ಮಣಿಪಾಲ; ಅಲ್ ಇಬಾದ ಇಂಡಿಯನ್ ಸ್ಕೂಲ್'ನಲ್ಲಿ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಉದ್ಯಮಿ ಝಕರಿಯ ಜೋಕಟ್ಟೆಗೆ ಸನ್ಮಾನ
Saturday, December 13, 2025
ಮಣಿಪಾಲ: ಇಲ್ಲಿನ ಪೆರಂಪಳ್ಳಿಯ ಅಲ್ ಇಬಾದ ಇಂಡಿಯನ್ ಸ್ಕೂಲ್'ನಲ್ಲಿ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಸೌದಿ ಅರೇಬಿಯಾದ ಖ್ಯಾತ ಉದ್ಯಮಿ ಝಕರಿಯ ಜೋಕಟ್ಟೆ ಅವರನ್ನು ಇತ್ತೀಚೆಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಸ್ಕೂಲಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಕೂಲ್'ನ ಚೇರ್ಮ್ಯಾನ್(Founder & Chairman of Zaid Academy) ಹಮ್ಮದ್ ಬಷೀರ್ ಇದಿನಬ್ಬ ಸಾಗರ್ ಅವರು ಝಕರಿಯ ಜೋಕಟ್ಟೆ ಅವರಿಗೆ ಸ್ಮರಣಿಕೆ, ಹೂಗುಚ್ಛ ನೀಡಿ ಸನ್ಮಾನಿಸಿ, ಶುಭ ಹಾರೈಸಿದರು.
ಈ ವೇಳೆ ಸ್ಕೂಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಝಕರಿಯ ಜೋಕಟ್ಟೆ ಅವರು, ತಾನು ನಡೆದು ಬಂದ ದಾರಿ ಹಾಗು ಉದ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಬಗ್ಗೆ ವಿವರಿಸಿದರು. ಜೊತೆಗೆ ತನಗೆ ಮಾಡಿರುವ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಲೀಂ ಉಡುಪಿ, ಸಲೀಂ ಸಾಗರ್, ಸ್ಕೂಲ್'ನ ಪ್ರಿನ್ಸಿಪಾಲ್ ಜುವೇರಿಯ ಹಯಾತ್, ಸ್ಕೂಲ್'ನ ಟ್ರಾನ್ಸ್ಪೋರ್ಟ್ ಮುಖ್ಯಸ್ಥ ಇಬ್ರಾಹಿಂ ಫೈಸಲ್ ಉಪಸ್ಥಿತರಿದ್ದರು.



