ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್: ಚೊಕ್ಕಬೆಟ್ಟು ಜಾಮಿಯಾ ಆಂಗ್ಲ ಮಾಧ್ಯಮ ಶಾಲೆಗೆ ಪ್ರಶಸ್ತಿ
ಮಂಗಳೂರು: ಶೊರೀನ್-ರಿಯೂ ಕರಾಟೆ ಅಸೋಸಿಯೇಶನ್ ವತಿಯಿಂದ ಮೂಡುಬಿದಿರೆಯ ಎಂ.ಕೆ.ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಹಯೋಗದಲ್ಲಿ ಮೂಡುಬಿದಿರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ಇತ್ತೀಚೆಗೆ ನಡೆದ 8ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚೊಕ್ಕಬೆಟ್ಟು ಜಾಮಿಯಾ ಆಂಗ್ಲ ಮಾಧ್ಯಮ ಶಾಲೆಯ 7 ಮಂದಿ ವಿದ್ಯಾರ್ಥಿಗಳು ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಮೂರು ಚಿನ್ನ ಸಹಿತ ಒಟ್ಟು 9 ಪದಕ ಗಳಿಸಿದ್ದಾರೆ.
ಗ್ರೀನ್ ಬೆಲ್ಟ್‌ನ 14 ವರ್ಷದ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಮುಹಮ್ಮದ್ ರಯಾನ್ ಹುಸೈನ್ ಚಿನ್ನದ ಪದಕ ಕಟಾ ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ. ಬ್ಲೂಬೆಲ್ಟ್‌ನ 12 ವರ್ಷ ಕೆಳಗಿನ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಅಯಾನ್ ಮುಹಿಯುದ್ದೀನ್ ಚಿನ್ನದ ಪದಕ ಕಟಾ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ ಮತ್ತು ಹಳದಿ ಬೆಲ್ಟ್‌ನ 15 ವರ್ಷ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಮುಹಮ್ಮದ್ ಮುಜಮ್ಮಿಲ್ ಚಿನ್ನದ ಪದಕ ಗಳಿಸಿದ್ದಾರೆ.
ಆರೆಂಜ್ ಬೆಲ್ಟಿನ 14 ವರ್ಷ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಜೀವನ್ ಬೆಳ್ಳಿಯ ಪದಕ ಗಳಿಸಿದ್ದಾರೆ. ಮತ್ತು ಗ್ರೀನ್ ಬೆಲ್ಟ್ 13 ವರ್ಷ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಮೊಹಮ್ಮದ್ ಇಬ್ರಾಹಿಂ ಅಝೀನ್ ಫಹದ್ ಕಂಚಿನ ಪದಕ ಪಡೆದಿದ್ದಾರೆ. ಆರೆಂಜ್ ಬೆಲ್ಟಿನ 9 ವರ್ಷ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಮೊಹಮ್ಮದ್ ಅರ್ಮಾನ್ ಕಂಚಿನ ಪದಕ ಗಳಿಸಿದ್ದಾರೆ. ವೈಟ್ ಬೆಲ್ಟ್ 12 ವರ್ಷ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಅಬೂಬಕ್ಕರ್ ಮೊಹಮ್ಮದ್ ಮಹ್ರೂಫ್ ಕಂಚಿನ ಪದಕ ಪಡೆದಿದ್ದಾರೆ.
ಚೊಕ್ಕಬೆಟ್ಟು ಜಾಮಿಯಾ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಸಾಧನೆಗೆ ಶಾಲಾ ಶಿಕ್ಷಕರು ಊರಿನ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರಿಗೆ ಶಿಹಾನ್ ಸರ್ಫ್ರಾಜ್ ಅಬ್ದುಲ್ ಖಾದರ್ ಹಾಗೂ ಮಹಮ್ಮದ್ ಸಾಕೀರ್ ಮೂಡಬಿದ್ರೆ ಕರಾಟೆ ತರಬೇತಿಯನ್ನು ನೀಡಿದ್ದಾರೆ.