'ಉಡುಪಿ-ಉಚ್ಚಿಲ ದಸರಾ'ದಲ್ಲಿ ರೋಮಾಂಚನಗೊಳಿಸಿದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ; ಬೆಳಗಾವಿಯ ವಿ.ಬಿ.ಕಿರಣ್ ಮುಡಿಗೆ ಟೈಟಲ್ ಚಾಂಪಿಯನ್ ಪಟ್ಟ!
>> ಉಡುಪಿಯ ಚಿರಾಗ್ ಪೂಜಾರಿಗೆ 'ಬೆಸ್ಟ್ ಪೋಸರ್ ಪ್ರಶಸ್ತಿ'
>> ಉಡುಪಿಯ ಸೂರಜ್ ಸಿಂಗ್ ಗೆ ರನ್ನ ಅಪ್ ಪ್ರಶಸ್ತಿ
ಉಚ್ಚಿಲ: ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ 'ಉಡುಪಿ–ಉಚ್ಚಿಲ ದಸರಾ'ದಲ್ಲಿ ಶನಿವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ದೇಹದಾರ್ಢ್ಯ ಪಟುಗಳು ತಮ್ಮ ಮೈಕಟ್ಟಿನ ಮೂಲಕ ನೆರೆದವರಲ್ಲಿ ರೋಮಾಂಚನ ಮೂಡಿಸಿದರು.
ಸ್ಪರ್ಧಿಗಳು ವಿವಿಧ ಭಂಗಿಯಲ್ಲಿ ತಮ್ಮ ದೇಹ ಪ್ರದರ್ಶಿಸಿದರು. ಈ ವೇಳೆ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಪ್ರೋತ್ಸಾಹ ನೀಡಿದರು. ರಾಜ್ಯದ ಬೆಳಗಾವಿ, ಬೆಂಗಳೂರು, ದಾವಣಗೆರೆ, ಧಾರವಾಡ, ಶಿವಮೊಗ್ಗ ಸೇರಿದಂತೆ ಎಲ್ಲ ಜಿಲ್ಲೆಗಳಿಂದ ಸ್ಪರ್ಧಿಗಳು ಆಗಮಿಸಿ ಸ್ಪರ್ಧಿಸಿದ್ದಾರೆ. 55 ಕೆ.ಜಿ.ಯಿಂದ 80 ಕೆಜಿಗೂ ಮೇಲ್ಪಟ್ಟ ಒಟ್ಟು 6 ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಗೆದ್ದವರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.
ದೇಹದಾರ್ಢ್ಯ ಸ್ಪರ್ಧೆಯ ಟೈಟಲ್ ಚಾಂಪಿಯನ್ ಪಟ್ಟವನ್ನು ಬೆಳಗಾವಿಯ ವಿ.ಬಿ.ಕಿರಣ್ ಪಡೆದುಕೊಂಡರು. ಇವರು ಇತ್ತೀಚಿಗೆ ಥೈಲಾಂಡಿನಲ್ಲಿ ನಡೆದ 57ನೇ ಮಿಸ್ಟರ್ ಏಷಿಯಾ ಸ್ಪರ್ಧೆಯಲ್ಲಿ 30 ವರ್ಷಗಳ ಬಳಿಕ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ತಂದುಕೊಟ್ಟ ಕೀರ್ತಿಗೆ ಪಾತ್ರರಾಗಿದ್ದಾರೆ. ಸ್ಪರ್ಧೆಯಲ್ಲಿ ಬೆಸ್ಟ್ ಪೋಸರ್ ಪ್ರಶಸ್ತಿಯನ್ನು ಚಿರಾಗ್ ಪೂಜಾರಿ ಉಡುಪಿ, ರನ್ನ ಅಪ್ ಪ್ರಶಸ್ತಿಯನ್ನು ಸೂರಜ್ ಸಿಂಗ್ ಉಡುಪಿ ಪಡೆದುಕೊಂಡರು.
