ಉಚ್ಚಿಲದಲ್ಲಿ ಬಸ್ಸಿನಿಂದ ಕೆಳಗೆಬಿದ್ದು ವ್ಯಕ್ತಿಯ ಸಾವು
Friday, November 21, 2025
ಉಚ್ಚಿಲ: ಉಚ್ಚಿಲ ಪೇಟೆಯಲ್ಲಿ ವ್ಯಕ್ತಿಯೋರ್ವ ಖಾಸಗಿ ಬಸ್ಸಿನಿಂದ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಶೈಲೇಶ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ವಿಶಾಲ್ ಬಸ್ಸಿನಿಂದ ರಾತ್ರಿ ಸುಮಾರು 9.15ರ ಸುಮಾರಿಗೆ ಶೈಲೇಶ್ ಉಚ್ಚಿಲ ಪೇಟೆಯ ಬಸ್ ನಿಲ್ದಾಣದ ಬಳಿ ಇಳಿಯಲು ಮುಂದಾದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಬಸ್ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ ಶೈಲೇಶ್ ಇಳಿಯಲು ಮುಂದಾಗಿದ್ದು, ಈ ವೇಳೆ ಬಸ್ಸಿನಿಂದ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರ ಏಟು ಆಗಿದೆ ಎನ್ನಲಾಗಿದೆ. ಈ ವೇಳೆ ಘಟನಾ ಸ್ಥಳಕ್ಕೆ ಧಾವಿಸಿದ ಸಾಮಾಜಿಕ ಕಾರ್ಯಕರ್ತ ಜಲಾಲುದ್ದೀನ್ ಜಲ್ಲು ಉಚ್ಚಿಲ ಅವರು ಉಚ್ಚಿಲ SDPI ಅಂಬ್ಯುಲೆನ್ಸ್ ಚಾಲಕ ಹಮೀದ್ ಅವರ ಸಹಾಯದಿಂದ ಉಡುಪಿಯ ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.