ನನಗೆ ಅನನ್ಯಾ ಭಟ್‌ ಎನ್ನುವ ಮಗಳೇ ಇಲ್ಲ; ಆಸ್ತಿಗೋಸ್ಕರ ಸುಳ್ಳು ಹೇಳಿದ್ದೇನೆ: ತಪ್ಪೊಪ್ಪಿಕೊಂಡ ಸುಜಾತ ಭಟ್‌

ನನಗೆ ಅನನ್ಯಾ ಭಟ್‌ ಎನ್ನುವ ಮಗಳೇ ಇಲ್ಲ; ಆಸ್ತಿಗೋಸ್ಕರ ಸುಳ್ಳು ಹೇಳಿದ್ದೇನೆ: ತಪ್ಪೊಪ್ಪಿಕೊಂಡ ಸುಜಾತ ಭಟ್‌

ಮಂಗಳೂರು: ಧರ್ಮಸ್ಥಳದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಅನನ್ಯಾ ಭಟ್‌  ನಾಪತ್ತೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಆಸ್ತಿಗಾಗಿ ಇಂತಹ ಸುಳ್ಳು ಕತೆ ಕಟ್ಟಿದೆ ಎಂದು ಸುಜಾತ ಭಟ್‌ ಹೇಳಿಕೊಂಡಿದ್ದಾರೆ.

ಅನನ್ಯಾ ಭಟ್​ ಅಂತ ನನಗೆ ಮಗಳೇ ಇರಲಿಲ್ಲ. ಇಷ್ಟು ದಿನ ನಾನು ಸುಳ್ಳು ಹೇಳಿದ್ದೇನೆ. ನನಗೆ ಹೀಗೆ ಸುಳ್ಳು ಹೇಳು ಎಂದು ಕೆಲವರು ಹೇಳಿ ಕೊಟ್ಟರು ಎಂದು ಸಂದರ್ಶನವೊಂದರಲ್ಲಿ ಸುಜಾತ ಬಾಯ್ಬಿಟ್ಟಿದ್ದಾರೆ.  ಅನನ್ಯಾ ಭಟ್​ ಅಂತ ನನಗೆ ಮಗಳೇ ಇರಲಿಲ್ಲ. ಇಷ್ಟು ದಿನ ನಾನು ಸುಳ್ಳು ಹೇಳಿದ್ದೇನೆ. ಕೆಲವರು ನನಗೆ ಹೀಗೆ ಸುಳ್ಳು ಹೇಳು ಅಂತ ಹೇಳಿದ್ದರು. ಅದಕ್ಕೆ ನಾನು ಹೇಳಿದ್ದೇನೆ ಎಂದಿದ್ದಾರೆ.

ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಇನ್ನಿತರರು ಹೇಳಿದ್ದರು. ಆಸ್ತಿ ಸಮಸ್ಯೆಯಿಂದ ಹೀಗೆ ಹೇಳು ಅಂತ ಅವರೆಲ್ಲಾ ಹೇಳಿದ್ದರು. ಅದಕ್ಕೆ ನಾನು ಹೇಳಿಬಿಟ್ಟೆ ಎಂದು ಅವರು ಒಪ್ಪಿಕೊಂಡಿದ್ದಾರೆ.

ನಾನು ದುಡ್ಡಿಗೊಸ್ಕರ ಡಿಮ್ಯಾಂಡ್ ಮಾಡಿಲ್ಲ. ನಾನು ಯಾರು ಕೂಡ ದುಡ್ಡು ಕೊಡ್ತೀನಿ ಅಂತ ಹೇಳಲಿಲ್ಲ. ನಮ್ಮ ಆಸ್ತಿ ಜೈನರಿಗೆ ಕೊಟ್ಟಿದ್ದರು. ಆದರೆ ನನ್ನ ಸಹಿ ಇಲ್ಲದೇ ಆಸ್ತಿಯನ್ನು ಹೇಗೆ ಕೊಟ್ಟಿದ್ದೀರಿ ಅಂತ ಕೇಳಿದೆ. ನನ್ನ ತಾತನ ಆಸ್ತಿ ಅದು ಮೊಮ್ಮಕ್ಕಳಿಗೆ ಸಿಗಬೇಕಿತ್ತು ಅಷ್ಟೇ, ಅದಕ್ಕೆ ಹೀಗೆ ಮಾಡಿದ್ದೇನೆ ಎಂದಿದ್ದಾರೆ.

ನಾನು ಜನರ ಭಾವನೆಗಳ ಜೊತೆಗೆ ಆಟ ಆಡಿಲ್ಲ. ಅವರೆಲ್ಲಾ ಸೇರಿಕೊಂಡು ಪ್ರಚೋದಿಸುವಂತೆ ಮಾಡಿದ್ದರು. ಅನನ್ಯಾ ಭಟ್​ ಅನ್ನೋದೇ ಸುಳ್ಳು. ಧರ್ಮಸ್ಥಳ ದೇವರಿಗೆ ನಾನು ಧಕ್ಕೆ ತಂದಿಲ್ಲ. ನಾನು ಕೇಳುತ್ತಿರುವುದು ನನ್ನ ಆಸ್ತಿ ಅಷ್ಟೇ. ಆಸ್ತಿಗೋಸ್ಕರ ಅನನ್ಯಾ ಭಟ್​ ಕಥೆ ಕಟ್ಟಿದ್ದೇನೆ ಎಂದು ಹೇಳಿದ್ದಾರೆ. 

Ads on article

Advertise in articles 1

advertising articles 2

Advertise under the article