ಶಾಲಿನಿ ಜಿ.ಶಂಕರ್ ವೇದಿಕೆಯಲ್ಲಿ ನಡೆದ ಈ ಸ್ಪರ್ಧಾ ಕಾರ್ಯಕ್ರಮವನ್ನು ದಸರಾ ರೂವಾರಿ ನಾಡೋಜ ಜಿ.ಶಂಕರ್ ಉದ್ಘಾಟಿಸಿದರು. ಈ ವೇಳೆ ಕರ್ನಾಟಕ ರಾಜ್ಯ ದೇಹದಾರ್ಢ್ಯ ಅಸೋಸಿಯೇಷನ್'ನ ಅಧ್ಯಕ್ಷ ನೀಲ್ ಕಾಂತ್, ಕಾರ್ಯಾಧ್ಯಕ್ಷ ಬೆಂಗಳೂರಿನ ರಜತ್ ಸಿದ್ದಣ್ಣ, ಜೇಸನ್ ಡಯಾಸ್, ಗಿರೀಶ್ ಕೊಟ್ಟಾರಿ, ವಿಜಯ್ ಸುವರ್ಣ ಬೆಂಗ್ರೆ, ಜಿ.ಡಿ.ಭಟ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮೋಹನ್ ಬೆಂಗ್ರೆ, ಶರಣ್ ಕುಮಾರ್ ಮಟ್ಟು, ಕರ್ನಾಟಕ ರಾಜ್ಯ ದೇಹದಾರ್ಢ್ಯ ಅಸೋಸಿಯೇಷನ್'ನ ಅಧ್ಯಕ್ಷ ನೀಲ್ ಕಾಂತ್, ಅಜಿತ್ ಸಿದ್ದಣ್ಣ, ಜೇಸನ್ ಡಯಾಸ್, ಮುಖೇಶ್, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಮತ್ತಿತರರು ಹಾಜರಿದ್ದರು.
55 ಕೆಜಿ ವಿಭಾಗದಲ್ಲಿ ದಕ್ಷಿಣ ಕನ್ನಡದ ಪ್ರತೋಷ್ ಚಾಂಪಿಯನ್
55 ಕೆಜಿ ವಿಭಾಗ:
1ನೇ ಸ್ಥಾನ: ಪ್ರತೋಷ್, ದ.ಕನ್ನಡ
2ನೇ ಸ್ಥಾನ: ರಾಜು ಮುಚ್ಚನೇಕಾರ್, ಬೆಳಗಾವಿ
3ನೇ ಸ್ಥಾನ: ಕೃಷ್ಣ ಪ್ರಸಾದ್, ಉಡುಪಿ
4ನೇ ಸ್ಥಾನ: ರಾಜೇಶ್ ಕುಲಾಲ್, ದ.ಕನ್ನಡ
5ನೇ ಸ್ಥಾನ: ಯಶವಂತ್, ದ.ಕನ್ನಡ
ವಿಜೇತರಿಗೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಮೋಹನ್ ಬೆಂಗ್ರೆ, ದಸರಾ ಸಮಿತಿಯ ಸತೀಶ್ ಕುಂದರ್, ಬಹರೈನ್ ಮೊಗವೀರ್ಸ್'ನ ಅಧ್ಯಕ್ಷೆ ಶಿಲ್ಪಿ ಸಮಿತ್ ಕುಂದರ್, ಚೇತನ್ ಬೆಂಗ್ರೆ, ಸಂದ್ಯಾ ದೀಪ ಸುನಿಲ್ ಬಹುಮಾನ ನೀಡಿ ಗೌರವಿಸಿದರು.
