ಸುರತ್ಕಲ್‌ನ ಕೃಷ್ಣಾಪುರದಲ್ಲಿ ಆ.15ರಂದು "ವಫಾ ಗೋಲ್ಡ್ ಆ್ಯಂಡ್ ಡೈಮಂಡ್ಸ್"ನ ನೂತನ ಮಳಿಗೆ ಶುಭಾರಂಭ
ಆಭರಣ ಪ್ರಿಯರಿಗೆ ಶುಭ ಸುದ್ದಿ!
ಆಫರ್‌ಗಳ ಮೇಲೆ ಆಫರ್ ನೀಡಲು ವಫಾ ಎಂಟರ್ ಪ್ರೈಸಸ್ ಸಜ್ಜು....
ಸುರತ್ಕಲ್ : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಾಗು ಕಾಸರಗೋಡು ಜಿಲ್ಲೆಯಲ್ಲಿ ಈಗಾಗಲೇ ಮನೆಮಾತಾಗುವ ಜೊತೆಗೆ ಹಲವು ಕುಟುಂಬಗಳ ಕಣ್ಣೀರೊರೆಸಿರುವ ಅಬ್ದುಲ್ ವಹ್ಹಾಬ್ ಕುಳಾಯಿ ಅವರ ಮಾಲಕತ್ವದ ವಫಾ ಎಂಟರ್ ಪ್ರೈಸಸ್'ನ ನೂತನ ಉದ್ದಿಮೆ "ವಫಾ ಗೋಲ್ಡ್ ಆ್ಯಂಡ್ ಡೈಮಂಡ್ಸ್ "ನ ನೂತನ ಮಳಿಗೆಯು ಆ.15ರ ಸಂಜೆ 4 ಗಂಟೆಗೆ ಸುರತ್ಕಲ್‌ನ ಕೃಷ್ಣಾಪುರದಲ್ಲಿರುವ ಎಚ್‌ಎನ್ ಜಿಸಿ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.
ಪೀಠೋಪಕರಣಗಳು ಮತ್ತು ಬೃಹತ್ ವಾಣಿಜ್ಯ ಮತ್ತು ವಸತಿ ಸಮುಚ್ಚಯಗಳ ನಿರ್ಮಾಣದಲ್ಲಿ ಅಂತರ್ ರಾಜ್ಯದಲ್ಲೇ ಜನಪ್ರೀಯತೆ ಪಡೆದಿರುವ ವಫಾ ಎಂಟರ್‌ಪ್ರೈಸಸ್ ಈಗ ಗೋಲ್ಡ್ ಉದ್ಯಮಕ್ಕೂ ಕಾಲಿಟ್ಟಿದ್ದು, ಮಂಗಳೂರು-ಉಡುಪಿ ಭಾಗದ ಚಿನ್ನಾಭರಣ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ.
ಸುರತ್ಕಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ ಮಾಲಕ ಅಬ್ದುಲ್ ವಹ್ಹಾಬ್ ಕುಳಾಯಿ, ಆ.15ರ ಸಂಜೆ 4 ಗಂಟೆಗೆ ನಡೆಯುವ ಶುಭ ಸಮಾರಂಭದಲ್ಲಿ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸೀರ್ ಲಕ್ಕಿ ಸ್ಟಾರ್, ಕೋಸ್ಟಲ್ ವುಡ್ ಜನಪ್ರೀಯ ಕಲಾವಿದ ಅರವಿಂದ್ ಬೋಳಾರ್, ರಾಜೀವ ಗಾಂಧಿ ಯೂನಿವರ್ಸಿಟಿಯ ಹೆಲ್ತ್ ಸೈನ್ಸ್ ನ ಸದಸ್ಯ ಯು.ಟಿ. ಇಫ್ತಿಕಾರ್, ಸ್ಥಳೀಯ ಧಾರ್ಮಿಕ, ಸಾಮಾಜಿಕ, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದರು.
ಸಂಸ್ಥೆಯ ಆಫರ್ ಗಳ ಬಗ್ಗೆ ಮಾಹಿತಿ ನೀಡಿದ ಮಾಧ್ಯಮ ವಕ್ತಾರ ಜುನೈದ್ ಅವರು, ಉದ್ಘಾಟನೆಯಂದು 'ವಿಸಿಟ್ ಆ್ಯಂಡ್ ವಿನ್ ' ಎಂಬ ವಿನೂತನ ಸ್ಪರ್ಧೆ ಆಯೋಜಿಸಲಾಗಿದ್ದು, ಲಕ್ಕಿ ಡ್ರಾ ಮೂಲಕ ಇಬ್ಬರು ಅದೃಷ್ಟಶಾಲಿಗಳಿಗೆ ಚಿನ್ನದ ಉಡುಗೊರೆ ನೀಡಲಾಗುವುದು. ಅದೇ ರೀತಿ ಗ್ರಾಹಕರಿಗಾಗಿ 'ಪರ್ಚೇಸ್ ಆ್ಯಂಡ್ ವಿನ್' ಅದೃಷ್ಟ ಕೂಪನ್ ಮೂಲಕ ಇಬ್ಬರು ಅದೃಷ್ಟಶಾಲಿ ಗ್ರಾಹಕರಿಗೆ ಚಿನ್ನದ ಉಡುಗೊರೆ ನೀಡಲಾಗುವುದು ಎಂದರು.
