
ಸೆ.14-15ರಂದು ಉಡುಪಿ ತುಳುನಾಡ ಟೈಗರ್ಸ್ ತಂಡದ 5ನೇ ವರ್ಷದ ಹುಲಿವೇಷ ಕುಣಿತ; ಆಮಂತ್ರಣ ಪತ್ರಿಕೆ ಬಿಡುಗಡೆ
Friday, August 22, 2025
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತುಳುನಾಡ ಟೈಗರ್ಸ್ ಉಡುಪಿ ಇದರ ಆಶ್ರಯದಲ್ಲಿ ರಾಜೇಶ್ ಸುವರ್ಣ ಅವರ ನೇತೃತ್ವದಲ್ಲಿ 5ನೇ ವರ್ಷದ ಹುಲಿವೇಷ ಕುಣಿತ ಸೆ.14 ಮತ್ತು 15ರಂದು ನಿಟ್ಟೂರು ತಾಂಗದಗಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ. ಈ ಹುಲಿವೇಷ ಕುಣಿತದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಅಂಬಲಪಾಡಿ ಶ್ರೀ ಮಹಾಕಾಳಿ ಜನಾರ್ದನ ದೇವಸ್ಥಾನದಲ್ಲಿ ಶುಕ್ರವಾರ ನಡೆಯಿತು.
ಈ ಸಂದರ್ಭದಲ್ಲಿ ಮದನ್ ಮಣಿಪಾಲ, ಪ್ರಸನ್ನ ಮೆಸ್ಕಾಂ ಮಣಿಪಾಲ, ಮಂಜುನಾಥ್, ದಿವಾಕರ್ ಪೂಜಾರಿ, ಹರೀಶ್ ಕಕ್ಕುಂಜೆ, ಜಯಂತ್ ಸುವರ್ಣ, ಶೇಖರ್ ಪ್ರಗತಿನಗರ, ರಾಜೇಶ್ ಸುವರ್ಣ, ಅಕ್ಷಯ್ ಕೋಟ್ಯಾನ್, ನಂದೀಶ್, ರಝಿಕ್ ಇಂದಿರಾನಗರ, ಪ್ರಸನ್ನ ಆಚಾರ್ಯ, ಸುನಿಲ್ ಅಂಬಾಗಿಲು, ಸಂದೀಪ್, ಮನೋಜ್ ಮೊದಲಾದವರು ಉಪಸ್ಥಿತರಿದ್ದರು.