60 ಕೆಜಿ ವಿಭಾಗದಲ್ಲಿ ಬೆಳಗಾವಿಯ ಸೂರಜ್ ಭಂಡಾರಿ ಚಾಂಪಿಯನ್
1ನೇ ಸ್ಥಾನ: ಸೂರಜ್ ಭಂಡಾರಿ, ಬೆಳಗಾವಿ
2ನೇ ಸ್ಥಾನ: ಸೋಮಶೇಖರ್ ಖಾರ್ವಿ, ಉಡುಪಿ
3ನೇ ಸ್ಥಾನ: ವಿಶ್ವನಾಥ್, ಗದಗ
4ನೇ ಸ್ಥಾನ: ಮಂಜುನಾಥ್ ಕಲಘಟಗಿ, ಬೆಳಗಾವಿ
5ನೇ ಸ್ಥಾನ: ಚಿರಾಗ್ ಪೂಜಾರಿ, ಉಡುಪಿ
ವಿಜೇತರಿಗೆ ಉಡುಪಿ ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್'ನ ಅಧ್ಯಕ್ಷ ಜೇಸನ್ ಡಯಾಸ್, ದಸರಾ ಸಮಿತಿಯ ಗೌತಮ್ ಕೋಡಿಕಲ್, ವಿಜಯ್ ಸುವರ್ಣ, ದಿನೇಶ್ ಎರ್ಮಾಳ್, ಶಿವರಾಂ ಕೋಟ ಅವರು ವಿಜೇತರಿಗೆ ಬಹುಮಾನ ನೀಡಿ ಅಭಿನಂದಸಿದರು.
65 ಕೆಜಿ ವಿಭಾಗದಲ್ಲಿ ದಕ್ಷಿಣ ಕನ್ನಡದ ಧನಂಜಯ್ ಆಚಾರ್ಯ ಚಾಂಪಿಯನ್
1ನೇ ಸ್ಥಾನ: ಧನಂಜಯ್ ಆಚಾರ್ಯ, ದಕ್ಷಿಣ ಕನ್ನಡ
2ನೇ ಸ್ಥಾನ: ಆಕಾಶ್ ಸಾಲಂಕಿ, ಬೆಳಗಾವಿ
3ನೇ ಸ್ಥಾನ: ರೂಪೇಶ್, ದಕ್ಷಿಣ ಕನ್ನಡ
4ನೇ ಸ್ಥಾನ: ಮನೋಹರ್ ಕುಲಾಲ್, ದಕ್ಷಿಣ ಕನ್ನಡ
5ನೇ ಸ್ಥಾನ: ಹರ್ಷಲ್, ದಕ್ಷಿಣ ಕನ್ನಡ
ವಿಜೇತರನ್ನು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಷಾರಾಣಿ, ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಸತ್ಯವೇಲು, ಶಿರ್ವ ಪೊಲೀಸ್ ಠಾಣಾಧಿಕಾರಿ ಲೋಹಿತ್, ಶರಣ್ ಕುಮಾರ್ ಮಟ್ಟು ಬಹುಮಾನ ನೀಡಿ ಗೌರವಿಸಿದರು.
70 ಕೆಜಿ ವಿಭಾಗದಲ್ಲಿ ಬೆಳಗಾವಿಯ ಪ್ರತಾಪ್ ಚಾಂಪಿಯನ್
1ನೇ ಸ್ಥಾನ: ಪ್ರತಾಪ್, ಬೆಳಗಾವಿ
2ನೇ ಸ್ಥಾನ: ರಂಜಿತ್ ಕುಮಾರ್ ಎಂ. ಶಿವಮೊಗ್ಗ
3ನೇ ಸ್ಥಾನ: ರೋನಕ್ ಗವಾಸ್, ಬೆಳಗಾವಿ
4ನೇ ಸ್ಥಾನ: ಚಿರಾಗ್ ಆರ್.ಪೂಜಾರಿ, ಉಡುಪಿ
5ನೇ ಸ್ಥಾನ: ಶಶಾಂಕ್, ದಕ್ಷಿಣ ಕನ್ನಡ
ದಾಮೋದರ ಸುವರ್ಣ ಉಚ್ಚಿಲ, ಮೋಹನ್ ಬೆಂಗ್ರೆ, ಗಿರೀಶ್ ಕೊಟ್ಟಾರಿ, ರಿತೇಶ್ ಸಾಲ್ಯಾನ್, ಶ್ರೇಯಸ್ ಸಾಲ್ಯಾನ್, ನಾರಾಯಣ್ ಕುಂದರ್, ದಿನೇಶ್ ಮೂಳೂರು ಅವರು ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಿದರು.
