ಕಣ್ಣೂರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ರಾಜೋತ್ಸವ-ಶಿಕ್ಷಕ ರಕ್ಷಕ ಸಭೆ
ಕಣ್ಣೂರು ಆಂಗ್ಲ ಮಾಧ್ಯಮ ಶಾಲೆ ಮತ್ತು ಮಹಿಳಾ PU ಕಾಲೇಜು ಅಡ್ಯಾರ್ ಕಣ್ಣೂರು ಮಂಗಳೂರು ಇದರ ವತಿಯಿಂದ 79ನೇ ಕನ್ನಡ ರಾಜ್ಯೋತ್ಸವ ಮತ್ತು ಶಿಕ್ಷಕ ರಕ್ಷಕ ಸಭೆ ಕಾರ್ಯಕ್ರಮವು ಶನಿವಾರ ಕಣ್ಣೂರು ಜಾಗ್ವಾರ್ ಶೊ ರೂಮಿನ ಸಭಾಂಗಣದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಉಮರಬ್ಬ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಭಾರತ್ ಇನ್ಫ್ರಾಟೆಕ್ ಮಂಗಳೂರು ಇದರ ಚಾರ್ಮೇನ್ ಆದ S M ಮುಸ್ತಫಾ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಷ್ಟೀಯ ತರಬೇತುದಾರರಾದ P S ಕೃಷ್ಣ ಮೋಹನ್ ಮಕ್ಕಳ ಕಲಿಕೆಯ ಬಗ್ಗೆ ಪೋಷಕರು ಬಹಳ ಗಮನ ವಹಿಸಬೇಕು ಎಂದು ಹೇಳಿ ಪೋಷಕರಿಗೆ ಉತ್ತಮ ತರಬೇತಿಯನ್ನು ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ M A ಗಫೂರು ಕಾರ್ಯಕ್ರಮದ ಕುರಿತು ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ಹಾಜಿ ಸಿತಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ಕನ್ನಡ ರಾಜ್ಯೋತ್ಸವ ಅಂಗವಾಗಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬಳಿಕ 2024-25 ನೇ ಸಾಲಿನ 10 ನೇ ತರಗತಿ ಮತ್ತು PUC ಯಲ್ಲಿ ಅಧಿಕ ಅಂಕ ಗಳಿಸಿ ಶಾಲೆಗೆ ಕೀರ್ತಿಯನ್ನು ತಂದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯೋಧ್ಯಾಪಾಧ್ಯಾಯಿನಿ ಸಂಶಾದ್, ಸಹಾಯಕ ಮುಖ್ಯೋಧ್ಯಾಪಾಧ್ಯಾಯಿನಿ ವಿಷಲಾಕ್ಷ್ಮಿ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕರಾದ ರಿಯಾಝ್ ಅಹ್ಮದ್ ಸ್ವಾಗತಿಸಿ, ವಿದ್ಯಾರ್ಥಿ ಝೈಫ್ ಕಿರಾಅತ್ ಪಠಿಸಿದರು. ಮುಖ್ಯ ಅಧ್ಯಾಪಕಿಯಾದ ಸಂಶಾದ್ ವಂದಿಸಿ, ಇರ್ಫಾನ್ ಅಸ್ಲಮಿ ಕಾರ್ಯಕ್ರಮ ನಿರೂಪಿಸಿದರು.

