ಒಮಾನ್‌ನ ಸಲಾಲಾದಲ್ಲಿ ಅದ್ದೂರಿಯಾಗಿ ನಡೆದ 'ಪಿರ್ಸಪ್ಪಾಡ್- 2025' ಕಾರ್ಯಕ್ರಮ
ಒಮಾನ್: ಬ್ಯಾರಿ ಸಮುದಾಯದ ವತಿಯಿಂದ ಪಿರ್ಸಪ್ಪಾಡ್ -2025 ಕಾರ್ಯಕ್ರಮವು ಇತ್ತೀಚೆಗೆ ಸಲಾಲಾದಲ್ಲಿ ನಡೆಯಿತು.
ಸಿದ್ದೀಕ್ ಅಹ್ಮದ್ ಮತ್ತು ಉಮರ್ ಫಾರೂಕ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಮತ್ತು ಸುತ್ತಮುತ್ತಲಿನ ಕನ್ನಡಿಗರ ಸಹಿತ ಹಲವು ಮಂದಿ ಜೊತೆಗೂಡಿ ಏಕತೆಯನ್ನು ಪ್ರದರ್ಶಿಸಿದರು.
ಸಲಾಲಾದ ಬ್ಯಾರಿಗಳು ಆಯೋಜಿಸಿದ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯದ, ವಿಭಿನ್ನ ಸಂಸ್ಕೃತಿಯ ಜನರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ದಫ್ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳು, ಕುಟುಂಬಸ್ಥರಿಗೆ ವಿನೋದ ಕಾರ್ಯಕ್ರಮಗಳು ಮತ್ತು ಮಂಗಳೂರಿನ ಪರಂಪರೆಯನ್ನು ತೋರಿಸುವ ಸ್ಟಾಲ್ಗಳು ದಿನವಿಡೀ ಕಾರ್ಯಕ್ರಮಕ್ಕೆ ಚೈತನ್ಯ ತುಂಬಿದವು. ಪರಸ್ಪರ ಪರಿಚಯಿಸಿಕೊಂಡು, ಸ್ನೇಹ ಹಸ್ತ ಚಾಚಿ ಪಿರ್ಸಪ್ಪಾಡ್ ನ ಹಿರಿಮೆ ಹೆಚ್ಚಿಸಿದರು.
ಮುಂದಿನ ದಿನಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಉತ್ಸವ, ಆರೋಗ್ಯ ಜಾಗೃತಿ ಯೋಜನೆಗಳು ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವುದಾಗಿ ಆಯೋಜಕರು ಕಾರ್ಯಕ್ರಮದಲ್ಲಿ ಪ್ರಕಟಿಸಿದರು.