
ಕಾರ್ಕಳ: ಮಹಿಳಾ ಸ್ವಾವಲಂಬನೆ-ಮಹಿಳಾ ಸಬಲೀಕರಣ ಬಗ್ಗೆ ಮಾಹಿತಿ ಕಾರ್ಯಕ್ರಮ; ಪತ್ರಕರ್ತ ಮೊಹಮ್ಮದ್ ಶರೀಫ್ ಉದ್ಘಾಟನೆ
ಕಾರ್ಕಳ : ಜೆ ಸಿ ಐ ಇಂಡಿಯಾ ಝೋನ್ 15 ರ ಜೆ ಸಿ ಐ ಬೆಳ್ಮಣ್, ಜೆ ಜೆ ಸಿ ವಿಂಗ್ಸ್ ಮತ್ತು ಮಹಿಳಾ ಜೆ ಸಿ ವಿಂಗ್ 45ನೇ ವರ್ಷದ ಸಂಭ್ರಮದ ಅಂಗವಾಗಿ ಕಾರ್ಕಳದ ಸುಮೇಧಾ ಫ್ಯಾಶನ್ ಇನ್ಸ್ಟಿಟ್ಯೂಟ್ ನ ಸಹಬಾಗಿತ್ವದಲ್ಲಿ ಮಹಿಳಾ ಸಬಲೀಕರಣ ಹಾಗೂ ಮಹಿಳಾ ಸ್ವಾಭಿಮಾನಿ ಬದುಕಿನ ಮುನ್ನುಡಿಗಾಗಿ 100 ತರಬೇತಿಗಳ ಮಹಾಸಂಗಮದ "ತರಬೇತಿಗಳ ಹಬ್ಬ " ಕಾರ್ಯಕ್ರಮವನ್ನು ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಜೆಸಿಐ ರಾಷ್ಟ್ರೀಯ ತರಬೇತಿದಾರ ಸುಧಾಕರ್ ಪೂಜಾರಿ ಮಹಿಳಾ ಸ್ವಾವಲಂಬನೆ ಹಾಗೂ ಮಹಿಳಾ ಸಬಲೀಕರ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜೀವನದಲ್ಲಿ ತಪ್ಪುಗಳು ಸಹಜ ತಪ್ಪಿನಿಂದ ಕಲಿಯುವವರು ಜೀವನದಲ್ಲಿ ಮಹಾನ್ ಸಾಧಕರಾಗುತ್ತಾರೆ. ಅವಕಾಶಗಳು ಜೀವನದಲ್ಲಿ ಮತ್ತೆ ಮತ್ತೆ ಬರುವುದಿಲ್ಲ ಸಿಕ್ಕಿದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದೇ ನಿಜವಾದ ಸಾಮರ್ಥ್ಯ. ನಿಮ್ಮಲ್ಲಿರುವ ಸಾಮರ್ಥ್ಯ ಜನರಿಗೆ ತಲುಪಿಸುವುದು ನಿಮ್ಮನ್ನು ಯಶಸ್ವಿನೆಡೆಗೆಯ ಕೊಂಡೊಯುತ್ತದೆ. ನೀವು ಯಾವ ಕ್ಷೇತ್ರದಲ್ಲಿ ಬೆಳೆಯಬೇಕೆಂಬುವ ಹಂಬಲ, ಹುಮ್ಮಸ್ಸು, ಇದೆಯೋ ಅದೇ ಕ್ಷೇತ್ರದಲ್ಲಿ ಸಮಯ ಹಾಗೂ ಪರಿಶ್ರಮ ತೋರಬೇಕು ಎಂದರು.
ಬೆಳ್ಮಣ್ ಜೆ ಸಿ ಐ ಅಧ್ಯಕ್ಷ ಜೆಸಿ ಪ್ರದೀಪ್ ಶೆಟ್ಟಿ, , ಬೆಳ್ಮಣ್ ಜೆ ಸಿ ಐ ಸದಸ್ಯ ವರ್ಷಿತ್ ಪೂಜಾರಿ, ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ನ ಶಿಕ್ಷಕಿ ಶ್ವೇತಾ ಎಸ್ ಉಪಸ್ಥಿತರಿದ್ದರು.
ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ನ ಸಂಜನಾ ಪ್ರಾರ್ಥಿಸಿದರು ಕಾವ್ಯ ಸ್ವಾಗತಿಸಿದರು. ಸುತೇಜ ಜಿ ಎ ಕಾರ್ಯಕ್ರಮ ನಿರೂಪಿಸಿದರು. ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.