ಬಹರೈನ್‌; ಡಿ.19ರಂದು ಉಡುಪಿ ಪ್ರಜ್ಞಾನಂ ತಂಡದಿಂದ 'ಹೆಜ್ಜಗೊಲಿದ ಬೆಳಕು' ನಾಟಕ ಪ್ರದರ್ಶನ

ಬಹರೈನ್‌; ಡಿ.19ರಂದು ಉಡುಪಿ ಪ್ರಜ್ಞಾನಂ ತಂಡದಿಂದ 'ಹೆಜ್ಜಗೊಲಿದ ಬೆಳಕು' ನಾಟಕ ಪ್ರದರ್ಶನ

ಬಹರೈನ್: ಬಹರೈನ್‌ನ ಕನ್ನಡ ಸಂಘದ ಆಶ್ರಯದಲ್ಲಿ ಉಡುಪಿ ಪ್ರಜ್ಞಾನಂ ಟ್ರಸ್ಟ್ (ರಿ)ನಿರ್ಮಿಸಿದ ವಿಶಿಷ್ಟ ಏಕವ್ಯಕ್ತಿ ನಾಟಕ "ಹೆಜ್ಜೆ ಗೊಲಿದ ಬೆಳಕು" ಬಹರೈನ್‌ನ ಮನಾಮಾದ ಕನ್ನಡ ಭವನದಲ್ಲಿ ಡಿಸೆಂಬರ್ 19ರ ಶುಕ್ರವಾರದಂದು  ಅದ್ದೂರಿಯಾಗಿ ಪ್ರದರ್ಶನಗೊಳ್ಳಲಿದೆ. 

ನೃತ್ಯ ವಿದುಷಿ ಸಂಸ್ಕೃತಿ ಅಭಿನಯದ ಈ ನಾಟಕ ಅಮೋಘ ನೃತ್ಯ ಮತ್ತು ಅಭಿನಯ, ಮಾತುಗಾರಿಕೆ ಮೂಲಕ ಎಲ್ಲರ ಮೆಚ್ಚುಗೆ  ಗಳಿಸಿದ್ದು,  ರಂಗಕರ್ಮಿ ಗಣೇಶ್ ರಾವ್ ಎಲ್ಲೂರು ಈ ನಾಟಕ ನಿರ್ದೇಶನ ನೀಡಿದ್ದಾರೆ. ಬೆಳಕು ವಿನ್ಯಾಸ ಶಂಕರ್ ಕೆ ಶಿವಮೊಗ್ಗ ಮಾಡಿದ್ದು, ಸಂಗೀತ ನಿರ್ವಹಣೆ ಸಂಹಿತಾ ಜಿಪಿ ಮಾಡಲಿದ್ದಾರೆ. ಖ್ಯಾತ ಸಾಹಿತಿ ಸುಧಾ ಆಡುಕಳ ನಾಟಕ ರಚನೆ ಮಾಡಿದ್ದಾರೆ. 

ಬಹರೈನ್‌ ಕನ್ನಡ ಸಂಘ ಮತ್ತು ಬಹರೈನ್‌ನಲ್ಲಿ ಉದ್ಯೋಗಿಗಳಾಗಿದ್ದು ಪ್ರಜ್ಞಾನಂ ಟ್ರಸ್ಟ್ ಬಂಧುಗಳಾಗಿರುವ ಸುರೇಶ್ ಸಿದ್ದಕೆರೆ, ಶ್ರೀನಾಥ ಚೆಕ್ಕೆ, ಕವಿತಾ ಸುರೇಶ, ರಾಮ ಪ್ರಸಾದ್ ಅಮ್ಮೆನಡ್ಕ ಈ ನಾಟಕ ಪ್ರದರ್ಶನ  ಪ್ರಾಯೋಜಿಸಿದ್ದಾರೆ ಎಂದು ಉಡುಪಿ ಪ್ರಜ್ಞಾನಂ ಟ್ರಸ್ಟ್  ಅಧ್ಯಕ್ಷ ಜಿ ಪಿ ಪ್ರಭಾಕರ್ ತುಮರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article