'ಉಡುಪಿ – ಉಚ್ಚಿಲ ದಸರಾ'ದಲ್ಲಿ ಘರ್ಜಿಸಿದ ಹೆಣ್ಣು ಹುಲಿಗಳು! ಅಬ್ಬರದ 'ಪೊಣ್ಣು ಪಿಲಿ ನಲಿಕೆ' ಸ್ಪರ್ಧೆ
ಉಚ್ಚಿಲ: ಮೊಗವೀರ ಮಹಾಜನ ಸಂಘ ಉಚ್ಚಿಲ ಆಶ್ರಯದಲ್ಲಿ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ 'ಉಡುಪಿ – ಉಚ್ಚಿಲ ದಸರಾ'ದಲ್ಲಿ ಶನಿವಾರ 'ಪೊಣ್ಣು ಪಿಲಿ ನಲಿಕೆ' ಹೆಣ್ಣು ಹುಲಿವೇಷ ಸ್ಪರ್ಧೆ ನಡೆಯಿತು.
ಭವ್ಯ ವೇದಿಕೆಯಲ್ಲಿ ಒಂದರ ಮೇಲೊಂದರಂತೆ ಬಂದ ಹೆಣ್ಣು ಹುಲಿಗಳ ತಂಡ ತಾಸೆಯ ಪೆಟ್ಟಿಗೆ ಕುಣಿದು, ತಾವೇನೂ ಗಂಡು ಹುಲಿಗಳಿಗಿಂತ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಪಡಿಸಿದೆ.
ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಿನಿ ಜಿ.ಶಂಕರ್ ವೇದಿಕೆಯಲ್ಲಿ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ವತಿಯಿಂದ ಅಧ್ಯಕ್ಷ, ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಆಯೋಜಿಸಲಾದ ಮೂರನೇ ವರ್ಷದ 'ಪೊಣ್ಣು ಪಿಲಿ ನಲಿಕೆ 2025'ಕ್ಕೆ ಉಚ್ಚಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಇಲ್ಲಿನ ದಸರಾ ಒಂದು ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದೆ. ಇಲ್ಲಿ ನಡೆಯುವಂಥ ಪೂಜೆ, ಪುರಸ್ಕಾರಗಳನ್ನು ನೋಡಿದಾಗ ನಮಗೆ ದೊಡ್ಡ ಹೆಮ್ಮೆ ಆಗುತ್ತಿದೆ. ಕಾಪು ಕ್ಷೇತ್ರದಲ್ಲಿ ಮಹಾಲಕ್ಷ್ಮಿ ದೇವಸ್ಥಾನ ಹಾಗು ಕಾಪು ಮಾರಿಗುಡಿ ಪ್ರಮುಖವಾಗಿ ಗೋಚರವಾಗುವಂಥದ್ದು. ಹಿರಿಯರ ಧಾರ್ಮಿಕ ನಂಬಿಕೆಗಳು, ಮಕ್ಕಳಿಗೆ ಸಂಸ್ಕೃತಿಯ ಒಲವು ಮಹಿಳೆಯರಿಂದ ಉಳಿಸಲು ಇಂತಹ ಕಾರ್ಯಕ್ರಮಗಳು ಪೂರಕ ಎಂದರು.

ಈ ಸಂದರ್ಭ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಭರತನಾಟ್ಯದಲ್ಲಿ ಗಿನ್ನೆಸ್ ದಾಖಲೆ ಮಾಡಿದ ವಿದುಷಿ ದೀಕ್ಷಾ, ಸತೀಶ್ ಕುಂದರ್, ಅಜಿತ್ ಸುವರ್ಣ ಮುಂಬೈ, ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ವಾಸುದೇವ ಸಾಲ್ಯಾನ್, ಅಜಿತ್ ಕೊಡವೂರು, ಬ್ರಹ್ಮಾವರ, ಶ್ಯಾಮಿಲಿ ನವೀನ್, ಅಜಿತ್ ಕೊಡವೂರು, ಶಿಲ್ಪಾ ಜಿ ಸುವರ್ಣ, ನಿರುಪಮ ಪ್ರಸಾದ್ ಶೆಟ್ಟಿ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ, ಸಂಧ್ಯಾ ದೀಪ, ಶಶಿಕಾಂತ್ ಪಡುಬಿದ್ರಿ, ಸಂದ್ಯಾ ದೀಪ ಸುನಿಲ್, ಶರತ್ ಕುಮಾರ್ ಶೆಟ್ಟಿ, ಶಾರಿಕಾ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.
ರ್ಧಾ ವಿಜೇತರಿಗೆ ಬಹುಮಾನ ವಿತರಣೆ
'ಪೊಣ್ಣು ಪಿಲಿ ನಲಿಕೆ 2025'ರ ಸ್ಪರ್ಧೆಯಲ್ಲಿ 20 ಹೆಣ್ಣು ಹುಲಿ ತಂಡಗಳು ಸ್ಪರ್ಧಿಸಿದ್ದು, ಒಂದಕ್ಕಿಂತ ಒಂದು ಹುಲಿಗಳ ತಂಡಗಳು ಅಬ್ಬರದಲ್ಲಿ ಕುಣಿಯುವ ಮೂಲಕ ಕಾದಾಟ ನಡೆಸಿವೆ.
ಗ್ರೂಪ್:
ಪ್ರಥಮ: ದರ್ಪಣ
ದ್ವಿತೀಯ: ನಿಟ್ಟೂರು
ತೃತೀಯ: ಫ್ರೆಂಡ್ಸ್ ಕೊರಂಗ್ರಪಾಡಿ
ವೈಯಕ್ತಿಕ (Individual ) :
ಪ್ರಥಮ: ಸೌಮ್ಯ ಸುರೇಂದ್ರ
ದ್ವಿತೀಯ: ತನಿಷ್ಕಾ ಭಂಡಾರಿ
ತೃತೀಯ: ರಮ್ಯಾ ರೂಪೇಶ್
ವಿಜೇತರಿಗೆ ದಸರಾ ರೂವಾರಿ ನಾಡೋಜ ಜಿ.ಶಂಕರ್ದ ಬಹುಮಾನ ವಿತರಿಸಿದರು. ಉಡುಪಿ ಶಾಸಕ ಯಶಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




