ಅಡ್ಯಾರ್ ಕಣ್ಣೂರು ಅಲ್ ಬಿರ್ರ್ ಸ್ಕೂಲ್ ನಲ್ಲಿ ಅದ್ದೂರಿಯಾಗಿ ನಡೆದ ವಾರ್ಷಿಕ ಕಾರ್ಯಕ್ರಮ
ಮಂಗಳೂರು ಅಡ್ಯಾರ್ ಕಣ್ಣೂರು ಅಲ್ ಬಿರ್ರ್ ಸ್ಕೂಲ್ ವಾರ್ಷಿಕೋತ್ಸವ ಕಾರ್ಯಕ್ರಮವು ಶನಿವಾರ ಸಂಜೆ 4ಗಂಟೆಗೆ ಶಾಲಾ ಮೈದಾನದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕಣ್ಣೂರ್ ಆಂಗ್ಲ ಮಾಧ್ಯಮ ಶಾಲೆಯ ಛೇರ್ಮನ್ ಜನಾಬ್ S ಮುಹಮ್ಮದ್ ವಹಿಸಿದ್ದರು. ಜನಾಬ್ ಅಬ್ದುಲ್ಲ ಮೋನ್(Managing partner - EURO Group, Qatar) ಕಾರ್ಯಕ್ರಮನ್ನು ಉದ್ಘಾಟಿಸಿದರು. ಜನಾಬ್ ರಫೀಕ್ ಮಾಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. ಸಂಸ್ಥೆಯ ಸಂಚಾಲಕರಾದ ರಿಯಾಝ್ ಅಹ್ಮದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜನಾಬ್ ಸೊಫಿಕಾನ್ ಖಲಂದರ್ ಆಸಿಫ್ (Managing Director, Home Plus, Mangalore) ಬಹುಮಾನ ವಿತರಣೆ ಮಾಡಿ ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದರು.
ನಂತರ ಅಲ್ ಬಿರ್ರ್ ಪುಟಾಣಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಸದಸ್ಯರಾದ ಜನಾಬ್ ಹಮೀದ್ ಕೆ., ಮುಖ್ಯೋಪಾಧ್ಯಾಯಿನಿ ಸಂಶಾದ್, ಪ್ರಾಂಶುಪಾಲರಾದ ವಿಶಾಲಾಕ್ಷಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಹಾಗೂ ಅಲ್ ಬಿರ್ರ್ ಶಾಲೆಯ ಸಂಚಾಲಕರಾದ ಸಿತಾರ್ ಅಬ್ದುಲ್ ಮಜೀದ್ ಹಾಜಿ ಸ್ವಾಗತಿಸಿ, ಇರ್ಫಾನ್ ಅಸ್ಲಮಿ ಕಾರ್ಯಕ್ರಮ ನಿರೂಪಿಸಿದರು.


