ಆ.15ರಂದು ಮೂಡುಬಿದಿರೆಯಲ್ಲಿ ಮಳೆಕಾಡು, ತೋಪು ಜೈವಿಕ ಕಣಜ ನಿರ್ಮಿತಿ ಅಪೂರ್ವ ರಾಷ್ಟ್ರೀಯ ಕಾರ್ಯಕ್ರಮ

ಆ.15ರಂದು ಮೂಡುಬಿದಿರೆಯಲ್ಲಿ ಮಳೆಕಾಡು, ತೋಪು ಜೈವಿಕ ಕಣಜ ನಿರ್ಮಿತಿ ಅಪೂರ್ವ ರಾಷ್ಟ್ರೀಯ ಕಾರ್ಯಕ್ರಮ

ಉಡುಪಿ: ಜೈನ ಕಾಶಿ ಟ್ರಸ್ಟ್ ಜೈನಮಠ ಮೂಡುಬಿದಿರೆ, ಮೂಡುಬಿದಿರೆ ಆಳ್ವಾಸ್ ಕಾಲೇಜು ಹಾಗೂ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಮಳೆಕಾಡು, ತೋಪು ಜೈವಿಕ ಕಣಜ ನಿರ್ಮಿತಿ ಅಪೂರ್ವ ರಾಷ್ಟ್ರೀಯ ಕಾರ್ಯಕ್ರಮವನ್ನು ಇದೇ ಆ.15ರಂದು ಮೂಡುಬಿದಿರೆ ಸಾವಿರ ಕಂಬ ಬಸದಿಯಲ್ಲಿ ಆಯೋಜಿಸಲಾಗಿದೆ ಎಂದು  ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ. ಎಸ್.ಎ. ಕೃಷ್ಣಯ್ಯ ತಿಳಿಸಿದರು. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಾ. ಸ್ವಸ್ತೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ವಿವೇಕ್ ಆಳ್ವ, ಉದ್ಯಮಿ ವಿಶ್ವನಾಥ್ ಶೆಣೈ, ಪ್ರೊ. ಯು.ಸಿ. ನಿರಂಜನ್, ಡಾ. ಗಣನಾಥ ಎಕ್ಕಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಾಜ ಸೇವಕ ಗಣೇಶರಾಜ್ ಸರಳಬೆಟ್ಟು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article