ಅನನ್ಯಾ ಭಟ್ ನನ್ನ ಮಗಳೇ; ನನ್ನನ್ನು ಕಾರಲ್ಲಿ ಕೂಡಿ ಹಾಕಿ ಬೆದರಿಸಿ ಸುಳ್ಳು ಹೇಳಿಕೆ ಪಡೆಯಲಾಗಿದೆ; ಎಲ್ಲವನ್ನು SIT ಮುಂದೆ ಪ್ರೂವ್ ಮಾಡುತ್ತೇನೆ ಎಂದ ಸುಜಾತ ಭಟ್!‌

ಅನನ್ಯಾ ಭಟ್ ನನ್ನ ಮಗಳೇ; ನನ್ನನ್ನು ಕಾರಲ್ಲಿ ಕೂಡಿ ಹಾಕಿ ಬೆದರಿಸಿ ಸುಳ್ಳು ಹೇಳಿಕೆ ಪಡೆಯಲಾಗಿದೆ; ಎಲ್ಲವನ್ನು SIT ಮುಂದೆ ಪ್ರೂವ್ ಮಾಡುತ್ತೇನೆ ಎಂದ ಸುಜಾತ ಭಟ್!‌

ಬೆಂಗಳೂರು: ಅನನ್ಯಾ ಭಟ್ ನನ್ನ ಮಗಳೇ. ನನಗೆ ಮಗಳು ಇದ್ದಳು. ನನ್ನನ್ನು ಕಾರಲ್ಲಿ ಕೂಡಿ ಹಾಕಿ ನನಗೆ ಮಗಳು ಇಲ್ಲ ಎಂಬ ಹೇಳಿಕೆಯನ್ನು ಯೂಟ್ಯೂಬ್ ಚಾನೆಲ್ ನವರು ಬೆದರಿಸಿ ಪಡೆದಿದ್ದಾರೆ ಎಂದು ಸುಜಾತ ಭಟ್ ಮತ್ತೆ ಉಲ್ಟಾ ಹೊಡೆದಿದ್ದಾರೆ.

ನನಗೆ ಮಗಳು ಇದ್ದಳು. ನಾನು ಅದನ್ನು SIT ಮುಂದೆ ಪ್ರೂವ್ ಮಾಡುತ್ತೇನೆ ಎಂದಿರುವ ಸುಜಾತ ಭಟ್, ಇಂತವರ ಹೆಸರು ಹೇಳಿ ಅಂತ ಲಾಯರ್ ಒಬ್ಬರು ಒತ್ತಾಯ ಮಾಡಿದ್ದರೂ ಎಂದಿದ್ದಾರೆ.

ಶುಕ್ರವಾರ ಸಂಜೆ Insight Rush ಎನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ಸುಜಾತಾ ಭಟ್ ಹೇಳಿರುವ ಅನನ್ಯಾ ಭಟ್ ನಾಪತ್ತೆ ಕಥೆ ಫೇಕ್ ಎಂದು ಸುದ್ದಿ ಪ್ರಸಾರವಾಗಿತ್ತು. ಅದರಲ್ಲಿ 2003ರಲ್ಲಿ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತ ಭಟ್, ಅವರು ನನಗೆ ಅನನ್ಯಾ ಭಟ್ ಎನ್ನುವ ಮಗಳೇ ಇಲ್ಲ. ಅದೆಲ್ಲವೂ ಫೇಕ್ ಎಂದು ತಪ್ಪೊಪ್ಪಿಗೆ ನೀಡಿ ಕ್ಷಮೆ ಕೇಳಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂಚಲನ ಮೂಡಿತ್ತು.

ಆದರೆ ಬೆಂಗಳೂರಿನ ತಮ್ಮ ಮನೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಸುಜಾತಾ ಭಟ್, ಅನನ್ಯಾ ಭಟ್ ನನ್ನ ಮಗಳೇ. ನಾನು ಅದನ್ನು SIT ಮುಂದೆ ಪ್ರೂವ್ ಮಾಡುತ್ತೇನೆ. ಯಾರೋ ಒಬ್ಬ ವಕೀಲರು ಸಹಾಯ ಮಾಡುವ ನೆಪದಲ್ಲಿ ನನ್ನನ್ನು ಕರೆದುಕೊಂಡು ಹೋಗಿ ಬಲವಂತವಾಗಿ ಕಾರಿನಲ್ಲಿ ಕೂರಿಸಿದರು. ಯೂಟ್ಯೂಬ್ ಚಾನೆಲ್ ನವರು ಬೆದರಿಸಿ ನನ್ನಿಂದ ಆ ಹೇಳಿಕೆ ಪಡೆದುಕೊಂಡರು. ನಾನು ಅದರಲ್ಲಿ ಹೇಳಿದ್ದು ಸುಳ್ಳು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಅವರ ಹೆಸರುಗಳನ್ನು ಹೇಳುವಂತೆ ಒತ್ತಡ ಹಾಕಲಾಗಿತ್ತು. ಭಯದಿಂದ ನಾನು ಹಾಗೆ ಹೇಳಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಜಾಗದ ವಿಚಾರವಾಗಿ ನಾನು ಮಾತನಾಡುತ್ತೇನೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸುಜಾತಾ ಭಟ್ ಅವರು ಸ್ಪಷ್ಟಪಡಿಸಿದ್ದಾರೆ.


Ads on article

Advertise in articles 1

advertising articles 2

Advertise under the article