ಏಷ್ಯಾ ಕಪ್; ಪಾಕನ್ನು ಬಗ್ಗುಬಡಿದ ಭಾರತ: 7 ವಿಕೆಟ್ ಗಳ ಭರ್ಜರಿ ಜಯ

ಏಷ್ಯಾ ಕಪ್; ಪಾಕನ್ನು ಬಗ್ಗುಬಡಿದ ಭಾರತ: 7 ವಿಕೆಟ್ ಗಳ ಭರ್ಜರಿ ಜಯ

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತ್ತು. ಪಾಕ್ ನೀಡಿದ 128 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟಿ ಭಾರತ 3 ವಿಕೆಟ್ ನಷ್ಟಕ್ಕೆ 131 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು.

ಭಾರತ ಪರ ಅಭಿಶೇಷ್ ಶರ್ಮಾ ಮೊದಲ ಎಸೆತದಿಂದಲೇ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು. ಪರಿಣಾಮ ಭಾರತ ಉತ್ತಮ ಓಪನಿಂಗ್ ಪಡೆಯಿತು. 13 ಎಸೆತಗಳಲ್ಲಿ 2 ಸಿಕ್ಸರ್ 4 ಬೌಂಡರಿ ಸೇರಿದಂತೆ 31 ರನ್ ಬಾರಿಸಿ ಸೈಮ್ ಆಯೂಬ್ ಬೌಲಿಂಗ್ ನಲ್ಲಿ ಔಟಾದರು. ಇನ್ನು ಶುಭ್ಮನ್ ಗಿಲ್ ಸಹ ಉತ್ತಮ ಬ್ಯಾಟಿಂಗ್ ಆರಂಭಿಸಿದರು. ಆದರೆ 10 ರನ್ ಗಳಿಸಿದ್ದಾಗ ಸೈಮ್ ಆಯೂಬ್ ಎಸೆತದಲ್ಲಿ ಸ್ಟಂಪ್ ಔಟ್ ಆದರು.

ನಂತರ ಜೊತೆಯಾದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ತಂಡದ ರನ್ ಗತಿ ಹೆಚ್ಚಿಸಿದರು. ಆದರೆ 31 ರನ್ ಗಳಿಸಿದ್ದಾಗ ಸೈಮ್ ಆಯೂಬ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಗೆ ತೆರಳಿದರು. ನಂತರ ಸೂರ್ಯಕುಮಾರ್ ಅಜೇಯ 47 ಹಾಗೂ ಶಿವಂ ದುಬೆ ಅಜೇಯ 10 ಬಾರಿಸಿ ಭಾರತ ತಂಡವನ್ನು ಗೆಲುವಿನ ದಡ ಸೇರಿದರು. ಅಂತಿಮವಾಗಿ ಭಾರತ 15.5 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಬಾರಿಸಿತು. ಪಾಕಿಸ್ತಾನ ಪರ ಸೈಮ್ ಆಯೂಬ್ 3 ವಿಕೆಟ್ ಪಡೆದರು.

ಆರಂಭದಿಂದಲೂ ಪಾಕ್ ಬ್ಯಾಟ್ಸ್ ಮನ್ ಗಳನ್ನು ನಿಯಂತ್ರಿಸುವಲ್ಲಿ ಭಾರತೀಯ ಬೌಲರ್ ಗಳು ಯಶಸ್ವಿಯಾದರು. ಪಾಕ್ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳ ವೈಫಲ್ಯದಿಂದಾಗಿ ತಂಡಕ್ಕೆ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆರಂಭಿಕ ಆಟಗಾರ ಸಯೀಂ ಅಯೂಬ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಮಧ್ಯಮ ಕ್ರಮಾಂಕದ ಬಹುತೇಕ ಬ್ಯಾಟ್ಸ್ ಮನ್ ಗಳು 2 ಅಂಕಿಯ ಸ್ಕೋರ್ ನ್ನೂ ದಾಟಲು ಸಾಧ್ಯವಾಗಲಿಲ್ಲ. ಸಾಹಿಬ್‌ಜಾದಾ ಫರ್ಹಾನ್ 44 ಎಸೆತಗಳಲ್ಲಿ 40 ರನ್ ಗಳಿಸಿದ್ದು ತಂಡದಲ್ಲಿ ಗರಿಷ್ಠ ಸ್ಕೋರ್ ಆಗಿದೆ.

ಭಾರತದ ಬೌಲಿಂಗ್ ವಿಭಾಗದಲ್ಲಿ ಕುಲ್ದೀಪ್ ಯಾದವ್ 18 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಜಸ್ಪ್ರೀತ್ ಬೂಮ್ರಾ, ಅಕ್ಸರ್ ಪಟೇಲ್ ತಲಾ 2 ವಿಕೆಟ್, ಹಾರ್ದಿಕ್ ಪಾಂಡ್ಯ 1 ವಿಕೆಟ್ ಗಳಿಸಿದರು.

Ads on article

Advertise in articles 1

advertising articles 2

Advertise under the article