‘ಉಡುಪಿ ಉಚ್ಚಿಲ ದಸರಾ’ದಲ್ಲಿ 'ಮೊಗವೀರ' ಮಾಸಿಕದ 86ರ ಸಂಭ್ರಮ; ವಿಚಾರಗೋಷ್ಠಿ, ಕವಿ ಗೋಷ್ಠಿ, ಕೃತಿ ಬಿಡುಗಡೆ

‘ಉಡುಪಿ ಉಚ್ಚಿಲ ದಸರಾ’ದಲ್ಲಿ 'ಮೊಗವೀರ' ಮಾಸಿಕದ 86ರ ಸಂಭ್ರಮ; ವಿಚಾರಗೋಷ್ಠಿ, ಕವಿ ಗೋಷ್ಠಿ, ಕೃತಿ ಬಿಡುಗಡೆ

ಉಚ್ಚಿಲ: 86 ವರ್ಷಗಳನ್ನು ಪೂರೈಸುವ ಮೂಲಕ ಎಲ್ಲರನ್ನು ತಲುಪುತ್ತಿರುವ "ಮೊಗವೀರ" ಮಾಸಿಕವು ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ. ಇದನ್ನು ಬೆಂಬಲಿಸುವ ಮೂಲಕ ಪತ್ರಿಕೆಯನ್ನು ಬೆಳೆಸುವುದು ನಮ್ಮ ಜವಾಬ್ದಾರಿಯಾದೆ ಎಂದು ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ.ಶಂಕರ್ ಹೇಳಿದ್ದಾರೆ.

ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ ಉಚ್ಚಿಲ ದಸರಾ’ದಲ್ಲಿ ಸೋಮವಾರ ಉಚ್ಚಿಲ ಮೊಗವೀರ ಭವನದಲ್ಲಿ "ಮೊಗವೀರ" ಮಾಸಿಕದ 86ರ ಸಂಭ್ರಮದ ಅಂಗವಾಗಿ ನಡೆದ ವಿಚಾರಗೋಷ್ಠಿ, ಕವಿ ಗೋಷ್ಠಿ, ಕೃತಿ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಮಾತನಾಡಿ, ಈ ಬಾರಿಯ ದಸರಾ ವಿಭಿನ್ನವಾಗಿ ನಡೆಯುತ್ತಿದ್ದು, ಕೊನೆಯ ಹಂತದಲ್ಲಿದ್ದೇವೆ. ಇದನ್ನು ಇನ್ನಷ್ಟು ಚೆಂದವಾಗಿ ಮುಗಿಸುವ ಜವಾಬ್ದಾರಿ ನಮ್ಮದು ಎಂದರು.

2 ಕೃತಿಗಳನ್ನು ಲೋಕಾರ್ಪಣೆ ಮಾಡಿದ ಗಣೇಶ್ ಕೆ. ಕಾಂಚನ್

ಮುಂಬಯಿ ಸಾಹಿತಿ, ಸಂಶೋಧಕಿ ಡಾ. ಜಿ.ಪಿ. ಕುಸುಮಾ ಅವರ "ಮುಂಬಯಿಯಲ್ಲಿ ಮೊಗವೀರರ ಸಮುದಾಯ" ಮತ್ತು ಉಡುಪಿಯ ಕಾದಂಬರಿಕಾರ್ತಿ ಸೌಮ್ಯಾ ಪುತ್ರನ್ ಅವರ ಕೃತಿ "ಮಳೆ ನಿಂತು ಹೋದ ಮೇಲೆ" ಕಾದಂಬರಿಯನ್ನು ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಗಣೇಶ್ ಕೆ. ಕಾಂಚನ್ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು. ಮೊಗವೀರ ಪತ್ರಿಕೆಯ ಮಾಜಿ ಸಂಪಾದಕ ಜಿ.ಕೆ. ರಮೇಶ್, ಪತ್ರಕರ್ತ ಪ್ರಕಾಶ್ ಸುವರ್ಣ ಕೃತಿ ಪರಿಚಯಿಸಿದರು.