ಅಲ್ಲದೆ, ಸಂಸ್ಥೆಯಲ್ಲಿ ಆಗಸ್ಟ್ ನಿಂದ ನವೆಂಬರ್ ವರೆಗಿನ ಮೂರು ತಿಂಗಳು ನಿರಂತರ ಆಫರ್ ಗಳಿರಲಿವೆ. ಮದುವೆ ಸಮಾರಂಭಗಳಿಗಾಗಿ ಅಡ್ವಾನ್ಸ್ ಗೋಲ್ಡ್, ಸ್ವರ್ಣ ಬಂಧ ಎಂಬ ವಿಶೇಷ ಆಫರ್ ಗಳನ್ನು ನೀಡಲಾಗುವುದು. 11ತಿಂಗಳ ಕಾಲ ಹೂಡಿಕೆ ಮಾಡಿ ಮೇಕಿಂಗ್ ಚಾರ್ಜ್ ರಹಿತವಾಗಿ ಚಿನ್ನಾಭರಣಗಳನ್ನು ಖರೀದಿಸುವ ಉತ್ತಮ ಯೋಜನೆಯನ್ನೂ ಸಂಸ್ಥೆ ತನ್ನ ಗ್ರಾಹಕರಿಗೆ ನೀಡಲಿದೆ ಎಂದರು.
1200ಚ. ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ನೂತನ ಮಳಿಗೆಯಲ್ಲಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇದೆ. ಉತ್ತಮವಾಗಿ ವಿನ್ಯಾಸಗೊಳಿಸಲಾದ ಮದುವೆಯ ಆಭರಣಗಳು ಮತ್ತು ವಜ್ರದ ಆಭರಣಗಳ, ಆ್ಯಂಟಿಕ್ ಆಭರಣಗಳ ವಿನೂತ ವಿನ್ಯಾಸದ ಸಂಗ್ರಹವು ಸಂಸ್ಥೆಯಲ್ಲಿದೆ ಎಂದು ನುಡಿದರು.
ಸುರತ್ಕಲ್ ಅಬ್ದುಲ್ ವಹ್ಹಾಬ್ ಅವರ ಮಾಲಕತ್ವದ ವಫಾ ಎಂಟರ್‌ಪ್ರೈಸಸ್ ಬೈಕಂಪಾಡಿಯ ಅಂಗರಗುಂಡಿಯಲ್ಲಿ ಆರಂಭಗೊಂಡು ತಮ್ಮ ವ್ಯವಹಾರದೊಂದಿಗೆ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ ಹಾಗೂ ಆರೋಗ್ಯ ಕ್ಷೇತ್ರದಲ್ಲೂ ಸೇವೆಯನ್ನೂ ನೀಡುತ್ತಾ ಬಂದಿದೆ.
ಬೈಕಂಪಾಡಿಯ ಅಂಗರಗುಂಡಿಯಲ್ಲಿ ವಫಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಜೂನ್‌ನಲ್ಲಿ ಸ್ಥಾಪನೆಗೊಂಡಿತು. ತಮ್ಮ ವ್ಯವಹಾರದೊಂದಿಗೆ ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸೇವೆಯನ್ನೂ ನೀಡುತ್ತಾ ಮನೆಮಾತಾಗಿದೆ. ಕರ್ನಾಟಕ-ಕೇರಳದ ಗಡಿಭಾಗವಾದ ತುಮಿನಾಡುವಿನಲ್ಲಿ ಫರ್ನೀಚರ್ ತಯಾರಿಕಾ ಘಟಕ ಹೊಂದಿದ್ದು, ತಮಿಳುನಾಡು, ಕೇರಳ, ಮಂಗಳೂರು, ಉಡುಪಿಯಲ್ಲಿ ತನ್ನ ವಫಾ ಪೀಟೋಪಕರಣಗಳ ಮಳಿಗೆ ಹಾಗೂ ವಫಾ ಬಿಲ್ಡರ್ ಆಂಡ್ ಡೆವಲೆಪ್ಪರ್ ಕಾರ್ಯಾಚರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮ್ಯಾನೇಜರ್ ಅಬ್ದುಲ್ ಖಾದರ್, ವಫಾ ಗೋಲ್ಡ್ ಆ್ಯಂಡ್ ಡೈಮಂಡ್ ಉಸ್ತುವಾರಿ ಮುಹಮ್ಮದ್ ರಾಝಿಕ್ ಉಪಸ್ಥಿತರಿದ್ದರು.
