಸರ್ದಾರ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಭಾರತೀಯ ಪಾಸ್‌ಪೋರ್ಟ್‌ನಂತಹ ನಕಲಿ ಭಾರತೀಯ ದಾಖಲೆಗಳನ್ನು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

1955 ರಲ್ಲಿ, ಸಂಸತ್ತು ಪೌರತ್ವ ಕಾಯ್ದೆಯನ್ನು ಅಂಗೀಕರಿಸಿತು. ಇದು ಪೌರತ್ವವನ್ನು ಪಡೆಯಲು ಶಾಶ್ವತ ಮತ್ತು ಸಂಪೂರ್ಣ ವ್ಯವಸ್ಥೆಯನ್ನು ಸೃಷ್ಟಿಸಿತು ಎಂದು ನ್ಯಾಯಮೂರ್ತಿ ಬೋರ್ಕರ್ ಗಮನಿಸಿದರು.

"ನನ್ನ ಅಭಿಪ್ರಾಯದಲ್ಲಿ, 1955 ರ ಪೌರತ್ವ ಕಾಯ್ದೆ ಇಂದು ಭಾರತದಲ್ಲಿ ರಾಷ್ಟ್ರೀಯತೆಯ ಬಗ್ಗೆ ನಿರ್ಧರಿಸುವ ಪ್ರಮುಖ ಮತ್ತು ನಿಯಂತ್ರಣ ಕಾನೂನಾಗಿದೆ. ಯಾರು ನಾಗರಿಕರಾಗಬಹುದು, ಹೇಗೆ ಪೌರತ್ವವನ್ನು ಪಡೆಯಬಹುದು ಮತ್ತು ಯಾವ ಸಂದರ್ಭಗಳಲ್ಲಿ ಅದನ್ನು ಕಳೆದುಕೊಳ್ಳಬಹುದು ಎಂಬುದನ್ನು ತಿಳಿಸುವ ಕಾಯಿದೆ ಇದು" ಎಂದು ಅವರು ಹೇಳಿದರು.

Ads on article

Advertise in articles 1

advertising articles 2

Advertise under the article