ದಸರಾದಲ್ಲಿ ವಿಚಾರಗೋಷ್ಠಿ

"ಮೀನುಗಾರಿಕೆಯಲ್ಲಿ ಮೊಗವೀರರು ಪ್ರಸಕ್ತ ಸ್ಥಿತಿಗತಿ" ಬಗ್ಗೆ ಖ್ಯಾತ ಚಿಂತಕ ಪ್ರಕಾಶ್ ಮಲ್ಪೆ ವಿಚಾರ ಮಂಡಿಸಿದರು. "ಮೀನುಗಾರರಿಗೆ ಸರಕಾರೀ ಸೌಲಭ್ಯಗಳು" ಈ ಬಗ್ಗೆ ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪಾರ್ಶ್ವನಾಥ್ ಮಾಹಿತಿ ನೀಡಿದರು. ಮೊಗವೀರ ವ್ಯವಸ್ಥಾಪಕ ಮಂಡಳಿಯ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಕಾರ್ಯಾಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ವಿಚಾರಗೋಷ್ಠಿ ನಿರ್ವಹಿಸಿದರು.  

ಕವಿಗೋಷ್ಠಿ: ಸೌಮ್ಯಾ ಪುತ್ರನ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪುಷ್ಪ ಹೊಸಬೆಟ್ಟು, ರೇಖಾ ಸತೀಶ್, ಸೇವಂತಿ ಪಡುಬಿದ್ರಿ, ಡಾ. ಜಿ.ಪಿ. ಕುಸುಮಾ, ಓಂದಾಸ್ ಕಣ್ಣಂಗಾರ್, ಯಶವಂತ ಬೋಳೂರ್, ಯೋಗೀಶ್ ಕಾಂಚನ್, ಉಮೇಶ್ ಎಚ್. ಕರ್ಕೇರ, ಪ್ರಕಾಶ್ ಸುವರ್ಣ, ಅಶೋಕ್ ತೆಕ್ಕಟ್ಟೆ ಕವನ ವಾಚಿಸಿದರು. ಡಾ. ವಿ.ಕೆ. ಯಾದವ್ ಸಸಿಹಿತ್ಲು ಕವಿಗೋಷ್ಠಿ ನಿರ್ವಹಿಸಿದರು. 

ಮಂಡಳಿಯ ಪ್ರಧಾನ ಕಾರ್ಯದರ್ಶಿ ದಿಲೀಪ್ ಮೂಲ್ಕಿ, ದ. ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ದಕ ಮೊಗವೀರ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಉಷಾರಾಣಿ ಬೋಳೂರು, ಮಂಡಳಿಯ ಕೋಶಾಧಿಕಾರಿ ದೇವ್‌ರಾಜ್ ಕುಂದರ್, ಪಾರುಪತ್ಯಗಾರ ಪುರುಷೋತ್ತಮ್ ಕರ್ಕೇರ, ಲಕ್ಷ್ಮಣ ಶ್ರೀಯಾನ್, ಕಾರ್ಯದರ್ಶಿ ದಯಾವತಿ ಸುವರ್ಣ, ಮಾಜಿ ಅಧ್ಯಕ್ಷ ಅಜಿತ್ ಸುವರ್ಣ, ಜಿಲ್ಲಾ ಶಾಖೆಯ ಕಾರ್ಯದರ್ಶಿ ಮೋಹನ್ ಕೋಡಿಕಲ್, ಕೋಶಾಧಿಕಾರಿ ಭರತ್ ಕುಮಾರ್ ಎರ್ಮಾಳ್ ಉಪಸ್ಥಿತರಿದ್ದರು. ಮೊಗವೀರ ಮಾಸಿಕದ ಪ್ರಧಾನ ಸಂಪಾದಕ ಅಶೋಕ್ ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Ads on article

Advertise in articles 1

advertising articles 2

Advertise under the article