75 ಕೆಜಿ ವಿಭಾಗದಲ್ಲಿ ಬೆಳಗಾವಿಯ ವೆಂಕಟೇಶ್ ತಹಶೀಲ್ದಾರ್ ಚಾಂಪಿಯನ್
1ನೇ ಸ್ಥಾನ: ವೆಂಕಟೇಶ್ ತಹಶೀಲ್ದಾರ್, ಬೆಳಗಾವಿ
2ನೇ ಸ್ಥಾನ: ವಿನಾಯಕ್ ಪಿ. ಶಿವಮೊಗ್ಗ
3ನೇ ಸ್ಥಾನ: ಸುನಿಲ್ ಬಾತ್ಕಂಡೆ, ಬೆಳಗಾವಿ,
4ನೇ ಸ್ಥಾನ: ಪ್ರಥಮ್ ಪೂಜಾರಿ, ದಕ್ಷಿಣ ಕನ್ನಡ
5ನೇ ಸ್ಥಾನ: ಅಬ್ದುಲ್ ಖರೀಮ್, ಉಡುಪಿ
ವಿಜೇತರಿಗೆ ಪುಂಡಲೀಕ ಹೊಸಬೆಟ್ಟು, ಲೋಕೇಶ್ ಎರ್ಮಾಳ್, ಹೇಮಂತ್ ಹವಲ್, ಸುನಿಲ್ ರಾವತ್, ಉಮಾ ಮಹೇಶ್, ಮನೋಜ್ ಕಾಂಚನ್ ಅವರು ಬಹುಮಾನ ನೀಡಿ ಅಭಿನಂದಿಸಿದರು.
80 ಕೆಜಿ ವಿಭಾಗದಲ್ಲಿ ಉಡುಪಿಯ ಸೂರಜ್ ಸಿಂಗ್ ಚಾಂಪಿಯನ್
1ನೇ ಸ್ಥಾನ: ಸೂರಜ್ ಸಿಂಗ್, ಉಡುಪಿ
2ನೇ ಸ್ಥಾನ: ಸಾಫ್ವಾನ್, ದಕ್ಷಿಣ ಕನ್ನಡ
3ನೇ ಸ್ಥಾನ: ನಿಖಿಲ್ ಕುಮಾರ್, ಉಡುಪಿ
4ನೇ ಸ್ಥಾನ: ಗಜಾನಂದ್, ಬೆಳಗಾವಿ
5ನೇ ಸ್ಥಾನ: ಭವೇಶ್, ಉಡುಪಿ
ವಿಜೇತರಿಗೆ ರತ್ನಾಕರ ಸಾಲ್ಯಾನ್ ಮಲ್ಪೆ, ಗಿರಿಧರ್ ಸುವರ್ಣ, ಯತೀಶ್ ಕಿದಿಯೂರು, ವಿಶ್ವನಾಥ ಕಾಮತ್, ಜೋನ್ಸನ್ ಡಿಸೋಜ ಅವರು ಬಹುಮಾನ ನೀಡಿ ಅಭಿನಂದಿಸಿದರು.
80 ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಬೆಳಗಾವಿಯ ವಿಬಿ ಕಿರಣ್ ಚಾಂಪಿಯನ್
1ನೇ ಸ್ಥಾನ: ವಿಬಿ ಕಿರಣ್, ಬೆಳಗಾವಿ
2ನೇ ಸ್ಥಾನ: RT ಸತ್ಯನಾರಾಯಣ, ದಾವಣಗೆರೆ
3ನೇ ಸ್ಥಾನ: ಗಿರೀಶ್ ಮೇಗೇರಿ, ಧಾರವಾಡ
4ನೇ ಸ್ಥಾನ: ಸಚಿನ್ ಪುತ್ರನ್, ದಕ್ಷಿಣ ಕನ್ನಡ
5ನೇ ಸ್ಥಾನ: ಶ್ರೀವರ್ಧನ ರೆಡ್ಡಿ, ವಿಜಯನಗರ
ಗಣ್ಯರಾದ ವಿನಯ್ ಕರ್ಕೇರ, ರವಿ ಕರ್ಕೇರ ಮಲ್ಪೆ, ರತ್ನಾಕರ ಸಾಲ್ಯಾನ್, ರಾಘವೇಂದ್ರ, ಮಾರುತಿ ಬಂಗೇರ ಅವರು ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಿದರು.











