ಹೆಜಮಾಡಿ: ಮನೆಗೆ ನುಗ್ಗಿದ ಗೂಡ್ಸ್ ಟೆಂಪೋ; ಮನೆಯಲ್ಲಿದ್ದವರು ಪಾರು
Wednesday, December 31, 2025
ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಟೆಂಪೋವೊಂದು ಮನೆಗೆ ಡಿಕ್ಕಿ ಹೊಡೆದ ಘಟನೆ ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬಳಿ ರಾ.ಹೆ. 66ರಲ್ಲಿ ಸಂಭವಿಸಿದೆ.
ಪಡುಬಿದ್ರಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಗೂಡ್ಸ್ ಟೆಂಪೋ, ಹೆಜಮಾಡಿಯಲ್ಲಿ ನಿಯಂತ್ರಣ ತಪ್ಪಿ ಇಸ್ಮಾಯಿಲ್ ಮಂಜತೋಟ ಎಂಬವರ ಮನೆಗೆ ಗುದ್ದಿದೆ. ಈ ಸಂದರ್ಭ ಮನೆಯವರು ಮತ್ತು ಗೂಡ್ಸ್ ಚಾಲಕ, ಸಣ್ಣ ಪುಟ್ಟ ಗಾಯಗೊಂದಿಗೆ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಹೆಜಮಾಡಿ ಟೋಲ್ ಸಿಬ್ಬಂದಿ ಮತ್ತು ಪಡುಬಿದ್ರಿ ಪೋಲೀಸರು ಸ್ಥಳೀಯರ ಸಹಕಾರದಲ್ಲಿ ಗೂಡ್ಸ್ ವಾಹನವನ್ನು ತೆರವುಗೊಳಿಸಿದ್ದಾರೆ.

