ಮುಸಲ್ಮಾನರು ಚುನಾವಣೆಯಲ್ಲಿ ಸೋಲುವುದಿಲ್ಲ, ಅವರನ್ನು ಸೋಲಿಸಲಾಗುತ್ತೆ: ಮಹೇಶ್ವರಾನಂದ ಸ್ವಾಮೀಜಿ

ಮುಸಲ್ಮಾನರು ಚುನಾವಣೆಯಲ್ಲಿ ಸೋಲುವುದಿಲ್ಲ, ಅವರನ್ನು ಸೋಲಿಸಲಾಗುತ್ತೆ: ಮಹೇಶ್ವರಾನಂದ ಸ್ವಾಮೀಜಿ

ಬಾಗಲಕೋಟೆ: ದೇಶದ ಮೂವತ್ತು ಕೋಟಿ ಮುಸ್ಲಿಮರನ್ನ ಬಿಟ್ಟು ಭವಿಷ್ಯದ ಭಾರತ ನಿರ್ಮಾಣ ಸಾಧ್ಯವಿಲ್ಲ. ರಾಜ್ಯದಲ್ಲಿ ಒಂದು ಕೋಟಿ ಜನ ಮುಸ್ಲಿಂ ಜನಸಂಖ್ಯೆ ಇದ್ದರೂ ಕೇವಲ 10 ಜನ ಶಾಸಕರಿದ್ದಾರೆ. ಮುಸಲ್ಮಾನರು ಚುನಾವಣೆಯಲ್ಲಿ ಸೋಲುವುದಿಲ್ಲ, ಅವರನ್ನು ಸೋಲಿಸಲಾಗುತ್ತೆ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಹೇಶ್ವರಾನಂದ ಸ್ವಾಮೀಜಿ ಹೇಳಿದ್ದಾರೆ.

ರಾಜ್ಯದಲ್ಲಿ ಲಿಂಗಾಯತರು ಕೇವಲ 66 ಲಕ್ಷ ಜನ ಇದ್ದಾರೆ. ಆದರೆ ಅವರ ಸಮುದಾಯದ 59 ಜನ ಶಾಸಕರಿದ್ದಾರೆ. 60 ಲಕ್ಷ ಜನಸಂಖ್ಯೆಯಿರುವ ಒಕ್ಕಲಿಗರ 46 ಜನ ಎಂಎಲ್​​ಎಗಳಿದ್ದಾರೆ. 15 ಲಕ್ಷ ಇರುವ ಬ್ರಾಹ್ಮಣ ಸಮುದಾಯದ 10 ಶಾಸಕರಿದ್ದಾರೆ. ಆದ್ರೆ ಮುಸ್ಲಿಂ ಸಮುದಾಯದಿಂದ ಈ ಸಂಖ್ಯೆ ಬಹಳ ಕಡಿಮೆ ಇದೆ. ಚುನಾವಣೆ ಸಂದರ್ಭದಲ್ಲಿ ಕೇವಲ 15 ಜನ ಮುಸಲ್ಮಾನರಿಗೆ ಕಾಂಗ್ರೆಸ್ ಪಕ್ಷ‌ ಟಿಕೆಟ್ ಕೊಡುತ್ತೆ. ಅದರಲ್ಲಿ 9 ಜನ ಗೆಲ್ತಾರೆ 6 ಜನ ಸೋಲ್ತಾರೆ. ಆದರೆ ಮುಂದಿನ ಬಾರಿ ಮುಸ್ಲಿಂ ಸಮುದಾಯದ 30 ಜನ ಶಾಸಕರಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದ್ದಾರೆ.

ಗಂಗಾವತಿಯಲ್ಲಿ ಇಕ್ಬಾಲ್‌ ಅನ್ಸಾರಿ ಸೋಲುವುದಿಲ್ಲ, ಅವರನ್ನ ಸೋಲಿಸಲಾಗುತ್ತೆ. ವಿಜಯಪುರದಲ್ಲೂ ಹಮೀದ ಮುಷರಫಿ ಅವರ ಸ್ಥಿತಿ ಇದೇ ಆಗಿದೆ. ಆದರೆ ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ ಆಣೆಗೂ ಹಮೀದ ಮುಷರಫಿ ಅವರನ್ನು ಸೋಲಿಸುವವರನ್ನ ಮುಂದಿನ ಬಾರಿ ನಾವು ಸೋಲಿಸುತ್ತೇವೆ ಎಂದು ಹೇಳುವ ಮೂಲಕ ಸ್ವಾಮೀಜಿ ಪರೋಕ್ಷವಾಗಿ ಯತ್ನಾಳ್​​ರನ್ನ ಬೆಂಬಲಿಸುವ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಟಿಪ್ಪು ಸುಲ್ತಾನ್​​ ಮತ್ತು ಅಬ್ದುಲ್​​ ಕಲಾಂ ಅವರ ಸಾಧನೆ ಬಗ್ಗೆಯೂ ಈ ವೇಳೆ ಉಲ್ಲೇಖಿಸಿರುವ ಅವರು, ಟಿಪ್ಪು ಸುಲ್ತಾನ್​​ ಕುರಿತು ನಟ ಶಾರುಖ್ ಖಾನ್ ಸಿನೆಮಾ ಮಾಡಬೇಕೆಂದೂ ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article